ರಣವೀರ್ ಸಿಂಗ್ ನ ಡಬಲ್ ಪೋನಿಟೇಲ್ ವೈರಲ್ : ಹೇರ್ ಸ್ಟೈಲ್​ ಗೆ ಫಿದಾ ಆದ ಫ್ಯಾನ್ಸ್!

‘ಆರ್​ಸಿ 15’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮುಹೂರ್ತದ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ರಣವೀರ್ ಸಿಂಗ್ ವಿಭಿನ್ನ ಹೇರ್ ಸ್ಟೈಲ್​ನಿಂದ ಗಮನ ಸೆಳೆದಿದ್ದಾರೆ. ಈ ಡಿಫ್ರೆಂಟ್ ಹೇರ್ ಸ್ಟೈಲ್ ಗೆ ರಣವೀರ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಪ್ರತಿ ಬಾರಿಯು ವಿಶಿಷ್ಟ ಶೈಲಿಯಲ್ಲಿ ಉಡುಗೆ ತೊಟ್ಟು ಮಿಂಚುವ ರಣವೀರ್ ಈ ಬಾರಿ ಹೇರ್ ಸ್ಟೈಲ್ ಮೂಲಕ ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಂದಹಾಗೆ ಉಪೇಂದ್ರ ಅವರು ತಮ್ಮ ಉಪ್ಪಿ 2 ಮೊದಲಾದ ಚಿತ್ರಗಳಲ್ಲಿ ಮಾಡಿದ್ದ ಹೇರ್ ಸ್ಟೈಲ್​ನಂತೆಯೇ ರಣವೀರ್ ಕೂಡಾ ಸ್ಟೈಲ್ ಮಾಡಿದ್ದರು. ರಣವೀರ್ ಜುಟ್ಟಿನ ಸಂಖ್ಯೆ ಉಪ್ಪಿಗಿಂತಲೂ ಕಡಿಮೆ ಇದ್ದರೂ ಭಾರೀ ವೈರಲ್ ಆಗಿದೆ.

https://twitter.com/Mughizh_/status/1435641360472690692?ref_src=twsrc%5Etfw%7Ctwcamp%5Etweetembed%7Ctwterm%5E1435641360472690692%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fentertainment%2Franveer-singhs-double-ponytail-goes-viral-memes-incoming-on-twitter-2534800

ಕೆಲ ನೆಟ್ಟಿಗರು ರಣವೀರ್ ಹೇರ್ ಸ್ಟೈಲ್ ಗೆ ಅಪಾಹಾಸ್ಯ ಮಾಡಿದ್ದಾರೆ.

https://www.instagram.com/ranveersingh/?utm_source=ig_embed&ig_rid=9c4bea43-5ff5-4597-9123-c639f05de2aa

ಈ ಚಿತ್ರದಲ್ಲಿ ರಾಮ್ ಚರಣ್, ಕಿಯಾರಾ ಮೊದಲಾದವರು ತಮ್ಮ ಕ್ಲಾಸ್ ಲುಕ್​ನಿಂದ ಗಮನ ಸೆಳೆದಿದ್ದಾರೆ. ಸಂಪೂರ್ಣ ಸೂಟು ಬೂಟಿನ ಸ್ಟೈಲ್​ನಲ್ಲಿ ಮಿಂಚುತ್ತಿರುವ ಅವರು, ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಶಂಕರ್ ನಿರ್ದೇಶನದ ಚಿತ್ರವೆಂದರೆ ಅಲ್ಲಿ ತಂತ್ರಜ್ಞರೂ ಕೂಡ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡಿದವರೇ ಆಗಿರುತ್ತಾರೆ.  ಈ ಚಿತ್ರದಲ್ಲಿಯೂ ಅದು ಮುಂದುವರೆದಿದ್ದು, ಖ್ಯಾತ ಸಂಗೀತ ನಿರ್ದೇಶಕ ತಮನ್.ಎಸ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಜನತಾ ಗ್ಯಾರೇಜ್’, ‘ಭರತ್ ಆನೆ ನೇನು’ ಮೊದಲಾದ  ಹಿಟ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಎಸ್.ತಿರುನವುಕರಸು ಈ ಚಿತ್ರಕ್ಕೂ ಕ್ಯಾಮೆರಾ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಮುಹೂರ್ತದ ಕಾರ್ಯಕ್ರಮದಲ್ಲಿ ಎಸ್.ಎಸ್.ರಾಜಮೌಳಿ, ಚಿರಂಜೀವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

Spread the love

Leave a Reply

Your email address will not be published. Required fields are marked *