ವಯಸ್ಕರು ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕಿಗೆ ತುತ್ತಾದರೆ ಅಪಾಯ : ಸಿಡಿಸಿ

ವಯಸ್ಕರು ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕಿಗೆ ತುತ್ತಾದರೆ ಅಪಾಯ ಹೆಚ್ಚು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಅಧ್ಯಯನ ಆತಂಕಕಾರಿ ವಿಚಾರವನ್ನು ಬಹಿರಂಗಗೊಳಿಸಿದೆ.

ವಯಸ್ಸಾದವರು ಮತ್ತು ಅನಾರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ ಕೋವಿಡ್ -19 ಸೋಂಕಿಗೆ ತುತ್ತಾದರೆ ಅಂಥವರಿಗೆ ಗಂಭೀರ ಅನಾರೋಗ್ಯದ ಅಪಾಯವಿದೆ ಎಂದು ಕಳೆದ ವಾರ ಸಿಡಿಸಿ ಅಧ್ಯಯನ ಸೂಚಿಸಿದೆ. ಸಿಡಿಸಿ ದತ್ತಾಂಶದ ಪ್ರಕಾರ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಲಸಿಕೆ ಪಡೆದ ನಂತರ ಹರಡುವ ಕೊರೊನಾದಿಂದ ಅಪಾಯ ಹೆಚ್ಚಿದೆ. ಇದಲ್ಲದೆ ಸೋಂಕಿನ ನಂತರ ಸಾವನ್ನಪ್ಪಿದ ಸುಮಾರು 87 ಪ್ರತಿಶತ ಜನರು 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಕರಾಗಿದ್ದಾರೆ.

ಜನವರಿ 24 ರಿಂದ ಜುಲೈ 24 ರ ನಡುವೆ 14 ರಾಜ್ಯಗಳಲ್ಲಿ 4,700 ಆಸ್ಪತ್ರೆಗೆ ದಾಖಲಾದ 99 ಕೌಂಟಿಯಲ್ಲಿ ಪ್ರಯೋಗಾಲಯದಿಂದ ದೃಢಪಡಿಸಿದ ಕೋವಿಡ್ -19 ಸಂಬಂಧಿತ ವಯಸ್ಕರ ಪಟ್ಟಿಯನ್ನು ಪಡೆಯಲಾಗಿದೆ. ಹೀಗೆ ದಾಖಲಾದ ಸಂಪೂರ್ಣ ಲಸಿಕೆ ಹಾಕಿಸಿಕೊಂಡ 12,908 ವಯಸ್ಕರಿಗೆ ಕೊರೊನಾದಿಂದ ಅಪಾಯ ಹೆಚ್ಚಿರುವುದು ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ದಾಖಲೆಗಳು ಲಭ್ಯವಾಗಿವೆ.

ಲಸಿಕೆ ನಂತರ ಆಸ್ಪತ್ರೆಗೆ ದಾಖಲಾದವರ 73 ವರ್ಷದ ಸುಮಾರು 71 ಪ್ರತಿಶತದಷ್ಟು ಜನರು ಮಧುಮೇಹ, ಹೃದ್ರೋಗ, ಆಟೋಇಮ್ಯೂನ್ ದಂತಹ ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ ಎಂದು ಸಿಎನ್ಎನ್ ವರದಿ ಹೇಳಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights