ಫ್ಯಾಕ್ಟ್‌ಚೆಕ್ : ಸಾಯಿಬಾಬಾ ಪರ್ವತ ಇರುವುದು ನಿಜವೇ ? ಹಾಗಿದ್ದರೆ ಇದು ಎಲ್ಲಿದೆ?
ಸಾಯಿಬಾಬಾ ಅವರ ಆಕಾರದಲ್ಲಿರುವ ಬೆಟ್ಟ ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಸಾಯಿಬಾಬಾರಂತೆ ಕಾಣುವ ಪರ್ವತದ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಸಾಯಿಬಾಬಾ ಆಕಾರದ ನಿಜವಾದ ಪರ್ವತ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಇದು ನಿಜವಾಗಿಯೂ ಇದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವೈರಲ್ ಆಗಿರುವ ಸಾಯಿಬಾಬಾ ಅವರ ಈ ಪಾರೂಪದ ಫೋಟೋ ಹಲವು ಬಾರಿ ನಮ್ಮ ವಾಟ್ಸಾಪ್ ಬರುವ ಸಂದೇಶಗಳ ಮೂಲಕ ಅಥವಾ ನಾವಿರುವ ಯಾವುದಾರೂ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಬೇರೆ ಬೇರೆ ಸಂದರ್ಭದಲ್ಲಿ ನಾವು ನೋಡಿರುತ್ತೇವೆ, ನೋಡಿದ ತಕ್ಷಣ ವಾವ್ ಎಷ್ಟು ಚೆಂದ ಇದೆ ಅನ್ನಿಸದೆ ಇರದು, ಹಾಗಿದ್ದರೆ ಈ ಸಾಯಿಬಾಬಾ ಪರ್ವತ ಎಲ್ಲಿದೆ, ಇದರ ವಿಶೇಷತೆ ಏನು ಎಂದು ತಿಳಿಯೋಣ.
ವೈರಲ್ ಆಗಿರುವ ಸಾಯಿಬಾಬಾ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ಪೋಸ್ಟ್‌ನಲ್ಲಿ ತೋರಿಸಿರುವಂತೆ ಅಂತಹ ಯಾವುದೇ ಪರ್ವತವನ್ನು ಕಂಡುಹಿಡಿಯಲಾಗಲಿಲ್ಲ. ಆದರೆ, ಈ ಪರ್ವತದ ಚಿತ್ರವನ್ನು ಅನೇಕ ವೆಬ್‌ಸೈಟ್‌ಗಳಲ್ಲಿ ಕಂಡುಕೊಂಡಿದ್ದೇವೆ, ಆದರೆ ವೈರಲ್ ಚಿತ್ರದಲ್ಲಿ ಇರುವಂತೆ ಪರ್ವತದ ಮೇಲಿನ ಭಾಗವು ಮೂಲದಲ್ಲಿ ಹಾಗಿಲ್ಲ.
ಬೆಟ್ಟದ ಮೂಲ ಫೋಟೋ ಥಾಯ್ಲೆಂಡ್‌ನ ಫಾಂಗ್ ನ್ಗಾ ಪ್ರಾಂತ್ಯದ ಅವೊ ಫಾಂಗ್ ನ್ಗಾ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ದ್ವೀಪವಾಗಿದೆ. ಮೂಲ ಫೋಟೋದಲ್ಲಿ ಸಾಯಿಬಾಬಾ ಅವರ ಚಿತ್ರವಿಲ್ಲ. ವೈರಲ್ ಪೋಸ್ಟ್‌ನಲ್ಲಿ ಸಾಯಿಬಾಬಾ ಅವರ ಚಿತ್ರವನ್ನು ಸೇರಿಸಲು ಮೂಲವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಸಾಯಿಬಾಬಾ ಅವರ ಆಕೃತಿ ಇರುವ ಪರ್ವತದ ಫೋಟೋ ಎಡಿಟೆಡ್ ಎನ್ನುವುದುಖಚಿತವಾಗಿದೆ.
pixels.com ವೆಬ್‌ಸೈಟ್ ಪ್ರಕಾರ, ಫೋಟೋವು 19 ಜನವರಿ 2018 ರಂದು ಅಪ್‌ಲೋಡ್ ಮಾಡಲಾದ ಅನಿಲ್ ಸಮೋಟಿಯಾ ಅವರ ಡಿಜಿಟಲ್ ಕಲಾಕೃತಿಯಾಗಿದೆ. ಅನಿಲ್ ಶರ್ಮಾ ಸಮೋಟಿಯಾ ಅವರನ್ನು ಮೇಲ್ ಮೂಲಕ ಸಂಪರ್ಕಿಸಿದಾಗ. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಹೌದು ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ, ಇದನ್ನು ನಾನು ಡಿಜಿಟಲ್ ಉಪಕರಣಗಳ ಸಹಾಯದಿಂದ ಮಾಡಿದ್ದೇನೆ. ನಿಜವಾದ ಪರ್ವತವು ಥೈಲ್ಯಾಂಡ್‌ನಲ್ಲಿದೆ, ಅದು ಸಾಯಿಬಾಬಾದಂತೆ ಕಾಣುವುದಿಲ್ಲ” ಎಂದು ತಿಳಿಸಿದ್ದಾರೆ ಇದನ್ನು ಫ್ಯಾಕ್ಟ್‌ಲಿ ವರದಿ ಮಾಡಿದೆ. ಸಾಯಿಬಾಬಾ ಅವರ ಫೋಟೋಗೆ ಸುಮಾರು 3 ಮಿಲಿಯನ್ ಲೈಕ್ಸ್ ಬಂದಿದ್ದು, ಈ ಪೇಜ್ ಅನ್ನು 1,159,278 ಫಾಲೋ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಥೈಲೆಂಡ್‌ನಲ್ಲಿರುವ ಪರ್ವತದ ಚಿತ್ರವನ್ನು ಅನಿಲ್ ಸಮೋಟಿಯಾ ಅವರ ಕಲ್ಪನೆಯಂತೆ ಡಿಜಿಟಲ್ ಎಡಿಟ್ ಮಾಡಿ ಸಾಯಿಬಾಬಾ ಅವರ ಕಲಾಕೃತಿಯನ್ನು ರಚಿಸಲಾಗಿದೆ. ಆದರೆ ಮೂಲ ಪರ್ವತದಲ್ಲಿ ಸಾಯಬಾಬಾ ಆಕಾರವಿಲ್ಲ. ಹಾಗಾಗಿ ಇದು ಎಡಿಟೆಡ್ ಚಿತ್ರ ಎಂದು ಖಚಿತವಾಹಿ ಹೇಳಬಹುದು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಚರಂಡಿಗೆ ಬಿದ್ದು ವ್ಯಕ್ತಿ ನಾಪತ್ತೆ! ಅಸಲೀಯತ್ತೇನು?