450 ವರ್ಷಗಳ ಇತಿಹಾಸವುಳ್ಳ ಗೋಲ್‌ಗುಂಬಜ್‌ನ ಛಾವಣಿಯ ಒಂದು ಭಾಗ ಕುಸಿದಿದೆ!

ವಿಜಯಪುರದಲ್ಲಿರುವ ವಿಶ್ವವಿಖ್ಯಾತ ಗೋಲ್ ಗುಂಬಜ್ ನ ಪೂರ್ವ ಭಾಗದಲ್ಲಿ ಚಜ್ಜಾದ ಒಂದು ಭಾಗ (ಛಾವಣಿಯ ಹೊದಿಕೆ) ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಕುಸಿದಿದೆ. ಸುಮಾರು 450 ವರ್ಷಗಳ ಹಿಂದೆ ಆದಿಲ್‌ ಶಾಹಿನ ಆಡಳಿತದಲ್ಲಿ ಇಂಡೋ-ಇಸ್ಲಾಮಿಕ್ ಶೈಲಿ ಕಟ್ಟಲಾಗಿದ್ದ ಗುಂಬಜ್‌ಅನ್ನು ಕಟ್ಟಲಾಗಿತ್ತು. ಇದೇ ಮೊದಲ ಬಾರಿಗೆ ಗುಂಬಜ್‌ನ ಛಾವಣಿಯ ಒಂದು ಭಾಗ ಕುಸಿದಿದೆ.

ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ)ಯು ಹಾನಿಗೊಳಗಾದ ಚಜ್ಜವನ್ನು ಸರಿಪಡಿಸಲು ಅಂದಾಜು ತಯಾರಿಸುತ್ತಿದೆ. ಸ್ಮಾರಕದ ಪೂರ್ವ ಭಾಗದಲ್ಲಿ ಹಾನಿಯುಂಟಾಗಿದ್ದು, ಈ ಭಾಗಕ್ಕೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

“ಹವಾಮಾನ ವೈಪರೀತ್ಯದಿಂದಾಗಿ ಸ್ಮಾರಕಕ್ಕೆ ಹಾನಿಯಾಗಿದೆ. ಮೇಲ್ಛಾವಣಿಯನ್ನು ಸರಿಪಡಿಸಲು ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಧಾರವಾಡದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ವಿ ಎಸ್ ಬಡಿಗೇರ್ ಹೇಳಿದ್ದಾರೆ.

ಒಮ್ಮೆ ನಾವು ಉನ್ನತ ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ದುರಸ್ತಿ ಕಾರ್ಯಗಳನ್ನು ಆರಂಭಿಸುತ್ತೇವೆ. ಹಿಂದಿನ ಕಾಲದ ವಸ್ತುಗಳನ್ನು ಬಳಸಿ ಅದನ್ನು ಸ್ವಂತಿಕೆಗೆ ಮರುಸ್ಥಾಪಿಸಲಾಗುತ್ತದೆ. ಇದರ ಹೊರತಾಗಿ ನಾವು ಐತಿಹಾಸಿಕ ಸ್ಮಾರಕಕ್ಕೆ ಹೆಚ್ಚಿನ ಹಾನಿಯಾಗದಂತೆ ತಡೆಯುವ ಕೆಲಸವನ್ನೂ ಮಾಡುತ್ತೇವೆ. ಇದು 450 ವರ್ಷಗಳ ಹಳೆಯ ಸ್ಮಾರಕವಾಗಿದ್ದು ಅದನ್ನು ಸಂರಕ್ಷಿಸಬೇಕಾಗಿದೆ. ಇದು ನಮ್ಮ ಜವಾಬ್ದಾರಿಯಾಗಿದೆ. ನಾನು ಶೀಘ್ರದಲ್ಲೇ ಸ್ಮಾರಕದ ವಿವರವಾದ ಪರಿಶೀಲನೆಯನ್ನು ಕೈಗೊಳ್ಳುತ್ತೇನೆ ಎಂದು ಎಎಸ್‌ಐ ಅಧಿಕಾರಿ ಬಡಿಗೇರ್ ಹೇಳಿದ್ದಾರೆ.

ಮೂಲಗಳ ಪ್ರಕಾರ, “ಗೋಲ್ ಗುಂಬಜ್ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಸಣ್ಣ ಹಾನಿಗೆ ಒಳಲಾಗುತ್ತಿದೆ. ಆದಾಗ್ಯೂ ಛಾವಣಿಯ ಒಂದು ಭಾಗ ಕುಸಿದಿರುವುದು ಇದೇ ಮೊದಲು. ತಾಂತ್ರಿಕ ಸಮಸ್ಯೆಗಳಿಂದಾಗಿ ಹಾಳಾದ ಮೇಲ್ಛಾವಣಿಯನ್ನು ಸರಿಪಡಿಸುವುದು ಸುಲಭದ ಕೆಲಸವಲ್ಲ” ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳು ಪ್ರವಾಹ ಪೀಡಿತವಾಗಿವೆ: ಸರ್ಕಾರ ಘೋಷಣೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights