ಬೆಂಗಳೂರಿನಲ್ಲಿ ಹೆಚ್ಚಿನ ಮಕ್ಕಳಿಗೆ ಕೋವಿಡ್ ಪಾಸಿಟಿವ್ : ಪೋಷಕರಲ್ಲಿ ಆತಂಕ!

ಬೆಂಗಳೂರಿನ ಹೆಚ್ಚಿನ ಮಕ್ಕಳಲ್ಲಿ ಕೊರೊನಾ ವೈರಸ್ ಕಂಡುಬಂದಿದ್ದು ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಬೆಂಗಳೂರಿನಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಆಗಸ್ಟ್ ಮೊದಲ ಎರಡು ವಾರಗಳಲ್ಲಿ ಸುಮಾರು 500 ಮಕ್ಕಳಿಗೆ ಕೊರೊನಾ ಸೋಂಕು ಹರಡಿದೆ.

ಕರ್ನಾಟಕ ಸರ್ಕಾರ ಈ ತಿಂಗಳಾಂತ್ಯದಲ್ಲಿ 9-12 ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪುನಃ ತೆರೆಯಲು ಯೋಜಿಸುತ್ತಿರುವಾಗ ಮಕ್ಕಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ.

ಬಿಬಿಎಂಪಿ ಕೋವಿಡ್ -19 ವಾರ್ ರೂಂನ ಮಾಹಿತಿಯ ಪ್ರಕಾರ, 0-9 ವರ್ಷ ವಯಸ್ಸಿನ ಸುಮಾರು 88 ಮಕ್ಕಳು ಮತ್ತು 10-19 ವರ್ಷ ವಯಸ್ಸಿನ 305 ಮಕ್ಕಳು ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 499 ಹೊಸ ಪ್ರಕರಣಗಳ ಪೈಕಿ, 263 ಮಕ್ಕಳಿಗೆ ಕೊರೊನಾ ಕಾಣಿಸಿಕೊಂಡಿರುವುದು ಕಳೆದ ಐದು ದಿನಗಳಲ್ಲಿ ವರದಿಯಾಗಿದೆ. ಈ ಪೈಕಿ 88 ಮಕ್ಕಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 175 ಮಕ್ಕಳು 10 ರಿಂದ 19 ವರ್ಷ ವಯಸ್ಸಿನವರಾಗಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಮಾತನಾಡಿ, ‘ಸಂಪೂರ್ಣ ಸಂಖ್ಯೆಗಳನ್ನು ನೋಡಿದಾಗ, ಪ್ರಕರಣಗಳು ಹೆಚ್ಚುತ್ತಿರುವಂತೆ ತೋರುತ್ತದೆ. ಆದರೆ ಪ್ರಕರಣಗಳು ಆತಂಕಕಾರಿ ಮಟ್ಟಕ್ಕೆ ಹೋಗಿಲ್ಲ’ ಎಂದಿದ್ದಾರೆ.

ಮಾತ್ರವಲ್ಲದೇ ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರೆ ಆಸ್ಪತ್ರೆಗಳೊಂದಿಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಹೆಚ್ಚಿನ ಮಕ್ಕಳು ಲಕ್ಷಣರಹಿತರು ಮತ್ತು ಸ್ವಲ್ಪ ಲಕ್ಷಣ ಇರುವವರಾಗಿದ್ದಾರೆ. ಇವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು ಎಂದರು. ಕಳೆದ 10 ದಿನಗಳಲ್ಲಿ ಯಾವುದೇ ಮಕ್ಕಳ ಸಾವು ಸಂಭವಿಸಿಲ್ಲ ಎಂದು ಅವರು ತಿಳಿಸಿದೆ.

“ನಾವು ಪರೀಕ್ಷೆ ಮಾಡಿದಾಗ ಸೋಂಕಿತ ಪೋಷಕರು ಮಕ್ಕಳಿಗೆ ಕೋವಿಡ್ -19 ಅನ್ನು ಹರಡಿದ್ದಾರೆ. ಮಕ್ಕಳು ಹೊರಗೆ ಹೋದರೆ ಉಳಿದ ಮಕ್ಕಳಿಗೂ ಸೋಂಕು ತಗಲುತ್ತದೆ. ಮಕ್ಕಳಲ್ಲಿ ಸೋಂಕು ಇದ್ದರೆ ಅದು ಪೋಷಕರಿಗೂ ಹರಡುತ್ತದೆ ಎಂದು ನಾವು ಅರಿತುಕೊಂಡೆವು. ಆದ್ದರಿಂದ ನಾವು ಸೋಂಕಿತರ ಸುತ್ತಲ ಪ್ರದೇಶದಲ್ಲಿ ಹೆಚ್ಚು ಪರೀಕ್ಷಿಸಿದಾಗ ಸೋಂಕಿತ ಮಕ್ಕಳನ್ನು ಪತ್ತೆ ಹಚ್ಚುತ್ತೇವೆ ಮತ್ತು ಅವರು ಹೆಚ್ಚಾಗಿ ಲಕ್ಷಣರಹಿತರು” ಎಂದು ಕಮಿಷನರ್ ಹೇಳಿದರು.

ಕನ್ಸಲ್ಟೆಂಟ್ ಪೀಡಿಯಾಟ್ರಿಕ್  ಡಾ. ಅರ್ಚನಾ ಎಂ ಮಾತನಾಡಿ, ‘ಆಸ್ಪತ್ರೆಗಳಲ್ಲಿ ದಾಖಲಾದ ಮಕ್ಕಳು ಸಾಮಾನ್ಯವಾಗಿ ಇತರ ಅನೇಕ ಮಕ್ಕಳೊಂದಿಗೆ ಬೆರೆತಿದ್ದಾರೆ. ಕೋವಿಡ್-ಸೂಕ್ತ ನಿಯಮಗಳನ್ನು ಅವರು ಅನುಸರಿಸುವುದಿಲ್ಲ. ಇದರಿಂದ ಸೋಂಕು ಹರಡಿದೆ’ ಎಂದು ಹೇಳಿದರು.

“ಪೋಷಕರಿಗೆ ಲಸಿಕೆ ಹಾಕಿದರೆ, ಅವರು ಲಕ್ಷಣರಹಿತರಾಗಿ ತಮ್ಮ ಮಕ್ಕಳಿಗೆ ಸೋಂಕು ರವಾನೆಯಾಗಬಹುದು. ಮಕ್ಕಳಿಗೆ ಲಸಿಕೆ ಹಾಕದ ಕಾರಣ ರೋಗಲಕ್ಷಣಗಳನ್ನು ಅಭಿವೃದ್ಧಿಯಾಗುತ್ತಿವೆ”ಎಂದು ಅವರು ವಿವರಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights