ಹೆಲಿಕಾಪ್ಟರ್ ಟ್ರಯಲ್ ರನ್ ವೇಳೆ ದುರಂತ : ಗಂಟಲಿಗೆ ಬ್ಲೇಡ್ ತಾಗಿ ಯುವಕ ಸಾವು : ಭಯಾನಕ ದೃಶ್ಯ ಸೆರೆ!
ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಟ್ರಯಲ್ ರನ್ ವೇಳೆ ಗಂಟಲಿಗೆ ಬ್ಲೇಡ್ ತಾಗಿ ಯುವಕ ಸಾವನ್ನಪ್ಪಿದ್ದು ಭಯಾನಕ ದೃಶ್ಯ ಸೆರೆಯಾಗಿದೆ. ತಾನೇ ನಿರ್ಮಿಸಿದ ಹೆಲಿಕಾಪ್ಟರ್ ನಿಂದಲೇ ಯುವಕ ಸಾವನ್ನಪ್ಪಿದ ಘಟನೆಯ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಮಹಾರಾಷ್ಟ್ರದ ಮಹಾಗಾಂವ್ ತಾಲೂಕಿನ ಫುಲ್ಸವಾಂಗಿ ಗ್ರಾಮದ 24 ವರ್ಷದ ಯುವಕ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ ಮೃತ ದುರ್ದೈವಿ. ಈತ 8 ನೇ ತರಗತಿಯಲ್ಲಿದ್ದಾಗ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದನು. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಶೇಖ್ ಹಳ್ಳಿಯಲ್ಲಿ ರಾಂಚೋ ಎಂದು ಜನಪ್ರಿಯನಾಗಿದ್ದನು. ಶಾಲೆ ಕಲಿಯದಿದ್ರೇನಾಯ್ತು ಜೀವನದಲ್ಲಿ ಏನಾದ್ರು ಸಾಧನೆ ಮಾಡಬೇಕು ಅಂದುಕೊಂಡಿದ್ದ ಶೇಖ್ ಗೆ ಹೆಲಿಕಾಪ್ಟರ್ ಕಣ್ಣ ಮುಂದೆ ಬಂದಿತ್ತು. ಹೀಗಾಗಿ ವೃತ್ತಿಯಲ್ಲಿ ಮೆಕಾನಿಕ್ ಆದ ಈತನಿಗೆ ಹೆಲಿಕಾಪ್ಟರ್ ತಾಯಾರಿಸುವುದು ಕಷ್ಟವೆನಿಸಲಿಲ್ಲ. ಹೀಗಾಗಿ ಕಳೆದ 2 ವರ್ಷಗಳಿಂದ ಶೇಖ್ ಸ್ವಂತ ಹೆಲಿಕಾಪ್ಟರ್ ತಯಾರಿಸುತ್ತಿದ್ದನು.
ತಾನು ಕಂಡ ಕನಸಿನಂತೆ ಸ್ಟೀಲ್ ಪೈಪ್ ಹಾಗೂ ಚಾಪರ್ ತಯಾರಿಸಲು ವೆಲ್ಡಿಂಗ್ ಸ್ಟೀಲ್ ಪೈಪ್ ಮತ್ತು ಮಾರುತಿ 800 ಎಂಜಿನ್ ಬಳಸಿ ಸಿಂಗಲ್ ಸೀಟ್ ನ ಹೆಲಿಕಾಪ್ಟರ್ ತಾರಿಸಿದ್ದನು. ಮಾತ್ರವಲ್ಲದೇ ಆತ ಹೆಲಿಕಾಪ್ಟರ್‌ಗೆ “ಮುನ್ನಾ ಹೆಲಿಕಾಪ್ಟರ್” ಎಂದು ಹೆಸರು ಕೂಡ ಇಟ್ಟದ್ದನು. ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಅದನ್ನು ಸಾರ್ವಜನಿಕರಿಗೆ ಅನಾವರಣಗೊಳಿಸಲು ಬಯಸಿದ್ದರು. ಆದರೆ ದುರಾದೃಷ್ಟ ಅಂದ್ರೆ ಇದೇ ನೋಡಿ. ತಾನು ತಾಯಾರಿಸಿದ ಹೆಲಿಕಾಪ್ಟರ್ ನಿಂದಲೇ ಶೇಖ್ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಆಗಸ್ಟ್ 10 ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಟ್ರಯಲ್ ರನ್ ವೇಳೆ ಹೆಲಿಕಾಪ್ಟರ್ ಬ್ಲೇಡ್ ಗಂಟಲನ್ನು ಕತ್ತರಿಸಿದ ಪರಿಣಾಮ ಶೇಖ್ ಸಾವನ್ನಪ್ಪಿದ್ದಾನೆ.
https://twitter.com/dharmendrajore/status/1425719324300304388?ref_src=twsrc%5Etfw%7Ctwcamp%5Etweetembed%7Ctwterm%5E1425719324300304388%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fmaharashtra%2Fmaharashtra-man-rancho-builds-own-helicopter-dies-after-blade-slashes-his-throat-during-trial-run-watch-video-4884065%2F
ಘಟನೆ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಸಮಯದಲ್ಲಿ ಆತ ಮೃತಪಟ್ಟಿದ್ದಾನೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆ ಕುರಿತು ತನಿಖೆ ನಡೆಸಲು ಪೊಲೀಸರು ಇಸ್ಮಾಯಿಲ್ ಅವರ ಹಿರಿಯ ಸಹೋದರ ಮತ್ತು ಮೂವರು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.