ಮಗು ಆಟವಾಡುತ್ತಿದ್ದ ಸ್ಥಳಕ್ಕೆ ಸರಸರನೇ ಬಂದ ಸರ್ಪ : ಮುಂದೇನಾಯ್ತು ನೋಡಿ..

ಅಂಬೆಗಾಲಿಡುವ ಮಗು ಆಟವಾಡುತ್ತಿದ್ದ ಸ್ಥಳಕ್ಕೆ ನಾಗರಾಜನು ಎಂಟ್ರಿ ಕೊಟ್ಟ ಭಯಾನಕ ವೀಡಿಯೋ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇದು ವಿಯೆಟ್ನಾಂನ ಸುಮಾರು ಎರಡು ಮೀಟರ್ ಉದ್ದದ ವಿಷಪೂರಿತ ಹಾವು. ಮನೆಯ ಮುಂದಿನ ಪ್ಲೇ ಗ್ರೌಂಡ್ ನಲ್ಲಿ ಈ ಹಾವು ಸರಸರ ಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೀಡಿಯೋದಲ್ಲಿ ಪುಟ್ಟ ಮಗುವೊಂದು ಆಟವಾಡುವುದು, ಮಗುವಿನ ಹಿಂದೆ ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡಿದ್ದ ಅಜ್ಜ ಇರುವುದು ಕಾಣಬಹುದು. ಆರಂಭದಲ್ಲಿ ಹಾವು ಮಗುವಿನ ಬಳಿ ಬರುವುದುನ್ನ ನೋಡಿದ ಅಜ್ಜನಿಗೆ ತಕ್ಷಣಕ್ಕೆ ಏನ್ ಮಾಡಬೇಕು ತೋಚಿಲ್ಲ. ಸಹಾಯಕ್ಕಾಗಿ ಕೂಗಿದ್ದಾರೆ. ನಂತರ ಮನೆಯಲ್ಲಿ ಕುಳಿತಿದ್ದ ಮಗುವಿನ ತಂದೆ ಅವರ ರಕ್ಷಣೆಗೆ ಓಡಿಬರುತ್ತಾರೆ.

ಮಗುವನ್ನು ಎತ್ತುಕೊಂಡು ಮನೆಯೊಳಗೆ ನುಗ್ಗಿ ಬಾಗಿಲು ಹಾಕಿಕೊಳ್ಳುತ್ತಾರೆ. ನಂತರ ಹಾವು ಬಾಗಿಲಿನ ಕೆಳಗೆ ನುಸುಳಲು ಪ್ರಯತ್ನಿಸಿದೆಎ. ಬಾಗಿಲು ದಾಟಿ ಮನೆಯೊಳಗೆ ಪ್ರವೇಶಿಸಲಾಗದೇ ವಾಪಸ್ ಹೋಗುವುದು ದೃಶ್ಯದಲ್ಲಿ ಸೆರೆಯಾಗಿದೆ.

ವೀಡಿಯೊವು ಯೂಟ್ಯೂಬ್ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ, ಅವುಗಳಲ್ಲಿ ಹೆಚ್ಚಿನವು ಹಾವಿನ ವೇಗದ ಬಗ್ಗೆ ಮಾತನಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights