FACT CHECK | ಇಂಡೋನೇಷ್ಯಾದಲ್ಲಿ ನೀರಿನೊಳಗೆ ವಿಷ್ಣು ದೇವಾಲಯ ಎಂದು AI ವಿಡಿಯೋ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಕೆಲವು ಸ್ಕೂಬಾ ಡೈವರ್‌ಗಳು ಆಳವಾದ ನೀರಿನ ಅಡಿಗೆ ಹೋಗುವುದನ್ನು ಕಾಣಬಹುದು. ಬಳಿಕ ದೇವಾಲಯಗಳು ಮತ್ತು ಪ್ರತಿಮೆಗಳು ಸೇರಿದಂತೆ ಹಲವು ಬಗೆಯ ಆಕೃತಿಗಳನ್ನು ನೀರಿನ ಅಡಿಯಲ್ಲಿ ಇರುವುದನ್ನು ಇವರು ತೋರಿಸುತ್ತಾರೆ. ಇವುಗಳಲ್ಲಿ, ಶೇಷನಾಗದ ಮೇಲೆ ಮಲಗಿರುವ ವಿಷ್ಣುವಿನ ಬೃಹತ್ ಪ್ರತಿಮೆಯೂ ಕಂಡುಬರುತ್ತದೆ. ಸ್ಕೂಬಾ ಡೈವರ್‌ಗಳು ಸಹ ಪ್ರತಿಮೆಗೆ ನಮಸ್ಕರಿಸಿ ಅದರ ಪಾದಗಳನ್ನು ಮುಟ್ಟುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗಿನ ವಿಷ್ಣು ದೇವಾಲಯ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಿದಾಗ, ವಿಡಿಯೋದ ಕೆಳಭಾಗದಲ್ಲಿ ‘@mbaiarts’ ಎಂಬ ವಾಟರ್‌ಮಾರ್ಕ್ ಕಂಡುಬಂದಿದೆ. ಬಳಿಕ ಗೂಗಲ್‌ನಲ್ಲಿ @mbaiarts ಎಂದು ಸರ್ಚ್ ಮಾಡಿದಾಗ ಈ ಬಳಕೆದಾರ ಹೆಸರಿನ ಇನ್​ಸ್ಟಾಗ್ರಾಮ್ ಪ್ರೊಫೈಲ್ ಲಭ್ಯವಾಗಿದೆ. Mb Ai ಆರ್ಟ್ಸ್ ಇನ್‌ಸ್ಟಾಗ್ರಾಮ್ ಖಾತೆಯ ವಿವರಣೆಯಲ್ಲಿ “AI ಮೂಲಕ ಹಿಂದೂ ದೇವರುಗಳ ಸೌಂದರ್ಯವನ್ನು ಅನ್ವೇಷಿಸುವುದು” ಎಂದು ಬರೆಯಲಾಗಿದೆ.

 

View this post on Instagram

 

A post shared by Mb Ai Arts (@mbaiarts)

ಈ ಖಾತೆಯನ್ನು ಪರಿಶೀಲಿಸಿದಾಗ, ವೈರಲ್ ವಿಡಿಯೋವನ್ನು ಈ ಹ್ಯಾಂಡಲ್‌ನಿಂದ ಏಪ್ರಿಲ್ 9, 2025 ರಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ವೀಡಿಯೊದೊಂದಿಗೆ ಈ ರೀತಿ ಕ್ಯಾಪ್ಶನ್ ನೀಡಲಾಗಿದೆ. ‘‘ಇದು AI ನಿಂದ ರಚಿಸಲ್ಪಟ್ಟಿದೆ. ವೀಡಿಯೊದಲ್ಲಿನ ಎಲ್ಲಾ ದೃಶ್ಯಗಳನ್ನು ಕಲಾತ್ಮಕ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ AI ರಚಿಸಿದೆ’’ ಎಂದು ಬರೆಯಲಾಗಿದೆ.

ಇನ್ನಷ್ಟು ಖಚಿತ ಮಾಹಿತಿಗಾಗಿ  AI ಪತ್ತೆ ವೇದಿಕೆ ಹೈವ್ ಮಾಡರೇಶನ್ ಮೂಲಕ ವೈರಲ್ ಕ್ಲಿಪ್‌ನ ಒಂದು ಭಾಗವನ್ನು ಸರ್ಚ್ ಮಾಡಿದಾಗ,  ವೈರಲ್ ಕ್ಲಿಪ್ ಶೇ. 99.9 ರಷ್ಟು AI ನಿಂದ ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ. ಹಾಗೆಯೆ ಮತ್ತೊಂದು AI ಪತ್ತೆ ಸಾಧನ  WasItAI ನಲ್ಲಿ ವೈರಲ್ ವೀಡಿಯೊದ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ಸಹ ಪರಿಶೀಲಿಸಿದ್ದೇವೆ. ಇದು ಕೂಡ ಎಲ್ಲಾ ದೃಶ್ಯಗಳನ್ನು AI ನಿಂದ ರಚಿಸಲಾಗಿದೆ ಎಂದು ಹೇಳಿದೆ.

ಇನ್ನು ವೈರಲ್ ವೀಡಿಯೊಗೆ ಸಂಬಂಧಿಸಿದ ಹಕ್ಕಿನ ಬಗ್ಗೆ ನಾವು ಗೂಗಲ್ ಸರ್ಚ್ ನಡೆಸಿದ್ದೇವೆ. ಇಂಡೋನೇಷ್ಯಾದ ಬಾಲಿ ಸಮುದ್ರದಲ್ಲಿ ಶ್ರೀ ಮಹಾ ವಿಷ್ಣು ದೇವಾಲಯದ ಅಸ್ತಿತ್ವದ ಕುರಿತು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದೆವು. ಆದಾಗ್ಯೂ, ಈ ಹಕ್ಕನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಇಂಡೋನೇಷ್ಯಾದ ಬಾಲಿಯ ಸಮುದ್ರದಲ್ಲಿ ವಿಷ್ಣು ದೇವಾಲಯ ಎಂದು ವೈರಲ್ ಆಗುತ್ತಿರುವ ವೀಡಿಯೊ AI ಯಿಂದ ರಚಿತವಾದ ವೀಡಿಯೊ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕರಾಚಿಯ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights