15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಆರಂಭ : ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ರಾಜ್ಯದಲ್ಲಿ ಇಂದು 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಆರಂಭಗೊಂಡಿದೆ. ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಮತದಾನ ಆರಂಭಗೊಂಡಿದೆ. ಕೆಲವು ಕ್ಷೇತ್ರಗಳ ವಿವರ ಇಲ್ಲಿದೆ.

ಅಥಣಿ ಬೈ ಎಲೆಕ್ಷನ್ :-

ಇಂದು ಬೆಳಗಾವಿ ಅಥಣಿ ಬೈ ಎಲೆಕ್ಷನ್ ಮತದಾನ ಆರಂಭಗೊಂಡಿದೆ. ಬೆ.7 ರಿಂದ ಆರಂಭವಾಗಿರುವ ಮತದಾನ ನಡೆಯುತ್ತಿದೆ.

ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಮಹೇಶ ಮುಮಟಳ್ಳಿ(ಬಿಜೆಪಿ), ಗಜಾನನ ಮಂಗಸೂಳಿ(ಕಾಂಗ್ರೆಸ್) ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು ಮತದಾರರು- 217974. ಪುರುಷ ಮತದಾರರು- 112176, ಮಹಿಳಾ ಮತದಾರರು-105796, ಇತರೆ ಮತದಾರರು- 02, ಒಟ್ಟು ಮತಗಟ್ಟೆಗಳು- 260, ಯುವ ಮತದಾರರು- 3368, ಸಖಿ ಮತಗಟ್ಟೆ ಸಂಖ್ಯೆ-1 ಇದೆ.

ಕೆ.ಆರ್.ಪೇಟೆ ಉಪ ಚುನಾವಣೆ :-

ಮಂಡ್ಯದ ಕೆ.ಆರ್.ಪೇಟೆ ಉಪ ಚುನಾವಣೆ ಮತದಾನ ಆರಂಭಗೊಂಡಿದೆ. ಇಲ್ಲಿ  ಕೆ.ಆರ್.ಪೇಟೆ ಕ್ಷೇತ್ರದ ಒಟ್ಟ ಮತದಾರ ಸಂಖ್ಯೆ 2,08,624 ಇದೆ.  ಇದರಲ್ಲಿ ಪುರುಷರ ಮತದಾರ ಸಂಖ್ಯೆ 1,05,953, ಮಹಿಳಾ ಮತದಾರ ಸಂಖ್ಯೆ 1,02,666, ತೃತೀಯ ಲಿಂಗಿ ಮತದಾರರು 05.

ಇನ್ನೂ ಕೆ.ಆರ್. ಪೇಟೆ ಉಪ ಸಮರ ‘ಜಾತಿ’ಗಣಿತ ನೋಡುವುದಾದರೆ. ಒಕ್ಕಲಿಗರು 80,000. ಎಸ್​​ಸಿ, ಎಸ್​ಟಿ 30,000. ಲಿಂಗಾಯತರು 20,000. ಕುರುಬರು 30,000. ವಿಶ್ವಕರ್ಮ 12,000. ಅಲ್ಪ ಸಂಖ್ಯಾತರು 8,000. ನಾಯಕರು 7,000. ಇತರೆ 21,630 ಇದ್ದಾರೆ.

ಬಿಗಿ ಬಂದೋಬಸ್ತ್ :-

ಉಪ ಚುನಾವಣೆ ಭದ್ರತೆಗಾಗಿ ೪ ಕೇಂದಿಯ ಮೀಸಲು ಪಡೆ, ೪ ಕೆಎಸ್ಸಾರ್ಪಿ, ಹಾಗೂ ೨೦ ಡಿ.ಆರ್‌.ತುಕಡಿ ನೇಮಕ ಮಾಡಲಾಗಿದೆ. ಇದಲ್ಲದೆ ೧೦,೬೦೦ ಪೊಲೀಸ್ ಸಿಬ್ಬಂದಿಗಳು ೫೦೦ ಹೋಂ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಕ್ಷೇತ್ರದಲ್ಲಿ ಲೈಸೆನ್ಸ್ ಹೊಂದಿರುವ ಬಂದೂಕು ಮತ್ತು ಮಾರಕಾಸ್ತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ೨೯೦ ಪ್ರಿಸೈಡಿಂಗ್ ಅಧಿಕಾರಿಗಳು, ೨೯೩,ಸಹಾಯಕ ಮತಗಟ್ಟೆ ಅಧಿಕಾರಿಗಳು, ೫೮೦ ಮತದಾನ ಅಧಿಕಾರಿಗಳು ನೇಮಕ ಮಾಡಲಾಗಿದೆ.

ರಾಣೆಬೇನ್ನೂರು ಉಪಚುನಾವಣೆ :-

ಹಾವೇರಿಯ ರಾಣೆಬೇನ್ನೂರು ಉಪಚುನಾವಣೆಗೆ ಇಂದು ಮತದಾನ ಆರಂಭಗೊಂಡಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಸೇರಿ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಅರುಣ್ ಕುಮಾರ್ ಪುಜಾರ್, ಕಾಂಗ್ರೆಸ್ ನಿಂದ‌ ಕೆಬಿ ಕೋಳಿವಾಡ, ಜೆಡಿಎಸ್ ನಿಂದ ಮಲ್ಲಿಕಾರ್ಜುನ ಹಲಗೇರಿ ಸ್ಪರ್ಧೆ ಮಾಡುತ್ತಿದ್ದಾರೆ.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 2,33,137 ಮತದಾರರಿದ್ದು. ಕ್ಷೇತ್ರದಲ್ಲಿ 1,14,497 ಪುರುಷರು, 1,18,627 ಮಹಿಳಾ ಮತದಾರರಿದ್ದಾರೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳಿವೆ. 54 ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು. ಒಂದು ಪಿಂಕ್ ಮತಗಟ್ಟೆ, ವಿಕಲಚೇತನ ಮತಗಟ್ಟೆ ಒಂದು, ಒಂದು ಮಾದರಿ ಮತಗಟ್ಟೆ ತೆರೆಯಲಾಗಿದೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಹುಣಸೂರು ಉಪಚುನಾವಣೆ :-
ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ರಾಜಕೀಯ ಜೀವನದ ಸಂಧ್ಯಾಕಾಲದ ಚುನಾವಣೆ ಇದಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆಲುವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ಸ್ವೀಕರಿಸಲಿದ್ದಾರೆ. ಫಲಿತಾಂಶದ ಸಮೀಕರಣ ಬದಲಿಸಲು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರಯತ್ನ ನಡೆಸಿದ್ದಾರೆ.
ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳು., ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 274 ಮತಗಟ್ಟೆ, 50 ಸೂಕ್ಷ್ಮ, 224 ಸಾಮಾನ್ಯ ಮತಗಟ್ಟೆ, ಒಟ್ಟು 1,500ಕ್ಕೂ ಹೆಚ್ಚು ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights