ಪ್ರೇಮಿಗಳ ಮೇಲೆ ಮಾರಣಾಂತಿಕ ಹಲ್ಲೆ : ಕಾರಿನಲ್ಲಿ ಹೋದರು ಮತ್ ಬರಲೇ ಇಲ್ಲ !

ಪ್ರೇಮಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯ ಜಿ ನಾಗೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮಧುಗಿರಿಯಿಂದ ಕಾರಿನಲ್ಲಿ ಹೋಗುವಾಗ ಆರು ಜನರಿಂದ ಪ್ರೇವಿುಗಳ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೋಷಕರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ.

ಶ್ರೀನಿವಾಸ್ (25) ಕೊಲೆಯಾದ ವ್ಯಕ್ತಿ. ಅಕ್ಷಿತಾಳನ್ನ ಪ್ರೀತಿಸಿ ಮದುವೆಯಾಗಿದ್ದ ನು. ಹುಡುಗಿ ಕಂಪ್ಯೂಟರ್ ಟ್ರೈನಿಂಗ್ ಹೋಗುತ್ತಿದ್ದ ವೇಳೆ‌ ಲವ್ ಮಾಡಿಕೊಂಡಿದ್ದ ಇವರು 15 ದಿನಗಳ‌ ಹಿಂದೆ‌ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದ್ವೆ ಬಳಿಕ ಇಂದು ಮಿಡಿಗೇಶಿಗೆ ಬಂದು ಊರಿನಿಂದ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ಜೋಡಿಗಳು ಮೇಲೆ 6 ಜನರ ತಂಡದಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಒಂದು ವಾರದ ಹಿಂದೆ ಕುಟುಂಬಸ್ಥರು ರಾಜಿ ಮಾಡಿದ್ದರು.

ಬಗಲಗುಂಟೆಯಲ್ಲಿ ಹೂವು ವ್ಯಾಪಾರ ಮಾಡಿಕೊಂಡಿದ್ದ ಶ್ರೀನಿವಾಸ್ ಹಳೆ ದ್ವೇಷ ಹಿನ್ನೆಲೆ ಸ್ನೇಹಿತರಿಂದಲೇ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಶ್ರೀನಿವಾಸ್ ಎನ್ನಲಾಗಿದೆ.

ಮಧುಗಿರಿ ತಾಲ್ಲೂಕಿನ ವಿುಡಿಗೇಶಿ ಹೋಬಳಿ ಬಿದರಕೆರೆ ಗ್ರಾಮದ ಯುವಕ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಕೊರಟಗೆರೆ ಪೋಲಿಸರು ಭೇಟಿ ನೀಡಿ ಅರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights