ಮನೆಗೆ ತಲುಪಿದ ಸಾಮಗ್ರಿಗಳಲ್ಲಿ ಬೆಲೆಬಾಳುವ ವಸ್ತುಗಳು ನಾಪತ್ತೆ; ವಿಮಾನಯಾನ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು!
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳಿದ್ದ ಮಹಿಳೆಯೊಬ್ಬರು, ತಾವು ಅಮೆರಿಕಾದಿಂದ ತಂದ ಸಾಮಗ್ರಿಗಳಲ್ಲಿ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿವೆ ಎಂದು ಆರೋಪಿಸಿ, ವಿಮಾನಯಾನ ಸಂಸ್ಥೆಯ ಅಪರಿಚಿತ ಸಿಬ್ಬಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.
45 ವರ್ಷದ ಮಹಿಳೆ ಇತ್ತೀಚೆಗೆ ಅಮೆರಿಕಾದಿಂದ ಮುಂಬೈಗೆ ತೆರಳಿದ್ದರು. ಈ ವೇಳೆ ಅವರೊಂದಿಗೆ ತರಲಾದ ಲಗೇಜ್ನಲ್ಲಿ 1.40 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿವೆ ಎಂದು ಆರೋಪಿಸಿ ‘ಕ್ರಿಮಿನಲ್ ಉಲ್ಲಂಘನೆ’ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
“ಮುಂಬೈಗೆ ಬಂದ ನಂತರ, ಅವರು ಪುಣೆಗೆ ಪ್ರಯಾಣಿಸಿದ್ದರು. ನಂತರ, ಏರ್ಲೈನ್ನ ಕೆಲವು ಸಿಬ್ಬಂದಿಗಳು ಆಕೆಯ ಎರಡು ಬ್ಯಾಗ್ಗಳನ್ನು ಪುಣೆಯ ವಿಳಾಸಕ್ಕೆ ತಂದುಕೊಟ್ಟಿದ್ದಾರೆ. ಲಗೇಜ್ ತಲುಪಿಸಿದ ನಂತರ ಅವರು ಅಲ್ಲಿಂದ ಹೊರಟಿದ್ದಾರೆ.
ಬಳಿಕ, “ಚೀಲಗಳನ್ನು ತೆರೆದಾಗ, ಮಹಿಳೆ ಹೊಸ ಉಡುಪುಗಳು, ಉಡುಗೊರೆ ವಸ್ತುಗಳು, ಸುಗಂಧ ದ್ರವ್ಯಗಳು, ಆಟಿಕೆಗಳು, ಕೈಚೀಲಗಳು ಮತ್ತು ಚಾಕೊಲೇಟ್ಗಳು ಕಾಣೆಯಾಗಿರುವುದನ್ನು ಪತ್ತೆಮಾಡಿದ್ದಾರೆ” ಎಂದು ಯರವಾಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏರ್ಲೈನ್ಸ್ನ ಅಪರಿಚಿತ ಸಿಬ್ಬಂದಿಗಳ ವಿರುದ್ದ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಕ್ರೌರ್ಯ: ಅಫ್ಘಾನ್ ವಾಲಿಬಾಲ್ ಆಟಗಾರ್ತಿ ಶಿರಚ್ಛೇದ

