ಐತಿಹಾಸಿಕ ಐಹೊಳೆ ಸ್ಥಳಾಂತರಕ್ಕಾಗಿ ಪ್ರಧಾನಿಗೆ ಪತ್ರ ಬರೆದ ಯುವಕ…

ಐತಿಹಾಸಿಕ ಐಹೊಳೆ ಸ್ಥಳಾಂತರಕ್ಕಾಗಿ ಯುವಕನೊಬ್ಬ ಪ್ರಧಾನಿಗೆ ಪತ್ರ ಬರೆದಿದ್ದಾನೆ. ಅಕ್ಟೋಬರ್ ೧೦ರಂದು ಆನಲೈನ್ ಮೂಲಕ ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರಿಸುವಂತೆ ಪ್ರಧಾನಿ ಕಚೇರಿಗೆ ಪ್ರಕಾಶ್ ಪತ್ರ ಬರೆದಿದ್ದಾರೆ.

ಐಹೊಳೆ 125ಕ್ಕೂ ಅಧಿಕ ಚಾಲುಕ್ಯರ ಕಾಲದ ದೇಗುಲಗಳಿರೋ ಐತಿಹಾಸಿಕ ಸ್ಥಳ. ಐತಿಹಾಸಿಕ ಐಹೊಳೆಯು ಇಂದು ಪುರಾತತ್ವ ಇಲಾಖೆ ಅಧೀನದಲ್ಲಿ ನಿವ೯ಹಣೆಯಾಗುತ್ತಿದೆ. ಸಕಾ೯ರ ಮತ್ತು ಗ್ರಾಮಸ್ಥರ ನಡುವೆ ಸಮನ್ವಯದ ಕೊರತೆಯಿಂದ ಸ್ಥಳಾಂತರ ನೆನೆಗುದಿಗೆ ಬಿದ್ದಿದೆ. ಇತ್ತೀಚಿನ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಐತಿಹಾಸಿಕ ದೇಗುಲ ಮತ್ತು ನೂರಾರು ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ.

ಹಲವು ವಷ೯ಗಳಿಂದ ಐಹೊಳೆ ಸ್ಥಳಾಂತರ ಸಾಧ್ಯವಾಗುತ್ತಿಲ್ಲ. ಇಲ್ಲಿನ ಕುಟುಂಬಗಳ ಮನೆ ರಿಪೇರಿ ಮಾಡೋ ಹಾಗಿಲ್ಲ, ಹೊಸ ಮನೆ ಕಟ್ಟೋ ಹಾಗಿಲ್ಲ. ಹೀಗಾಗಿ ಕೂಡಲೇ ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸಿ ಐಹೊಳೆ ಸ್ಥಳಾಂತರ ಮಾಡಬೇಕೆಂದು ಯುವಕ ಮನವಿ ಮಾಡಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights