ತಾಲಿಬಾನ್ ಕ್ರೌರ್ಯ: ಅಫ್ಘಾನ್ ವಾಲಿಬಾಲ್ ಆಟಗಾರ್ತಿ ಶಿರಚ್ಛೇದ

ತಾಲಿಬಾನ್ ಉಗ್ರರ ಆಡಳಿತದಲ್ಲಿ ಆಫ್ಘಾನಿಸ್ತಾನ ನಲುಗುತ್ತಿದೆ. ತಾಲಿಬಾನ್‌ಗಳ ಕೆಲ ಕ್ರೌರ್ಯಗಳು ಮಾತ್ರ ಬಹಿರಂಗವಾಗಿದೆ. ಇದೀಗ ಇಂತದ್ದೆ ಘಟನೆಯಲ್ಲಿ ತಾಲಿಬಾನ್‌ಗಳು ಆಫ್ಘಾನಿಸ್ತಾನ ರಾಷ್ಟ್ರೀಯ ವಾಲಿಬಾಲ್ ತಂಡದ ಜ್ಯೂನಿಯರ್ ಆಟಗಾರ್ತಿ ಮಹಜಬಿನ್ ಹಕಿಮಿ ಅವರ ಶಿರಚ್ಚೇದ ಮಾಡಿದ್ದಾರೆ.

ಮಹಜಬಿನ್ ಹಕೀಮಿ ಕಾಬೂಲ್ ಮುನ್ಸಿಪಾಲಿಟಿ ಕ್ಲಬ್ ಪರ ಆಡುತ್ತಿದ್ದರು. ಆಶ್ರಫ್ ಘನಿ ಸರ್ಕಾರದ ಸಂದರ್ಭದಲ್ಲಿ ಕ್ಲಬ್ ಪರ ಆಡುತ್ತಿದ್ದ ಹಕೀಮಿ ಸ್ಟಾರ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಆಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಕೈವಶ ಮಾಡಿದ ಬಳಿಕ ಹಕಿಮಿ ಪತ್ತೆ ಇರಲಿಲ್ಲ. ಆಫ್ಘಾನಿಸ್ತಾನದಲ್ಲಿ ಎಲ್ಲರೂ ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಹಕಿಮಿ ಸಂಪರ್ಕ ಸಾಧ್ಯವಾಗಲಿಲ್ಲ. ಆದರೆ ಕೆಲ ದಿನಗಳ ಬಳಿಕ ತಾಲಿಬಾನ್ ಉಗ್ರರು ಆಕೆಯ ಶಿರಚ್ಛೇದನ ಮಾಡಿದ ಫೋಟೋ ಹರಿದಾಡತೊಡಗಿತ್ತು ಎಂದು ಹೆಸರು ಹೇಳಲು ಇಚ್ಚಿಸಿದ ವಾಲಿಬಾಲ್ ಕೋಚ್ ಕರಾಳ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಶಿರಚ್ಛೇದನ ಮಾಡಿ ವಿಕೃತಿ ಮರೆಯುತ್ತಿರುವ ತಾಲಿಬಾನ್ ಫೋಟೋ ಬಂದ ಬಳಿಕ ತಂಡದ ಇತರ ಮಹಿಳಾ ವಾಲಿಬಾಲ್ ಆಟಗಾರರನ್ನು ಸಂಪರ್ಕಿಸಿದೆ. ಅವರಿಂದ ಹಕಿಮಿ ಕುಟುಂಬಸ್ಥರ ಸಂಪರ್ಕಿಸಿ ಮಾಹಿತಿ ಪಡೆದುಕೊಂಡೆ. ತಾಲಿಬಾನ್ ಕ್ರೌರ್ಯದಲ್ಲಿ ಹಕಿಮಿ ಹತ್ಯೆಯಾಗಿದ್ದಾಳೆ. ಆದರೆ ಆಫ್ಘಾನಿಸ್ತಾನ ರಾಷ್ಟ್ರೀಯ ವಾಲಿಬಾಲ್ ಪ್ಲೇಯರ್ ಆಗಿರುವ ಕಾರಣ ಮಾಹಿತಿ ಬಹಿರಂಗ ಪಡಿಸದಂತೆ ತಾಲಿಬಾನ್ ಎಚ್ಚರಿಕೆ ನೀಡಿತ್ತು. ಬಹಿರಂಗ ಪಡಿಸಿದರ ಕುಟುಂಬವೇ ಸರ್ವನಾಶ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿತ್ತು. ಈ ಕರಾಳ ಘಟನೆಯನ್ನು ವಾಲಿಬಾಲ್ ಕೋಚ್ ಭಯದಿಂದಲೇ ಬಿಚ್ಚಿಟ್ಟಿದ್ದಾರೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡುವ ಮೊದಲು ವಾಲಿಬಾಲ್ ತಂಡದ ಕೇವಲ ಇಬ್ಬರು ಮಹಿಳಾ ಆಟಗಾರ್ತಿಯರು ಸುರಕ್ಷಿತವಾಗಿ ದೇಶ ತೊರೆದಿದ್ದಾರೆ. ಇನ್ನುಳಿದವರು ಏನಾದರೂ ಅನ್ನೋ ಪತ್ತೆ ಇಲ್ಲ. ಹಿಕಿಮಿ ಸೇರಿದಂತೆ ಇತರ ಮಹಿಳಾ ಆಟಗಾರ್ತಿಯರು ಕೆಲ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಆರ್ಥಿಕ ಸಂಕಷ್ಟವೂ ಮತ್ತೊಂದು ಕಾರಣ. ಇದೀಗ ವಾಲಿಬಾಲ್ ತಂಡ ಮಹಿಳಾ ಆಟಗಾರ್ತಿಯರ ಯಾವುದೇ ವಿವರವಿಲ್ಲ ಎಂದು ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಹೇಳಿದ್ದಾರೆ.

ತಾಲಿಬಾನ್ ಉಗ್ರರು ಮಹಿಳಾ ಕ್ರೀಡಾಪಟುಗಳು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ತಾಲಿಬಾನ್ ಉಗ್ರರ ಕಾನೂನಿನಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನವಿಲ್ಲ. ಹೊರಗಡೆ ಹೋಗುವಂತಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ. ಮಹಿಳೆಯರು ಕ್ರೀಡಾ ಉಡುಪು ತೊಡುವಂತಿಲ್ಲ. ಹೀಗಾಗಿ ವಾಲಿಬಾಲ್ ಮಾತ್ರವಲ್ಲ, ಥ್ರೋಬಾಲ್, ಬಾಸ್ಕೆಟ್ ಬಾಲ್ ಸೇರಿದಂತೆ ಮಹಿಳಾ ಕ್ರೀಡಾಪಟುಗಳು ಸ್ಥಿತಿ ಶೋಚನೀಯವಾಗಿದೆ ಎಂದು ಕೋಚ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights