Fact check: NEP ಪ್ರತಿಭಟನೆಯ ಹಳೆಯ ವಿಡಿಯೋವನ್ನು ಹಿಜಾಬ್ ಪರ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಕರ್ನಾಟಕದಲ್ಲಿ ಹಿಜಾಬ್ ಧರಿಸುವ ಕುರಿತು ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೆ ದೇಶದ ಬೇರೆ ಬೇರೆ ರಾಜ್ಯದಲ್ಲಿ ಹಿಜಾಬ್ ವಿಚಾರ ಮುನ್ನಲೆಗೆ ಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹಿಜಾಬ್ ಧರಿಸಿರುವ ಮಹಿಳೆಯರ ಮೇಲೆ ಪೊಲೀಸರು ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ, ಪೊಲೀಸರು ತಮ್ಮ ದರ್ಪನ್ನು ಹೇಗೆ ತೋರುತ್ತಿದ್ದಾರೆ ನೋಡಿ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

2021ರ ಡಿಸೆಂಬರ್‌ನಲ್ಲಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆರು ಮುಸ್ಲಿಂ ಬಾಲಕಿಯರನ್ನು ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದಾಗ ಕರ್ನಾಟಕದಲ್ಲಿ ಉಂಟಾದ ವಿವಾದದ ಹಿನ್ನಲೆಯಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹೇಳುತ್ತಿದ್ದು, ಇದು ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಬೆಂಬಲಿಸಿ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ  ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ (@ಮಹುವಾಮೊಯಿತ್ರಾ ಮತ್ತು @ಮಮತಾ) ಅಧಿಕೃತ ವೀಡಿಯೊ ಎಂದು ಹೇಳಿಕೊಳ್ಳುತ್ತ “ಈ ಹಿಂದೆ ವಿದ್ಯಾರ್ಥಿಗಳನ್ನು ಹಿಜಾಬ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಹೋಗದಂತೆ ತಡೆಯಲಾಯಿತು. ಹುಡುಗಿಯರು ಪ್ರತಿಭಟಿಸಿದಾಗ, ಪೊಲೀಸರು ಕ್ರೂರ ರೀತಿಯಲ್ಲಿ ವರ್ತಿಸಿದರು. .” ಎಂಬ ಹೇಳಿಕೆಯೊಂದಿಗೆ ವೈರಲ್ ಮಾಡಲಾಗಿದೆ.

ಆದಾಗ್ಯೂ, ವೈರಲ್ ವೀಡಿಯೊ ಪಶ್ವಿಮ ಬಂಗಾಳಬಲ್ಲಿ ನಡೆದಿದೆ ಎನ್ನಲಾದ ಬುರ್ಖಾ ಹೋರಾಟದಲ್ಲ ಬದಲಿಗೆ ಅದು ಸೆಪ್ಟೆಂಬರ್ 2021 ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ಮೇಲೆ ಕರ್ನಾಟಕ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ದೃಶ್ಯಾವಳಿಗಳಾಗಿವೆ.

ಇದೇ ವಿಡಿಯೊವನ್ನು ಕೆಲವು ಫೇಸ್‌ಬುಕ್‌ ಬಳೆದಾರರು ಹಂಚಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವೀಡಿಯೊವನ್ನು ನೋಡುವಾಗ, 0.08 ಸೆಕೆಂಡ್‌ನಲ್ಲಿ, ಕನ್ನಡದಲ್ಲಿ ಬರವಣಿಗೆ ಇರುವ ಪೋಸ್ಟರ್‌ನಲ್ಲಿ “NEP” ಎಂಬ ಪದವನ್ನು ಬರೆಯುವುದನ್ನು ಕಾಣಬಹುದು.

ಘಟನೆಯ ಕುರಿತು ಸುದ್ದಿ ವರದಿಗಳಿಗಾಗಿ ಸರ್ಚ್ ಮಾಡಿದಾಗ, ಎನ್‌ಇಪಿ ವಿರುದ್ಧ ಪ್ರತಿಭಟಿಸಲು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ವಿಧಾನಸೌಧಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ಕುರಿತಾದ ವರದಿಗಳು ಕಂಡುಬಂದವು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಈ ಪ್ರತಿಭಟನೆಗಳನ್ನು ಆಯೋಜಿಸಿತ್ತು. ಪ್ರತಿಭಟನೆಯ ದೃಶ್ಯಗಳು ಮತ್ತು ನಂತರದ ಲಾಠಿ ಚಾರ್ಜ್ ಅನ್ನು ಸುದ್ದಿ ಸಂಸ್ಥೆಗಳು ಹಂಚಿಕೊಂಡವು.

“ಬೆಂಗಳೂರು: ಎನ್‌ಇಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ” ಎಂದು ಲೇಖನದ ಶೀರ್ಷಿಕೆ ಹೇಳಿದೆ. ವೈರಲ್ ವೀಡಿಯೊವನ್ನು ಮೊದಲು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ ಎರಡು ತಿಂಗಳ ನಂತರ, ತರಗತಿಗಳಲ್ಲಿ ಹಿಜಾಬ್ ಧರಿಸುವ ಕುರಿತಾದ ಹೇಳಿಕೆಗಳು ಮತ್ತು ಚರ್ಚೆಗಳು  ಡಿಸೆಂಬರ್ 2021 ರಲ್ಲಿ ಪ್ರಾರಂಭವಾಯಿತು.

ಪಶ್ಚಿಮ ಬಂಗಾಳ ಪೊಲೀಸರು ಮುರ್ಷಿದಾಬಾದ್‌ನಲ್ಲಿ ಹಿಜಾಬ್ ಪರ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ.

ಶಾಲಾ ಮುಖ್ಯೋಪಾಧ್ಯಾಯರು ಬುರ್ಖಾದ ಬದಲು ಶಾಲಾ ಸಮವಸ್ತ್ರವನ್ನು ಧರಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದ ನಂತರ ಕೆಲವು ಸ್ಥಳೀಯ ಗ್ರಾಮಸ್ಥರು ಮುರ್ಷಿದಾಬಾದ್‌ನ ಶಾಲೆಯ ಮೇಲೆ ಹೇಗೆ ದಾಳಿ ಮಾಡಿದ್ದಾರೆ ಎಂಬ ವರದಿಯು ಲಭ್ಯವಾಗಿದೆ. ಸುದ್ದಿ ವರದಿಗಳ ಪ್ರಕಾರ, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಪಶ್ಚಿಮ ಬಂಗಾಳದ  ಮುರ್ಷಿದಾಬಾದ್‌ನಲ್ಲಿ  ಹಿಜಾಬ್ ಪರ ಪ್ರತಿಭಟನಾಕಾರರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ NEP ವಿರೋದಿಸಿ ನಡೆದ ಪ್ರತಿಭಟನೆಯನ್ನು ಪಶ್ಚಿಮ ಬಂಗಾಳದ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: Fact check: ಫೆಬ್ರವರಿ 14 “ಪ್ರೇಮಿಗಳ ದಿನ” ಆಕಾಶಕಾಯದಲ್ಲಿ ಕಂಡ ವಿಚಿತ್ರ ದೃಶ್ಯಾವಳಿಗಳ ಹಿಂದಿನ ರಹಸ್ಯವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights