Fact check: ಗ್ರೀಕ್‌ನ ಸುಂದರ ದೃಶ್ಯವನ್ನು ಉತ್ತರ ಪ್ರದೇಶದ ಹೆದ್ದಾರಿ ಎಂದು ತಪ್ಪಾಗಿ ಹಂಚಿಕೆ

ಉತ್ತರ ಪ್ರದೇಶದ ಆಗ್ರಾ-ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿಯ ರಾತ್ರಿ ವೀಕ್ಷಣೆಯ ಚಿತ್ರ ಎಂದು ಹೇಳಿಕೊಂಡು ಚಂದ್ರನ ಕಡೆಗೆ ಸಾಗುತ್ತಿರುವ ರಸ್ತೆಯ ಸುಂದರವಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೋಟೋವನ್ನು ಹಂಚಿಕೊಳ್ಳುವ ಈ ಪೋಸ್ಟ್, ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಇಂತಹ ಯೋಜನೆಗಳನ್ನು ಉದ್ಘಾಟಿಸಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಸಂದರ್ಭದಲ್ಲಿ ಇಂತಹ ಅನೇಕ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಹಾಗಾಗಿ ಈ ಪೋಟೋ ನಿಜವಾಗಿಯೂ ಉತ್ತರ ಪ್ರದೇಶದ ಹೆದ್ದಾರಿಯದ್ದ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಫೋಟೋವನ್ನು 09 ಸೆಪ್ಟೆಂಬರ್ 2019 ರಂದು ‘ಆರ್ಕಿಟೆಕ್ಚರ್ & ಡಿಸೈನ್’ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ಫೇಸ್‌ಬುಕ್ ಪುಟದಲ್ಲಿ ಫೋಟೋವನ್ನು ಗ್ರೀಸ್‌ನ ವೆರಿಯಾ ನಗರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಉಲ್ಲೇಖಿಸಿದೆ. ಅಲ್ಲದೆ, ಈ ಫೇಸ್‌ಬುಕ್ ಪೇಜ್‌ನಲ್ಲಿ ಫೋಟೋವನ್ನು ಅರ್ಗಿರಿಸ್ ಕರಮೌಜಾಸ್‌  ತೆಗೆದಿದ್ದಾರೆ ಎಂದು ಅವರಿಗೆ ಕ್ರೆಡಿಟ್ ನೀಡಿದೆ.

ವೈರಲ್ ಫೋಟೋವನ್ನು ಸೆರೆ ಹಿಡಿದಿರುವ ಅರ್ಗಿರಿಸ್ ಕರಮೌಜಾಸ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು ಈ ಫೋಟೋವನ್ನು ಮೊದಲು 20 ಫೆಬ್ರವರಿ 2019 ರಂದು ತಮ್ಮ Instagram ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ವಿವರಣೆಯು ಹೀಗೆ ಹೇಳುತ್ತದೆ, “ಎಲ್ಲಾ ರಸ್ತೆಗಳು ಚಂದ್ರನತ್ತ ಸಾಗಿದಾಗ ದೃಷ್ಟಿ ಹಾಯಿಸಿದಷ್ಟು ಕೊನೆಯಾಗದ ನೋಟ ಎಂದು ಬರೆಯಲಾಗಿದೆ.   ದುರದೃಷ್ಟವಶಾತ್  ವಾತಾವರಣ ಬಹಳಷ್ಟು ಮಲಿನಗೊಂಡಿದೆ.”

 

View this post on Instagram

 

A post shared by Argiris (@argiris_karamouzas)

ಡಿಸೆಂಬರ್ 2020 ರಲ್ಲಿ, ಅವರ ಫೋಟೋವನ್ನು ನಿಯತಕಾಲಿಕದಲ್ಲಿ ಪ್ರಕಟಿಸಿದಾಗ, ಅರ್ಗಿರಿಸ್ ಕರಮೌಜಾ ಅವರು ಎರಡು ವರ್ಷಗಳ ನಂತರವೂ ತಮ್ಮ ‘ಮೂನ್ ಆಫ್ ವೆರಿಯಾ’ ಫೋಟೋವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಪತ್ರಿಕೆ ಮತ್ತು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರವು ವೆರಿಯಾದಲ್ಲಿನ ರಸ್ತೆಯ ಸುಂದರವಾದ ರಾತ್ರಿಯ ಸಮಯದಲ್ಲಿ ಸೆರೆಯಾದ ದೃಶ್ಯವು ಕಣ್ಮನ ಸೆಳೆಯುವಂತಿದೆ. ಹಾಗಾಗಿ ಈ ಫೋಟೋ  ಉತ್ತರ ಪ್ರದೇಶದ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಅಲ್ಲ ಎಂದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗ್ರೀಸ್‌ನಲ್ಲಿ ತೆಗೆದ ಫೋಟೋವನ್ನು ಉತ್ತರ ಪ್ರದೇಶದ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯ ಸುಂದರ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: Fact check: ಪ್ರೀತಿಸಿದ ಹುಡುಗಿಯನ್ನೆ ಕತ್ತು ಸೀಳಿ ಕೊಂದ ‘ಭಗ್ನ ಪ್ರೇಮಿ’ – ಘಟನೆಗೆ ಕೋಮು ಬಣ್ಣ ಹಚ್ಚಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights