Fact check: ಪ್ರೀತಿಸಿದ ಹುಡುಗಿಯನ್ನೆ ಕತ್ತು ಸೀಳಿ ಕೊಂದ ‘ಭಗ್ನ ಪ್ರೇಮಿ’ – ಘಟನೆಗೆ ಕೋಮು ಬಣ್ಣ ಹಚ್ಚಿ ಹಂಚಿಕೆ

ಸೂರತ್‌ನಲ್ಲಿ ಹಿಂದೂ ಹುಡುಗಿಯೊಬ್ಬಳು ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದಾಗ ಮುಸ್ಲಿಂ ಹುಡುಗನೊಬ್ಬ ಆಕೆಯ ಕುತ್ತಿಗೆಯನ್ನು ಕೊಯ್ದು ವಿಕೃತಿ ಮೆರೆದಿದ್ದಾನೆ ಎಂದು ಹೇಳುವ ಪೋಸ್ಟ್ ಜೊತೆ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಕುರಿತು ಪರಿಶೀಲಿಸೋಣ.

https://twitter.com/The_Real_Tiger0/status/1493236146825936896

ಫ್ಯಾಕ್ಟ್‌ಚೆಕ್:

ಯುವಕನೊಬ್ಬ ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕುವನ್ನು ಹಿಡಿದುಕೊಂಡು ವಿದ್ಯಾರ್ಥಿಯನ್ನು ಬಲವಂತವಾಗಿ ಭಯಪಡಿಸುವ ಮತ್ತು ನೋಡ ನೋಡತ್ತಿದ್ದಂತೆ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ಯೂವ ವಿಡಿಯೊ ಸಾಕಷ್ಟು ಆತಂಕವನ್ನು ಮೂಡಿಸಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಟೈಮ್ಸ್ ಆಫ್ ಇಂಡಿಯಾ ಲೇಖನದಲ್ಲಿ ಅದೇ ವೀಡಿಯೊ ಲಭ್ಯವಾಗಿದೆ. ವೈರಲ್ ಆಗುತ್ತಿರುವ ಈ ಘಟನೆಯು 12 ಫೆಬ್ರವರಿ 2022 ರಂದು ಸೂರತ್‌ನಲ್ಲಿ (ಕಾಮ್ರೇಜ್ ಪ್ರದೇಶ) ನಡೆದಿದ್ದು, ಆರೋಪಿಯ ಹೆಸರು ‘ಫೆನಿಲ್ ಗೋಯಾನಿ‘ ಎಂದು ಸಂತ್ರಸ್ತೆ ‘ಗ್ರಿಷ್ಮಾ ವೆಕಾರಿಯಾ’ ಎಂದು ತಿಳಿದು ಬಂದಿದೆ. ಇಬ್ಬರು ಶಾಲಾ ದಿನಗಳಲ್ಲಿ ಒಟ್ಟಿಗೆ ಓದುತ್ತಿದ್ದರು  ಮತ್ತು ‘ಶಾಲಾ ಸಮಯದ ಸ್ನೇಹಿತರು‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯು ಸೂರತ್‌ನಲ್ಲಿ ನಡೆದಿದ್ದರೂ, ಅದರಲ್ಲಿ  ಹಿಂದೂ, ಮುಸ್ಲಿಂ ಎಂಬ ಕೋಮು ಭಾವನೆಯಾಗಲಿ ಅಥವಾ ಧಾರ್ಮಿಕ ದೃಷ್ಟಿಕೋನವಾಗಲಿ ಇಲ್ಲ ಎಂದು ಸ್ಪಷ್ಟ ಪಡೆಸಿದ್ದಾರೆ. ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಸೂರತ್‌ನ ಕಾಮ್ರೇಜ್ ಎಂಬಲ್ಲಿ ಫೆಬ್ರವರಿ 12 ರಂದು 21 ವರ್ಷದ ಯುವತಿಯನ್ನು ಆಕೆಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ ಎಂದು ಸುದ್ದಿ ವರದಿ ತಿಳಿಸಿದೆ. ವರದಿಯ ಪ್ರಕಾರ, ಯುವತಿ ಗ್ರಿಷ್ಮಾ ವೆಕಾರಿಯಾ ಆರೋಪಿ ಫೆನಿಲ್ ಗೊಯಾನಿಯ ಪ್ರೀತಿಯನ್ನು ತಿರಸ್ಕರಿಸಿದಾಳೆ, ತನ್ನ ಪ್ರೀತಿಯನ್ನು ಆ ಯುವತಿ ತಿರಸ್ಕರಿಸಿದಳು ಎಂಬ ಕಾರಣಕ್ಕೆ ಯುವತಿಯ ಕತ್ತು ಕುಯ್ದು ಕೊಂದಿದ್ದಾನೆ ನಂತರ ಗೋಯಾನಿ ತನ್ನ ಕೈ ನರಗಳನ್ನು ಕತ್ತಿರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಯಾವುದೇ ಸುದ್ದಿ ವರದಿಗಳು ಆರೋಪಿಯನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂದು ಉಲ್ಲೇಖಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಶಾಲಾ ದಿನಗಳ ತನ್ನ ಸ್ನೇಹಿತೆಯು ಯುವಕನ ಪ್ರೀತಿಯನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಉದ್ರಿಕ್ತಗೊಡ ಯುವಕ ‘ಫೆನಿಲ್ ಗೊಯಾನಿ’ ಎಂಬ ಯುವತಿಯನ್ನು ಆಕೆಯ ಕುಟುಂಬದವರ ಕಣ್ಣೆದುರಲ್ಲೆ ಕುತ್ತಿಗೆ ಕೊಯ್ದು ಕೊಲೆ ಮಾಡಿ ತಾನು ಆತ್ಮಹತ್ಯಗೆ ಪ್ರಯತ್ನಿಸಿದ್ದಾನೆ. ಆದರೆ ಈ ಘಟನೆಯನ್ನು ಕೆಲವು ಕಿಡಿಗೇಡಿಗಳು  ತಿರುಚಿ ಹಿಂದೂ ಮುಸ್ಲಿಂ  ಎಂಬ ಕೋಮಿನ ಬಣ್ಣ ಹಚ್ಚಿ ಕೋಮು ಅಶಾಂತಿ ಸೃಷ್ಟಿಸಲು ಇದನ್ನು ಸುಳ್ಳು ಹೇಳಿಕೆಯೊಂದಿಗೆ ಬಳಸಿಕೊಂಡು ವಿಕೃತಿ ಮೆರೆದಿದ್ದಾರೆ.

ಹಾಗಾಗಿ ಇಂತಹ ಸುದ್ದಿಗಳು ಫೇಸ್‌ಬುಕ್ ಮತ್ತು ವಾಟ್ಸಪ್‌ ಗ್ರೂಪ್‌ಗಳಲ್ಲಿ ಯಾರಾದರೂ ಹಂಚಿಕೊಂಡಾಗ ತಾಳ್ಮೆಯಿಂದ ಪರಿಶೀಲಿಸಿ, ಘಟನೆಯ ನೈಜತೆಯನ್ನ ಪರಶೀಲಿಸದಿದ್ದರೆ ತಪ್ಪು ಸಂದೇಶಗಳು ಹಂಚಿಕೆಯಾಗುವ ಸಾದ್ಯತೆ ಇರುತ್ತದೆ. ಸತ್ಯಾಂಶ ತಿಳಿಯದ ಹೊರತು ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಕೋಮು ಹಿಂಸೆ ಪ್ರಚೋದನೆಗೆ ಕಾರಣರಾಗಬೇಡಿ ಎಂಬುದು Ensuddi.com ನ ಆಶಯ.


ಇದನ್ನು ಓದಿರಿ: Fact check: ನಾನು ಹಿಂದೆ RSS ಮತ್ತು BJP ಯಲ್ಲಿ ಇದ್ದೆ ಎಂದು ಕೇಜ್ರಿವಾಲ್ ಹೇಳಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights