ಅಲಹಾಬಾದ್ ವಿವಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಬಾಂಬ್ ತಯಾರಿಸುತ್ತಿದ್ದರು ಎಂಬುದು ಸುಳ್ಳು!

ಉತ್ತರ ‍ಪ್ರದೇಶದ ಅಲಹಾಬಾದ್ ವಿಶ್ವವಿದ್ಯಾಲಯವು ಈಗ ಭಯೋತ್ಪಾದನಾ ಚಟುವಟಿಕೆಗಳ ಹೊಸ ಕೇಂದ್ರವಾಗಿದ್ದು, ವಿವಿಯಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ 25 ಮುಸ್ಲಿಂ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂಬ ಪೋಸ್ಟ್ ಒಂದು ಹರಿದಾಡುತ್ತಿದೆ. ಯೋಗಿ ಆದಿತ್ಯನಾಥ ಅವರ ಸರ್ಕಾರ ಇದ್ದ ಕಾರಣಕ್ಕೆ ಈ ಬಂಧನ ಸಾಧ್ಯವಾಗಿದೆ ಎಂದೂ ಸಹ ಪ್ರತಿಪಾದಿಸಿ  ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಇವರೆಲ್ಲರೂ ಮುಸ್ಲಿಂ  ಹೀಗಾಗಿ ಯಾವ ಮಾಧ್ಯಮಗಳೂ ಈ ಸುದ್ದಿಯನ್ನು ಪ್ರಕಟಿಸುತ್ತಿಲ್ಲ’ ಎಂಬ ವಿವರ ಇರುವ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಿವಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಬಾಂಬ್ ತಯಾರಿಸುತ್ತಿದ್ದ ವೇಳೆ ಬಂಧನವಾಗಿದೆ ಎಂಬುದು ನಿಜವೆ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿರುವ ಶೀರ್ಷಿಕೆಯನ್ನು ಬಳಸಿಕೊಂಡು ಕೀ ವರ್ಡ್ ಸರ್ಚ್ ಮಾಡಿದಾಗ,  ಸುಮಾರು 2019 ರಿಂದ ಅಂದರೆ ಎರಡು ವರ್ಷಗಳಿಂದ ಇದೇ ಹೇಳಿಕೆಯೊಂದಿಗೆ  ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ ಹರಿದಾಡುತ್ತಿದೆ.

2019 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ನಾವು ನೋಡಿದ್ದೇವೆ. ಕನಿಷ್ಠ ಎರಡು ವರ್ಷಗಳಿಂದ ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹರಿದಾಡುತ್ತಿದೆ ಎಂದು ತಿಳಿದು ಬಂದಿದೆ. ನಾವು ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದಾಗ ಘಟನೆಗೆ ಸಂಬಂಧಿಸಿದಂತೆ ಪೋಸ್ಟೊಂದು ಲಭ್ಯವಾಗಿದೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 15 ಪುರುಷರು ಮತ್ತು 8 ಮಹಿಳೆಯರನ್ನು ಹೇಗೆ ಬಂಧಿಸಲಾಯಿತು ಎಂಬುದನ್ನು ವರದಿ ವಿವರಿಸುತ್ತದೆ.  ರತ್ಲಾಮ್‌ನ ಪೊಲೀಸ್ ಅಧೀಕ್ಷಕ ಅಭಿಷೇಕ್ ತಿವಾರಿ ಅವರು ಪತ್ರಿಕಾ ಲೇಖನವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ 15 ಯುವಕರ ಬಂಧನವನ್ನು ಖಚಿತಪಡಿಸಿದೆ.

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿರುವ ರಿಂಗೋಡ್ ಪೊಲೀಸ್ ಠಾಣೆ, ಧೋಧರ್ ಪೊಲೀಸ್ ಠಾಣೆ, ಜೌರಾ ಪೊಲೀಸ್ ಠಾಣೆ ಮತ್ತು ರತ್ಲಂ ಪೊಲೀಸ್ ಠಾಣೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯ ಮೂಲಕ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಕೇರಳದ ತಿರುವನಂತಪುರದವರು ಮತ್ತು ಒಬ್ಬರು ಪಶ್ಚಿಮ ಬಂಗಾಳದ ಪುರಾಲಿಯಾ ಜಿಲ್ಲೆಯವರು ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಬಂಧಿತರ ವಿರುದ್ಧ ವೇಶ್ಯಾವಾಟಿಕೆ ತಡೆ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 6, 7, 8 ಮತ್ತು 11/12 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದರ ಜತೆಗೆ . ‘ಇದು ಸುಳ್ಳು ಸುದ್ದಿ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 15 ಪುರುಷರು ಮತ್ತು 8 ಮಹಿಳೆಯರನ್ನು 2019ರ ಜುಲೈನಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಕೂರಿಸಿ, ತಾವು ನಿಂತುಕೊಂಡು ಪೊಲೀಸರು ತೆಗೆಸಿಕೊಂಡಿದ್ದ ಚಿತ್ರವನ್ನು ಪತ್ರಿಕೆಗಳು ಪ್ರಕಟಿಸಿದ್ದವು.

 

ಒಟ್ಟಾರೆಯಾಗಿ ಹೇಳುವುದಾದರೆ ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದ ಅಡ್ಡಗಳ ಮೇಲೆ ದಾಳಿ ಮಾಡಿ ಕೃತ್ಯದಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿದ ಹಳೆಯ ಫೋಟೋವನ್ನು ಬಳಸಿಕೊಂಡು, ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಬಾಂಬ್‌ ತಯಾರಿಸುತ್ತಿದ್ದ ವೇಳೆ 25 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: IAS ಅಧಿಕಾರಿಯು ದರ್ಪದಿಂದ ವರ್ತಿಸಿರುವ ಸುದ್ದಿ ಯಾವಾಗಿನದ್ದು? ಇಲ್ಲಿದೆ ಡೀಟೈಲ್ಸ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights