ಫ್ಯಾಕ್ಟ್‌ಚೆಕ್: ಸ್ಮಾರ್ಟ್‌ವಾಚ್ ಬಳಸಿ ಪೇಟಿಎಂ ಫಾಸ್ಟ್‌ಟ್ಯಾಗ್ ಹಣ ಲೂಟಿ ಮಾಡಬಹುದೆ?
ಕಾರಿನ ಗ್ಲಾಸ್ ಸ್ವಚ್ಛ ಮಾಡುತ್ತಿದ್ದ ಬಾಲಕನೊಬ್ಬ ತನ್ನ ಕೈಯಲ್ಲಿದ್ದ ಸ್ಮಾರ್ಟ್‌ವಾಚ್ ಮೂಲಕ ಪೇಟಿಎಂ ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ಸ್ಕ್ಯಾನ್ ಮಾಡಿ ಚಾಲಕನ ಖಾತೆಯಿಂದ ಹಣ ದೋಚುತ್ತಿರುವಂತೆ ಕಾಣುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
A video is spreading misinformation about Paytm FASTag that incorrectly shows a smartwatch scanning FASTag. As per NETC guidelines, FASTag payments can be initiated only by authorised merchants, onboarded after multiple rounds of testing. Paytm FASTag is completely safe & secure. pic.twitter.com/BmXhq07HrS
— Paytm (@Paytm) June 25, 2022
ಫ್ಯಾಕ್ಟ್‌ಚೆಕ್ :
ವೈರಲ್ ಆಗುತ್ತಿರುವ ವಿಡಿಯೊ ಕುರಿತಂತೆ ಸ್ಪಷ್ಟನೆ ನೀಡಿರುವ ಪೇಟಿಎಂ ಸಂಸ್ಥೆ, ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ ಫಾಸ್ಟ್ಯಾಗ್ ಸ್ಕ್ಯಾನ್ ಮಾಡಿ ಹಣ ದೋಚುವ ಸಾಧ್ಯತೆಯನ್ನು ತಳ್ಳಿ ಹಾಕಿದೆ. 25, 2022 NETC ಮಾರ್ಗಸೂಚಿಗಳ ಪ್ರಕಾರ, ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ನಿರ್ವಾಹಕರು ಸೇರಿದಂತೆ ನೋಂದಾವಣೆ ಮಾಡಿಕೊಂಡ ಅಧಿಕೃತ ವ್ಯಾಪಾರಿಗಳು ಮಾತ್ರ ಅವರ ನಿಗದಿತ ಸ್ಥಳಗಳಲ್ಲಿ ಫಾಸ್ಟ್ಯಾಗ್ ಮೂಲಕ ಶುಲ್ಕ ಪಡೆಯಬಹುದಾಗಿದೆ. ಹಲವು ಪರೀಕ್ಷೆಗಳ ನಂತರವೇ ಫಾಸ್ಟ್‌ಟ್ಯಾಗ್ ಸೇವೆ ಆರಂಭಿಸಲಾಗಿದೆ ಎಂದು ಅದು ಹೇಳಿದೆ.
ಸ್ಮಾರ್ಟ್‌ವಾಚ್ ಸ್ಕ್ಯಾನಿಂಗ್ ಮೂಲಕ ಹಣ ದೋಚುತ್ತಿರುವಂತೆ ವಿಡಿಯೊದಲ್ಲಿ ಪೇಟಿಎಂ ಫಾಸ್ಟ್ಯಾಗ್ ಕುರಿತು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. Paytm FASTag ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೇಟಿಎಂ ಸಂಸ್ಥೆ ಟ್ವೀಟ್ ಮೂಲಕ ತಿಳಿಸಿದೆ. ನಕಲಿ ವಿಡಿಯೊವನ್ನು ಸಹ ಟ್ವೀಟ್ ಜೊತೆ ಹಂಚಿಕೊಂಡಿದೆ.
A #viral Video claims that devices like watches are being used to swipe the #Fastag on vehicles, leading to fraudulent deduction of money from prepaid wallets.#PIBFactCheck:
▶️ This Video is #FAKE
▶️ Such transactions are not possible
▶️ Each Toll Plaza has a unique code pic.twitter.com/n7p01AXF4A
— PIB Fact Check (@PIBFactCheck) June 25, 2022
ಸರ್ಕಾರದ ‘PIB ಫ್ಯಾಕ್ಟ್ ಚೆಕ್’ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ನಕಲಿ ಹಗರಣದ ಬಗ್ಗೆ ಟ್ವೀಟ್ ಮಾಡಿದೆ. ಅಂತಹ ವಹಿವಾಟುಗಳು ಸಾಧ್ಯವಿಲ್ಲ. ಇಂಟರ್ನೆಟ್ ಮೂಲಕ ಮೋಸ ನಡೆಯುವುದಿಲ್ಲ ಎಂದು ತಿಳಿಸಿದೆ. “ಪ್ರತಿಯೊಂದು ಟೋಲ್ ಪ್ಲಾಜಾವು ವಿಶಿಷ್ಟವಾದ ಕೋಡ್ ಅನ್ನು ಹೊಂದಿದ್ದು ಅದನ್ನು ನಿರ್ದಿಷ್ಟ ಬ್ಯಾಂಕ್ ಮತ್ತು ಜಿಯೋ ಕೋಡ್‌ನೊಂದಿಗೆ ಮ್ಯಾಪ್ ಮಾಡಲಾಗಿದೆ. ಈ ಸಂಯೋಜನೆಯನ್ನು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್‌ನಲ್ಲಿ ಮ್ಯಾಪ್ ಮಾಡಲಾಗಿದೆ” ಎಂದು ಪಿಐಬಿ ಹೇಳಿಕೆ ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವಾಹನಗಳ ಮೇಲೆ ಫಾಸ್ಟ್‌ಟ್ಯಾಗ್ ಅನ್ನು ಸ್ವೈಪ್ ಮಾಡಲು ವಾಚ್‌ಗಳಂತಹ ಸಾಧನಗಳನ್ನು ಬಳಸಿ ವಂಚಿಸಿ ಪ್ರಿಪೇಯ್ಡ್ ವ್ಯಾಲೆಟ್‌ಗಳಿಂದ ಹಣವನ್ನು ದೋಚಲಾಗಿದೆ ಎಂಬ ವೈರಲ್ ವಿಡಿಯೊ ಸುಳ್ಳು ಮತ್ತು ತಪ್ಪು ದಾರಿಗೆಳುಯುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಜಾಬ್ ತೆಗಿಸಲು ಬಂದ ವ್ಯಕ್ತಿ ಮೇಲೆ ಹಲ್ಲೆ ಎಂಬುದು ನಿಜವೇ?

