ಫ್ಯಾಕ್ಟ್‌ಚೆಕ್: ಹಿಜಾಬ್ ತೆಗಿಸಲು ಬಂದ ವ್ಯಕ್ತಿ ಮೇಲೆ ಹಲ್ಲೆ ಎಂಬುದು ನಿಜವೇ?
ತಲೆಗೆ ಹಾಕಿದ್ದ ಬಟ್ಟೆಯನ್ನು ತೆಗೆಯುವಂತೆ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ದಮ್ಕಿ ಹಾಕಿದ್ದಾನೆ, ವ್ಯಕ್ತಿಯ ವರ್ತನೆಯನ್ನು ಸಹಿಸದ ಹಿಜಾಬ್ ಧರಿಸಿದ್ದ ಮಹಿಳೆ ಮತ್ತು ಕೆಲವರು ಆತನಿಗೆ ನಡು ರಸ್ತೆಯಲ್ಲೆ ಹಿಗ್ಗಾ ಮಗ್ಗಾ ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ವಿಡಿಯೊ ಪೋಸ್ಟ್‌ನ ಲಿಂಕ್‌ಅನ್ನು ಇಲ್ಲಿ ನೋಡಬಹುದು.
ಈ ವಿಡಿಯೋ ಪೋಸ್ಟ್‌ನ ಸತ್ಯಾಸತ್ಯತೆ ಏನೆಂದು ತಿಳಿಸುವಂತೆ ಏನ್ ಸುದ್ದಿ.ಕಾಂ ವಾಟ್ಸಾಪ್ ಸಂಖ್ಯೆಗೂ 9108969301 ಸಂದೇಶಗಳು ಬಂದಿದ್ದು, ವಿಡಿಯೋ ಪೋಸ್ಟ್‌ನಲ್ಲಿ ಮಾಡಾಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್‌ಚೆಕ್:
ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ವೀಡಿಯೊದಲ್ಲಿನ ಘಟನೆಗೆ ಸಂಬಂಧಿಸಿದ ಸುದ್ದಿ ವರದಿಗಳು ಲಭ್ಯವಾಗಿವೆ. ‘ನೈದುನಿಯಾ’ ಲೇಖನದ ಪ್ರಕಾರ, ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ವೀಡಿಯೊದಲ್ಲಿರುವ ವ್ಯಕ್ತಿಗೆ ಥಳಿಸಲಾಗಿದೆ ಎಂದು ವರದಿಯಾಗಿದೆ. ಥಳಿಸುವಾಗ ತನ್ನನ್ನು ಮುಟ್ಟುವಂತೆ ಮಹಿಳೆ ಸವಾಲು ಹಾಕುವುದನ್ನು ಕೂಡ ವಿಡಿಯೋದಲ್ಲಿ ಕೇಳಬಹುದು.
ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಸುದ್ದಿ ವಾಹಿನಿಗಳು ಘಟನೆಯನ್ನು ಕಿರುಕುಳದ ಪ್ರಕರಣ ಎಂದು ವರದಿ ಮಾಡಿದೆ. ಆದರೆ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ, ಒದೆ ತಿನ್ನುವ ವ್ಯಕ್ತಿ ಮಹಿಳೆಗೆ ತಲೆಯ ಹೊದಿಕೆಯನ್ನು ತೆಗೆಯುವಂತೆ ಹೇಳಿದ್ದಾನೆ ಎಂದು ಯಾವುದೇ ಸುದ್ದಿ ವರದಿಗಳು ಉಲ್ಲೇಖಿಸಿಲ್ಲ.
ವೈರಲ್ ವಿಡಿಯೊದ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬನನ್ನು ಮತ್ತೊಬ್ಬ ಕುತ್ತಿಗೆ ಪಟ್ಟಿ ಹಿಡಿದು ಎಳೆದುಕೊಂಡು ಬರುತ್ತಾನೆ ಎದುರಿಗೆ ಬೈಕ್‌ನಲ್ಲಿ ಬಂದ ಮಹಿಳೆ ಮತ್ತು ಪುರುಷ ಆ ವ್ಯಕ್ತಿ ಮೇಲೆ ಹಲ್ಲೆ ನಡೆಸುತ್ತಾರೆ. ಈ ವೇಳೆ ಮಹಿಳೆಯು ವ್ಯಕ್ತಿಯನ್ನು ಕುರಿತು ಬಯ್ಯುತ್ತಿರುವುದನ್ನು ವಿಡಿಯೊ ದೃಶ್ಯದಲ್ಲಿ ಕಾಣಬಹುದಾಗಿದೆ. ಇದಿಷ್ಟು ವಿಡಿಯೋ ತುಣುಕಿನಲ್ಲಿ ಕಂಡು ಬರುವ ದೃಶ್ಯಗಳಾಗಿವೆ. ಆದರೆ ಥಳಿತಕೊಳಪಟ್ಟ ವ್ಯಕ್ತಿಯು ಮಹಿಳೆಯು ತಲೆಗೆ ಸುತ್ತಿಕೊಂಡ ಬಟ್ಟೆಯ ಬಗ್ಗೆ ಮಾತನಾಡುವುದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಥಳಿಸಲಾಗಿದೆ. ಆದರೆ ಮಹಿಳೆ ತಲೆಗೆ ಸುತ್ತಿದ್ದ ಹಿಜಾಬ್ ರೀತಿಯ ಹೊದಿಕೆಯನ್ನು ತೆಗೆಯುವಂತೆ ಹೇಳೀದ್ದಕ್ಕಾಗಿ ವ್ಯಕ್ತಿಯನ್ನು ಥಳಿಸಲಾಗಿದೆ ಎಂಬ ವರದಿಗಳ ಉಲ್ಲೇಖಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಲುಂಗುರ ಧರಿಸಿದರೆ ರಕ್ತದೊತ್ತಡ ನಿಯಂತ್ರವಾಗುತ್ತದೆ ಎಂಬುದು ನಿಜವೆ?