ಫ್ಯಾಕ್ಟ್‌ಚೆಕ್ : ಹಳೆಯ ಸಂಬಂಧವಿಲ್ಲದ ವಿಡಿಯೊವನ್ನು ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿ ನಾಗಾ ಸಾಧುಗಳು ರ್‍ಯಾಲಿ ಎಂದು ಹಂಚಿಕೊಳ್ಳಲಾಗುತ್ತಿದೆ

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ನಾಗಾ ಸಾಧುಗಳ ರ್‍ಯಾಲಿಯನ್ನು ಮಾಡಿದ್ದಾರೆ  ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಬಗ್ಗೆ ಕೆಲವು ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ಪ್ರತಿಭಟನೆಯನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ, ವೈರಲ್ ವಿಡಿಯೊ ಕುರಿತು ಸರಿಯಾದ ಮಾಹಿತಿ ಕಂಡುಬಂದಿಲ್ಲ. ನಂತರ ಕೆಲವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ, ಸರ್ಚ್ ಮಾಡಿದಾಗ ಇದೇ ರೀತಿಯ ವೀಡಿಯೊವನ್ನು 2021 ರಲ್ಲಿ YouTube ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ವಿಡಿಯೊದ ಮಾಹಿತಿ ಪ್ರಕಾರ ಹರಿದ್ವಾರ ಕುಂಭಮೇಳಕ್ಕೆ ಸಂಬಂಧಿಸಿದೆ ಎಂದು ಯೂಟ್ಯೂಬ್ ಬಳಕೆದಾರರು ಶೀರ್ಷಿಕೆ ನೀಡಿದ್ದಾರೆ.

ಕುಂಭಮೇಳದ ಸಂದರ್ಭದಲ್ಲಿ ನಾಗಾ ಸಾಧುಗಳು ಮೆರವಣಿಗೆಯಲ್ಲಿ ಸಾಗಿದ ದೃಶ್ಯಗಳಾಗಿದ್ದು, ಒಂದೇ ಸ್ಥಳದಿಂದ ಅನೇಕ ರೀತಿಯ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ವೀಡಿಯೊದ ಸ್ಥಳ ಹರಿದ್ವಾರ. ವೀಡಿಯೊದಲ್ಲಿನ ಅಂಗಡಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 

ಆದರೆ, ಇತ್ತೀಚೆಗೆ ಕೆಲವು ಹಿಂದೂ ಸಂತರು ನೂಪುರ್ ಶರ್ಮಾ ಬೆಂಬಲಕ್ಕೆ ಬಂದಿದ್ದರು. ಅದಕ್ಕೆ ಸಂಬಂಧಿತ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ನಾಗಾ ಸಾಧುಗಳ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಕುಂಭಮೇಳದ ಸಂದರ್ಭದಲ್ಲಿ ನಡದ ಮೆರವಣಿಗೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸೌದಿ ದೊರೆ ಸಲ್ಮಾನ್‌ ಕಾಲಿಗೆ ಪ್ರಧಾನಿ ಮೋದಿ ನಮಸ್ಕರಿಸಿದ್ದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights