ಫ್ಯಾಕ್ಟ್‌ಚೆಕ್: ಸೌದಿ ದೊರೆ ಸಲ್ಮಾನ್‌ ಕಾಲಿಗೆ ಪ್ರಧಾನಿ ಮೋದಿ ನಮಸ್ಕರಿಸಿದ್ದು ನಿಜವಲ್ಲ

ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ನಮಸ್ಕರಿಸುತ್ತಿರುವ ಫೋಟೋ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ಫೋಟೋ ತಮಿಳಿನಲ್ಲಿದ್ದುಇದು ನಿಜವೇ ಎಂದು ಪರಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಫೋಟೋವನ್ನು ಗೂಗಲ್  ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸೆಪ್ಟೆಂಬರ್ 26, 2013 ರ NDTV ಲೇಖನದಲ್ಲಿ ಫೋಟೊವೊಂದು ಲಭ್ಯವಾಗಿದೆ. NDTV ಯು ಒಂದು ಲೇಖನದಲ್ಲಿ ಮೋದಿಯನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಫೋಟೋವನ್ನು ಬಳಸಿದೆ. ಪಕ್ಷದ ನಿರ್ಧಾರದ ನಂತರ ಮೋದಿ ಅವರು ಮೊದಲ ಬಾರಿಗೆ ಭೋಪಾಲ್‌ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ವೇದಿಕೆಯಲ್ಲಿ ಭೇಟಿಯಾದರು. ಅಡ್ವಾಣಿ ಮತ್ತು ಮೋದಿಯ ನಡುವೆ  ಇದ್ದ ಮನಸ್ತಾಪದಿಂದಾಗಿ ಮೋದಿ, ಅಡ್ವಾಣಿ ಕಾಲಿಗೆ ನಮಸ್ಕರಿಸಿದರೂ ಅದನ್ನು ನೋಡಿಯೂ ನೋಡದಂತೆ ನಿಂತಿದ್ದರು. ಈ ಫೋಟೊ ಆ ಸಮಯದಲ್ಲಿ ಸಂಚಲನ ಮೂಡಿಸಿತ್ತು.

2013 ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ)ಹಿರಿಯ   ನಾಯಕ ಲಾಲ್ ಕೃಷ್ಣ ಅಡ್ವಾಣಿಯವರಿಗೆ ನಮಸ್ಕರಿಸುತ್ತಿರುವ ಮೋದಿ,  ಪ್ರಧಾನಿ ಅಭ್ಯರ್ಥಿ ಮೋದಿ ಎಂದು ಘೋಷಿಸಿದ ಸಂದರ್ಭದಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ ಎಂದು BOOM ಕಂಡುಹಿಡಿದಿದೆ.

2016 ರಲ್ಲಿ ಮಾನ್ಯ ಪ್ರಧಾನಿಯವರು ತಮ್ಮ ಐದು ದಿನಗಳ ಪ್ರವಾಸದ ಭಾಗವಾಗಿ ಸೌದಿ ಅರೇಬಿಯಾದಿಂದ ಹಿಂದಿರುಗಿದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ ಅದೇ ನಕಲಿ ಚಿತ್ರವು ಏಪ್ರಿಲ್, 2016 ರಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಪತ್ರಕರ್ತನ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು. ಆ ಕುರಿತ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯನ್ನು ಇಲ್ಲಿ ಓದಿ. ಅಲ್ಲದೆ ಮೇ 2021 ರಲ್ಲಿ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ನಮಸ್ಕರಿಸುತ್ತಿರುವಂತೆ ಎಡಿಟ್ ಮಾಡಲಾದ ಫೋಟೋವನ್ನು ಹಂಚಿಕೊಂಡಿತ್ತು, ಅದು ಕೂಡ ವೈರಲ್ ಆಗಿತ್ತು.

ಖಾಸಗಿ ಸುದ್ದಿ ವಾಹಿನಿಯ ಚರ್ಚೆಯೊಂದರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಅರಬ್ ದೇಶಗಳೊಂದಿಗಿನ ಭಾರತೀಯ ರಾಜತಾಂತ್ರಿಕ ಸಂಬಂಧಗಳು ಉಲ್ಬಣಗೊಂಡವು. ಇಸ್ಲಾಮಿಕ್ ದೇಶಗಳಿಂದ ಭಾರತ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು. ಇದು ಶರ್ಮಾ ಅವರ ಅಮಾನತಿಗೂ ಕಾರಣವಾಯಿತು ಮತ್ತು ಮತ್ತೊಬ್ಬ ಬಿಜೆಪಿ ವಕ್ತಾರ ನವೀನ್ ಜಿಂದಾಲ್ ಅವರನ್ನು ಉಚ್ಚಾಟಿಸಲಾಯಿತು. ಈ ಹಿನ್ನೆಲೆಯಲ್ಲಿ ಮೇಲಿನ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ನರೇಂದ್ರ ಮೋದಿ 2013ರಲ್ಲಿ ಪಕ್ಷದ ಕಾರ್ಯಕ್ರಮದ ವೇದಿಕೆಯಲ್ಲಿ BJP ಹಿರಿಯ ನಾಯಕ LK ಅಡ್ವಾನಿ ಕಾಲಿಗೆ ನಮಸ್ಕರಿಸಿದ್ದ ಫೋಟೋವನ್ನು ಎಡಿಟ್ ಮಾಡಿ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್‌ ಕಾಲಿಗೆ ನಮಸ್ಕರಿಸುತ್ತಿರುವಂತೆ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇದು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights