ಫ್ಯಾಕ್ಟ್‌ಚೆಕ್: ಪಾಕ್ ವಿಡಿಯೊವನ್ನು ಭಾರತದ ಮುಸ್ಲಿಮರು ಎಂದು ತಪ್ಪಾಗಿ ಹಂಚಿಕೆ

ಭಾರತದಲ್ಲಿನ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಸಂದೇಶವನ್ನು ಹೊಂದಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಟಿವಿ ಆ್ಯಂಕರ್ ಒಬ್ಬರು ಮುಸ್ಲಿಂ ವ್ಯಕ್ತಿಗೆ ನಿನಗೆ ಎಷ್ಟು ಮಕ್ಕಳಿದ್ದಾರೆ ಎಂದು ಪ್ರಶ್ನಿಸುತ್ತಿರುವುದನ್ನು ವಿಡಿಯೊದಲ್ಲಿ ತೊರಿಸಲಾಗಿದೆ. ಮುಸ್ಲಿಂ ದಂಪತಿ  ಮತ್ತು ಮಕ್ಕಳನ್ನು ವೀಡಿಯೊದಲ್ಲಿ ಕಾಣಬಹುದು. ತನಗೆ 15 ಮಕ್ಕಳಿದ್ದಾರೆ ಎಂದು ಹೇಳುವ ಮೂಲಕ ಆ ವ್ಯಕ್ತಿ ಪ್ರತಿಕ್ರಿಯಿಸುತ್ತಾನೆ. ದೇಶದಲ್ಲಿ “ಹಿಂದೂಗಳಿಗೆ ಉದ್ಯೋಗದ ಕೊರತೆ”ಗೆ ಪ್ರಮುಖ ಕಾರಣ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆ ಎಂದು ಹಲವಾರು ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕೆಳಗಿನ ಬಲಭಾಗದಲ್ಲಿ ‘ಲೀಡರ್ ಟಿವಿ HD’ ಲೋಗೋ ಇದೆ. ‘ಲೀಡರ್ ಟಿವಿ HD’ ನ ಸಾಮಾಜಿಕ ಮಾಧ್ಯಮ ಚಾನಲ್‌ಗಳನ್ನು ಹುಡುಕಿದಾಗ, ಅದೇ ವಿಡಿಯೊವನ್ನು  11 ಏಪ್ರಿಲ್ 2022 ರಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ವೀಡಿಯೊವನ್ನು Instagram, Facebook ಮತ್ತು YouTube ಹ್ಯಾಂಡಲ್‌ಗಳಲ್ಲಿ ‘ಲೀಡರ್ ಟಿವಿ HD’ ಕಾಣಬಹುದು. ಹಲವಾರು ಹ್ಯಾಶ್‌ಟ್ಯಾಗ್‌ಗಳೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಲೀಡರ್ ಟಿವಿ ಎಚ್ ಡಿ’ ಯೂಟ್ಯೂಬ್ ಚಾನೆಲ್ ನ ‘ಅಬೌಟ್’ ವಿಭಾಗದಲ್ಲಿ ಪಾಕಿಸ್ತಾನ ಎಂದು ಲೊಕೇಶನ್ ನೀಡಿರುವುದನ್ನು ನೋಡಬಹುದು. ಆ ಚಾನೆಲ್‌ನಲ್ಲಿ ಪಾಕಿಸ್ತಾನದ ಹಲವಾರು ವಿಡಿಯೋಗಳನ್ನು ನೋಡಬಹುದು. ಅಲ್ಲದೆ, ವೆಬ್‌ಸೈಟ್ ವಿಳಾಸವನ್ನು “ww.leader.com.pk” ಎಂದು ನೀಡಲಾಗಿದೆ. ಹಾಗಾಗಿ ಪೋಸ್ಟ್ ಮಾಡಿರುವ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ.

ಒಂದು ದೇಶದ ಬಡತನಕ್ಕೆ, ಆ ದೇಶದ ಜನಸಂಖ್ಯೆಯೂ ಕಾರಣ ಎಂದು ಸಮಾಜ ವಿಜ್ಞಾನ ಪಾಠದಲ್ಲಿ ಓದಿಕೊಂಡು ಬಂದಿದ್ದೇವೆ. ಮುಂದುವರೆದು ಸರ್ಕಾರವು ಜನರನ್ನು ಸಂಪನ್ಮೂಲ ಎಂದು ಕರೆಯುತ್ತದೆ. ಆದರೆ ನಮ್ಮ ದೇಶದಲ್ಲಿ ಅರ್ಥಶಾಸ್ತ್ರಜ್ಞರು  ಜನಸಂಖ್ಯಾ ಸ್ಪೋಟ ಎನ್ನುತ್ತಾರೆ. ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಚೀನಾವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಬೇರೆ ದೇಶಗಳಿಗಿಂತ ಹೆಚ್ಚು ಅಭಿವೃದ್ದಿ ಹೊಂದಿದೆ.

ನಿರುದ್ಯೋಗ ಸಮಸ್ಯೆಗೆ ಜನಸಂಖ್ಯೆಯೇ ಕಾರಣ ಎಂಬುದು ತಪ್ಪು ಹೇಳಿಕೆ. ಕೇವಲ ಮುಸ್ಲಿಂ ಸಮುದಾಯದವರು ಮಾತ್ರವೇ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂಬುದು ಸಹ ತಪ್ಪು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ವರದಿಯಂತೆ ಹಿಂದೂ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ (ಮಹಿಳೆ ತಮ್ಮ ಜೀವಮಾನದಲ್ಲಿ ಹೆರುವ ಮಕ್ಕಳ ಸರಾಸರಿ ಸಂಖ್ಯೆ) ತೀವ್ರವಾಗಿ ಇಳಿಕೆಯಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಇತರ ಧರ್ಮಗಳ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರ ಫಲವತ್ತೆತ ದರ ತೀವ್ರವಾಗಿ ಕುಸಿದಿದೆ. 1992-93 ರಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆಯ ದರ 4.4 ಇದ್ದಿದ್ದು 2015-16ರಲ್ಲಿ ಅದು 2.6 ಗೆ ಕುಸಿದಿತ್ತು. 2019-2021ರಲ್ಲಿ ಮತ್ತಷ್ಟು ಕುಸಿದು 2.3 ಗೆ ಇಳಿದಿದೆ.

ಅದೇ ರೀತಿ ಹಿಂದೂ ಮಹಿಳೆಯರ ಫಲವತ್ತೆತೆಯ ದರ 1992-93 ರಲ್ಲಿ3.3 ಇದ್ದುದ್ದು 2015-16 ರಲ್ಲಿ ಅದು 2.1ಕ್ಕೆ ಕುಸಿದಿತ್ತು. 2019-2021ರಲ್ಲಿ ಮತ್ತಷ್ಟು ಕುಸಿದು 1.94 ಗೆ ಇಳಿದಿದೆ. ಹಿಂದೂಗಳಲ್ಲಿ ಅದು 41.2% ಇಳಿಕೆಯಾದರೆ, ಮುಸ್ಲಿಮರಲ್ಲಿ 46.5% ಇಳಿಕೆಯಾಗಿದೆ. ಈ ಎಲ್ಲಾ ಅಂಶಗಳು ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ ಎಂಬ ವಾದವನ್ನು ತಳ್ಳಿ ಹಾಕುತ್ತದೆ.

ಪಾಕಿಸ್ತಾನದ ವಿಡಿಯೊವನ್ನು ಭಾರತದ ಮುಸ್ಲಿಮರು ಎಂದು ತಪ್ಪಾಗಿ ಹೇಳಿರುವುದು ಅಲ್ಲದೆ ಮುಸ್ಲಿಮರಿಂದ ನಿರುದ್ಯೋಗ ಸೃಷ್ಟಿಯಾಗಿದೆ ಎಂದು ಸುಳ್ಳು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದ ವೀಡಿಯೊವನ್ನು ತಿರುಚಿ ಭಾರತದ ಮುಸ್ಲಿಮರು ಅತೀ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಇದರಿಂದಾಗಿ ಭಾರತದ ಜನಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ಇದರಿಂದ ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಸಂಬಂಧವಿಲ್ಲದ ವಿಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಲ್ಫ್ ಕಂಪನಿಗಳು ಭಾರತದ ಕಾರ್ಮಿಕರನ್ನು ವಜಾಗೊಳಿಸಿ ವಾಪಸ್ ಕಳುಹಿಸುತ್ತಿವೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.