ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಗಾಂಧಿ ಶ್ರೀಮಂತೆ ಎಂಬುದು ಸುಳ್ಳು!

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ಇಂಗ್ಲೆಂಡ್ ರಾಣಿಗಿಂತ ಶ್ರೀಮಂತರು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೋಸ್ಟ್‌ನಲ್ಲಿ ಸೋನಿಯಾ ಗಾಂಧಿಯವರ ಆಸ್ತಿ ಮೌಲ್ಯ. 12,000 ಕೋಟಿಯಷ್ಟು ಇದೆ ಎಂದು ಉಲ್ಲೇಖಿಸಲಾಗಿದೆ. ಶ್ರೀಮಂತರ ಪಟ್ಟಿಯಲ್ಲಿ 12 ನೇ ಸ್ಥಾನವನ್ನು ಪಡೆದಿದ್ದಾರೆ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.

ಅಲ್ಲದೆ BJP ಬೆಂಬಲಿತ ಫೇಸ್‌ಬುಕ್ ಪೇಜ್‌ನಲ್ಲಿ ಇದನ್ನು ಶೇರ್ ಮಾಡಿದ್ದು “ಬ್ರಿಟನ್ ರಾಣಿಗಿಂತಲೂ ಇಟಲಿಯ ಸೋನಿಯಾ ಗಾಂಧಿ ಶ್ರೀಮಂತೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ  ಎಂದು ವ್ಯಂಗ್ಯಾತ್ಮಕ ಪೋಸ್ಟ್‌ವೊಂದನ್ನು ಹಾಕಿದ್ದಾರೆ

ಸಾಮಾಜಿಕ ಮಾಧ್ಯಮಗಳಲ್ಲಿ ಸೋನಿಯಾ ಗಾಂಧಿ ಕುರಿತು ಮಾಡಲಾಗಿರುವ ಪೋಸ್ಟ್‌ನ ವಾಸ್ತವ ಏನೆಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ : 

ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತಹ ಯಾವುದೇ ಸಮೀಕ್ಷೆಯ ವರದಿಯನ್ನು ನಾವು ಕಂಡುಹಿಡಿಯಲಾಗಲಿಲ್ಲ. ಸೋನಿಯಾ ಗಾಂಧಿ ಅವರು ಇಂಗ್ಲೆಂಡ್ ರಾಣಿಗಿಂತ ಶ್ರೀಮಂತರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ವಾಸ್ತವವಾಗಿ ಅವರು ಪ್ರತಿಷ್ಠಿತ ಏಜೆನ್ಸಿಗಳು (ಇಲ್ಲಿ ಮತ್ತು ಇಲ್ಲಿ) ವರದಿ ಮಾಡಿದ ಯಾವುದೇ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಕೆಳಗೆ ತಿಳಿಸಿದಂತೆ, ಕೆಲವು ಸುದ್ದಿ ಸಂಸ್ಥೆಗಳು ಇದೇ ರೀತಿಯ ಪ್ರತಿಪಾದನೆಯೊಂದಿಗೆ ಲೇಖನಗಳನ್ನು ಪ್ರಕಟಿಸಿದ ನಂತರ ಇದೇ ರೀತಿಯ ಹೇಳಿಕೆಯ ಪೋಸ್ಟ್ ಈ ಹಿಂದೆ ವೈರಲ್ ಆಗಿತ್ತು. ಸೋನಿಯಾ ಗಾಂಧಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನುವ ಸುದ್ದಿಗಳ ಮೂಲವನ್ನು ಪ್ರಶ್ನಿಸಿದ  ನಂತರ ಕೆಲವು ಏಜೆನ್ಸಿಗಳು  ಸೋನಿಯಾ ಗಾಂಧಿಗೆ ಸಂಬಂಧಿಸಿದ ಸುದ್ದಿಯನ್ನು ತೆಗೆದಿದ್ದವು

ಸೋನಿಯಾ ಗಾಂಧಿಗೆ ಮನೆ ಇಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಇತ್ತೀಚಿನ (2019) ಚುನಾವಣಾ ಅಫಿಡವಿಟ್ ಪ್ರಕಾರ, ಸೋನಿಯಾ ಗಾಂಧಿ ಅವರು ಹೊಂದಿರುವ ಆಸ್ತಿ ಮೌಲ್ಯ ರೂ. 11.82 ಕೋಟಿ.  ಇಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ಸೋನಿಯಾ ಅವರು ಭಾರತದಲ್ಲಿ ಒಂದು ಸ್ವಂತ ಮನೆ ಹೊಂದಿಲ್ಲ, ಆದರೂ, ಅವರು ಇಟಲಿಯ ಪೂರ್ವಜರ ಆಸ್ತಿಯಲ್ಲಿ ಪಾಲನ್ನು ಹೊಂದಿದ್ದಾರೆ.

2019 ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಅಫಿಡವಿಟ್ ನಲ್ಲಿ ಸೋನಿಯಾ ಗಾಂಧಿ ತಮ್ಮ ಆಸ್ತಿಯ ವಿವರವನ್ನು ಘೋಷಿಸಿದ್ದು ಒಟ್ಟು ಅವರ ಆಸ್ತಿಯ ಮೌಲ್ಯ 12 ಕೋಟಿ ರೂ. 2014ರಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ 9 ಕೋಟಿ ಆದಾಯವನ್ನು ಹೊಂದಿದ್ದರು ಎಂದು ವರದಿಯಾಗಿತ್ತು. ಹಾಗೂ ವಿಶ್ವದ ಟಾಪ್ 20 ಶ್ರೀಮಂತ ಮಹಿಳೆಯರಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ಸುಳ್ಳು. ಆ ಪಟ್ಟಿಯ 20 ನೇ ಸ್ಥಾನದಲ್ಲಿರುವ ಶ್ರೀಮಂತ ಮಹಿಳೆ ಸುಮಾರು 5.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ಸೋನಿಯಾ ಗಾಂಧಿಯವರ ಆಸ್ತಿಗೆ ಹೋಲಿಸಿದರೆ ಹೆಚ್ಚು. ಹಾಗಾಗಿ, ಸೋನಿಯಾ ಗಾಂಧಿ ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಎಂದು ಮಾಡಲಾಗಿರುವ ಪೋಸ್ಟ್ ಸುಳ್ಳು ಹಾಗೂ ತಪ್ಪುದಾರಿಗೆಳೆಯುವಂತಾದ್ದು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಲ್ಫ್ ಕಂಪನಿಗಳು ಭಾರತದ ಕಾರ್ಮಿಕರನ್ನು ವಜಾಗೊಳಿಸಿ ವಾಪಸ್ ಕಳುಹಿಸುತ್ತಿವೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.