ಫ್ಯಾಕ್ಟ್‌ಚೆಕ್ : ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ತಂದೆ ಮಗನ ಸೆಲ್ಫಿ ಚಿತ್ರ ಭಾರತದ್ದಲ್ಲ!

ರೈಲ್ವೆ ಇಲಾಖೆಯಲ್ಲಿ ರೈಲ್ವೆ ಗಾರ್ಡ್‌ಆಗಿ ಕಾರ್ಯನಿರ್ವಹಿಸುತ್ತಿರುವ ತಂದೆ ಇದೇ ಇಲಾಖೆಯಲ್ಲಿ ತಂದೆ ಜೊತೆ ರೈಲ್ವೆಯಲ್ಲಿ ಜೂನಿಯರ್  TTE ಆಗಿ ಕಾರ್ಯನಿರ್ವಹಿಸುತ್ತಿರುವ ಮಗನ ಸೆಲ್ಫಿ, ಅದು ಚಲುಸುತ್ತಿರುವ ಬೇರೆ ಬೇರೆ ರೈಲಿನಲ್ಲಿ ಈ ವರ್ಷದ ಚಿತ್ರ !  ಎನ್ನುವ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ತಂದೆ ಮತ್ತು ಮಗ ಇಬ್ಬರೂ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವಂತೆ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಸೆಲ್ಫಿ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ ಉತ್ತಮ ಗುಣಮಟ್ಟದ ಚಿತ್ರವನ್ನು ಹೊಂದಿರುವ ಟ್ವೀಟ್‌ ಲಭ್ಯವಾಗಿದೆ. ಫೋಟೋದಲ್ಲಿರುವ ಇಬ್ಬರು ತಂದೆ ಮತ್ತು ಮಗ ಎಂಬುದು ನಿಜ ಆದರೆ ಈ ಫೋಟೋ ಬಂದಿರುವುದು ಭಾರತದಿಂದಲ್ಲ, ಬಾಂಗ್ಲಾದೇಶದಿಂದ ಎಂದು ತಿಳಿದು ಬಂದಿದೆ. ಪೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕನ್ನಡಕವನ್ನು ಹೊಂದಿರುವ ವ್ಯಕ್ತಿ ಧರಿಸಿರುವ ಬ್ಯಾಡ್ಜ್‌ನಲ್ಲಿ ‘ಬಾಂಗ್ಲಾದೇಶ ರೈಲ್ವೇಸ್’ ಎಂದು ಬರೆಯಲಾಗಿದೆ. ಹೀಗಾಗಿ, ಬ್ಯಾಡ್ಜ್ ಹೊಂದಿರುವ ವ್ಯಕ್ತಿ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಇದು ಸೂಚಿಸುತ್ತದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಕೆಲವು ಬಾಂಗ್ಲಾದೇಶದ ಸುದ್ದಿ ವಾಹಿನಿಗಳು ಅದೇ ಚಿತ್ರದೊಂದಿಗೆ ವರದಿ ಮಾಡಿದ  ಲೇಖನಗಳು ಕಂಡುಬಂದಿವೆ. (ಇಲ್ಲಿ ಮತ್ತು ಇಲ್ಲಿ). ಈ ಲೇಖನಗಳು 2019 ರ ಹಿಂದಿನದು ಮತ್ತು ಈ ಲೇಖನಗಳ ಪ್ರಕಾರ, ಸೆಲ್ಫಿಯಲ್ಲಿರುವ ವ್ಯ್ತಗಳಿಬ್ಬರು ನಿಜವಾಗಿಯೂ ತಂದೆ ಮತ್ತು ಮಗ, ಮತ್ತು ಅವರಿಬ್ಬರೂ ಬಾಂಗ್ಲಾದೇಶ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ. ಮಗ ವಾಸಿಬುರ್ ರೆಹಮಾನ್ ಟಿಟಿಇ ಆಗಿ ಕೆಲಸ ಮಾಡುತ್ತಾರೆ ಮತ್ತು ಅವನ ತಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಾರೆ. ಅವರಿಬ್ಬರೂ ಫುಲ್ಬರಿ ರೈಲು ನಿಲ್ದಾಣಕ್ಕೆ ಬಂದಾಗ ಮಗ ಸೆಲ್ಫಿಯೊಂದಿಗೆ ಈ ಚಿತ್ರವನ್ನು ಸೆರೆಹಿಡಿದಿದ್ದಾನೆ.

ಇದಲ್ಲದೆ, ಮಗ ವಾಸಿಬುರ್ ರೆಹಮಾನ್ ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಅವರು ಮೇ 2019 ರಲ್ಲಿ ಅದೇ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಹೀಗಾಗಿ, ಈ ಸೆಲ್ಫಿ ಫೋಟೋ ಭಾರತದಲ್ಲ,  ಬಾಂಗ್ಲಾದೇಶದಿಂದ ಬಂದಿದೆ ಎಂದು ಖಾತ್ರಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಸೆಲ್ಫಿಯಲ್ಲಿ ತಂದೆ ಮತ್ತು ಮಗ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವುದು ನಿಜ, ಆದರೆ, ಅವರು ಬಾಂಗ್ಲಾದೇಶದವರು ಮತ್ತು ಅವರು ಬಾಂಗ್ಲಾದೇಶ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ. ಮಗ ಧರಿಸಿರುವ ಟಿಟಿಇ ಬ್ಯಾಡ್ಜ್‌ನಲ್ಲಿ ‘ಬಾಂಗ್ಲಾದೇಶ ರೈಲ್ವೆ’ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಇದಲ್ಲದೆ, 2019 ರಲ್ಲಿ ಹಲವು ಬಾಂಗ್ಲಾದೇಶದ ಸುದ್ದಿ ವಾಹಿನಿಗಳು ವರದಿ ಮಾಡಿರುವ  ಲೇಖನಗಳಲ್ಲಿ  ತಂದೆ ಮತ್ತು ಮಗ ಬಾಂಗ್ಲಾದೇಶ ರೈಲ್ವೇಸ್‌ನಲ್ಲಿ ಕೆಲಸ ಮಾಡುತ್ತಿರುವ ಅದೇ ಚಿತ್ರವನ್ನು ವರದಿ ಮಾಡಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನೂಪುರ್ ಶರ್ಮಾ ಪ್ರವಾದಿ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights