ಫ್ಯಾಕ್ಟ್‌ಚೆಕ್ : ‘ಮುಹಮ್ಮದ್’ ಚಿತ್ರದ ಪೋಸ್ಟರ್‌ಅನ್ನು ಎಡಿಟ್ ಮಾಡಿ ಹಂಚಲಾಗಿದೆ

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಇಸ್ಲಾಂ ಧರ್ಮದ ಪ್ರವಾದಿಯ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು, ಭಾರತ ಸರ್ಕಾರ ಇದರಿಂದ ಮುಜುಗರಕ್ಕೆ ಒಳಗಾಗಿ ನೂಪುರ್ ಶರ್ಮಾ ಅವರನ್ನು ಅಮಾನತ್ತುಗೊಳಿಸಿತ್ತು. ಪ್ರವಾದಿ ಮುಹಮ್ಮದ್ ಅವರ ಜೀವನದ ಕುರಿತು ಕಂಡುಬರುವ ಚಲನಚಿತ್ರದ ಪೋಸ್ಟರ್ ಬೇರೆ ಬೇರೆ ಹೇಳಿಕೆಗಳೊಂದಿಗೆ  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಟ್ವಿಟರ್ ಬಳಕೆದಾರ @Narpats62770513 ಹಿಂದಿಯ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಹಂಚಿಕೊಂಡಿದ್ದು ಅದರಲ್ಲಿ “ಟ್ರೇಲರ್ರೇ ಹಿಂಗಿರುವಾಗ , ಸಿನಿಮಾ ಹೆಂಗಿರತ್ತೆ ಎಂದು ಊಹಿಸಿ?” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ನೂಪುರ್ ಶರ್ಮ ಪ್ರವಾದಿ ಕುರಿತು ನಿಂದನಾತ್ಮಕ ಹೇಳಿಕೆಗೆ ಆಕೆ ಕ್ಷಮೆ ಕೇಳಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸುವಂತಹ ಪ್ರವಾದಿ ಮುಹಮ್ಮದ್ ಕುರಿತು ಪೋಸ್ಟ್‌ರ್‌ಗನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟರ್‌ನಲ್ಲಿರುವ ಕೆಲವು ಕ್ಲೂಗಳನ್ನು  ಕೀವರ್ಡ್‌ಗಳಾಗಿ ಬಳಸಿ   ಗೂಗಲ್‌ನಲ್ಲಿಸರ್ಚ್ ಮಾಡಿದಾಗ, ಇದು ಖ್ಯಾತ ಇರಾನಿನ ಚಲನಚಿತ್ರ ನಿರ್ಮಾಪಕ ಮಜಿದ್ ಮಜಿದಿ ನಿರ್ದೇಶಿಸಿದ ‘ಮುಹಮ್ಮದ್’ (2015) ಚಿತ್ರದ IMDB ಪೇಜ್ ನಲ್ಲಿ ಅದೇ ರೀತಿಯ ಪೋಸ್ಟ್‌ರ್ ಲಭ್ಯವಾಯಿತು. ಮೂಲ ಚಿತ್ರದಲ್ಲಿರುವ  ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ರ್‌ಗಿಂತಲೂ ಸಂಪೂರ್ಣ ಭಿನ್ನವಾಗಿದೆ.

2015ರಲ್ಲಿ ತೆರೆಕಂಡ ಮುಹಮ್ಮದ್ ಚಿತ್ರದ ಪೋಸ್ಟರ್
2015ರಲ್ಲಿ ತೆರೆಕಂಡ ಮುಹಮ್ಮದ್ ಚಿತ್ರದ ಪೋಸ್ಟರ್

ಪ್ರವಾದಿಯ ಯಾವುದೇ ಚಿತ್ರವನ್ನು ಧರ್ಮನಿಂದೆಯೆಂದು ನಂಬುವ ಸುನ್ನಿ ಮುಸ್ಲಿಂ ಗುಂಪುಗಳಿಂದ ಚಿತ್ರಕ್ಕೆ ವ್ಯಾಪಕ ಟೀಕೆ ಕೇಳಿಬಂದಿದ್ದವು. ಇದಲ್ಲದೆ, ಮಜಿದಿ ಮತ್ತು ಸಂಗೀತ ಸಂಯೋಜಕ ಎಆರ್ ರೆಹಮಾನ್ ವಿರುದ್ಧ ಚಲನಚಿತ್ರ ನಿರ್ಮಿಸಿದ್ದಕ್ಕಾಗಿ ಫತ್ವಾಗಳನ್ನು ಸಹ ಹೊರಡಿಸಲಾಯಿತು. 2020 ರಲ್ಲಿ, ಮಹಾರಾಷ್ಟ್ರದ ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ಅವರು ಚಲನಚಿತ್ರದ ಪ್ರಸಾರವನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಮಗುವಿನೊಂದಿಗೆ ವ್ಯಕ್ತಿಯ ಫೋಟೋ :

ಫೋಟೋವನ್ನು ಕ್ರಾಪ್ ಮಾಡಿ  Google ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದು Omar ShEkoo ಎಂಬ ಈಜಿಪ್ಟ್ ಫೋಟೋಗ್ರಾಫರ್‌ನ Instagram ಪುಟದಲ್ಲಿ ಪೋಸ್ಟ್‌ ಮಾಡಲಾಗಿರುವ ಪೋಟೋ ಲಭ್ಯವಾಯಿತು. ಶೀರ್ಷಿಕೆಯ ಪ್ರಕಾರ, ಕೈರೋದ ಅಲ್-ತೌಹೀದ್ ಮಸೀದಿಯಲ್ಲಿ 2019 ರಲ್ಲಿ ಈದ್ ಪ್ರಾರ್ಥನೆಯ ಸಮಯದಲ್ಲಿ ಫೋಟೋವನ್ನು ಕ್ಲಿಕ್ ಮಾಡಲಾಗಿದೆ.

 

View this post on Instagram

 

A post shared by Omar ShEkoo 📷 (@oomarshekoo.ph)

ಒಮರ್‌ನ ಇನ್‌ಸ್ಟಾಗ್ರಾಮ್ ಪುಟದ ಮೂಲಕ ಹುಡುಕುವಾಗ , ಅದೇ ಈವೆಂಟ್‌ನ ಮತ್ತೊಂದು ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ಇದು ಹಿಂದಿನ ಚಿತ್ರದ ಶೀರ್ಷಿಕೆಯಂತೆಯೇ ಇದ್ದು. ಮೊದಲು ಪೋಸ್ಟ್‌ ಮಾಡಿದ  ಫೋಟೋದ ನಾಲ್ಕು ದಿನಗಳ ನಂತರ ಎರಡನೆ ಪೋಸ್ಟ್ ಮಾಡಲಾಗಿದೆ. ಈ ಚಿತ್ರದಲ್ಲಿ ಮಗು ಮತ್ತು ವೃದ್ಧರೂ ಕಾಣಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಂಬಂಧವಿಲ್ಲದ ಫೋಟೋವನ್ನು 2015ರಲ್ಲಿ  ಮಜಿದಿ ನಿರ್ದೇಶಿಸಿದ ‘ಮುಹಮ್ಮದ್’ ಎಂಬ ಇರಾನಿನ ಚಲನಚಿತ್ರಕ್ಕೆ ಸಂಬಂಧಿಸಿದ ಚಿತ್ರದ ಪೋಸ್ಟರ್‌ಅನ್ನು ಎಡಿಟ್ ಮಾಡಿ ವ್ಯಕ್ತಿ ಮತ್ತು ಮಗುವಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಪ್ಪು ದಾರಿಗೆಳೆಯುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ ಫ್ಯಾಕ್ಟ್‌ಚೆಕ್: ಪ್ರತಿಭಟನಾಕಾರರು ಪೊಲೀಸ್‌ ಪೇದೆಯನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights