ಫ್ಯಾಕ್ಟ್‌ಚೆಕ್: ಪ್ರತಿಭಟನಾಕಾರರು ಪೊಲೀಸ್‌ ಪೇದೆಯನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು

ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಜೂನ್ 10 ರಂದು ಭಾರತದ ಹಲವು ರಾಜ್ಯಗಳಲ್ಲಿ  ಪ್ರತಿಭಟನೆಗಳು ನಡೆದಿದ್ದವು. ಕೊಲ್ಕತ್ತಾದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ, ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು.

ಪ್ರತಿಭಟನೆ ವೇಳೆ ಉದ್ರಿಕ್ತಗೊಂಡ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.  ವಿಡಿಯೊದ ದೃಶ್ಯಗಳಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಬಿದ್ದಿದ್ದು ಅವರ ಪಕ್ಕದಲ್ಲಿ ರೈಫಲ್‌ ಇರುವುದನ್ನು ಕಾಣಬಹುದು,  ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಪೋಸ್ಟ್‌ನಲ್ಲಿ ಹೇಳಿರುವಂತೆ ಪೊಲೀಸ್‌ ಅಧಿಕಾರಿಯನ್ನು ಉದ್ರಿಕ್ತ ಜನರ ಗುಂಪು ಹತ್ಯೆ ಮಾಡಿದೆಯೇ ಎಂದು ಪೋಸ್ಟ್‌ನ ಪ್ರತಿಪಾದನೆನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವರದಿಗಳ ಪ್ರಕಾರ, ಜೂನ್ 10 ರಂದು ಮಧ್ಯಾಹ್ನ 2.30 ರ ಸುಮಾರಿಗೆ, ಕೋಲ್ಕತ್ತಾ ಸಶಸ್ತ್ರ ಪೊಲೀಸ್‌ನ ಐದನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಚೌಡುಪ್ ಲೆಪ್ಚಾ ಸಾರ್ವಜನಿಕರ ಮೇಲೆ ಸುಮಾರು 10-15 ಸುತ್ತು ಗುಂಡು ಹಾರಿಸಿದ್ದಾನೆ. ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ ಕಚೇರಿ ಬಳಿಯ ಲೋವರ್ ರೇಂಜ್ ರೋಡ್‌ನಲ್ಲಿ ಈ ಘಟನೆ ನಡೆದಿದೆ, ಅಲ್ಲಿ ಕಾನ್‌ಸ್ಟೆಬಲ್ ಅನ್ನು ನಿಯೋಜಿಸಲಾಗಿತ್ತು. ಎಂದು ಇಂಡಿಯಾಟುಡೇ ವರದಿ ಮಾಡಿದೆ.

ಈ ಘಟನೆ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ಮಹಿಳೆಯೊಬ್ಬರಿಗೆ ಗುಂಡು ತಗುಲಿ ಹತರಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ, ನಂತರ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಕಾನ್ಸ್‌ಟೇಬಲ್‌ಗೆ ಸಾರ್ವಜನಿಕರು  ಗುಂಡು ಹಾರಿಸಿದ್ದಾರೆ ಎಂದು ಹೇಳುವ ಯಾವುದೇ ವರದಿಗಳು ಕಂಡುಬಂದಿಲ್ಲ.

ಘಟನೆ ಬಗ್ಗೆ ಸುದ್ದಿಗಾರೊಂದಿಗೆ  ಮಾತನಾಡಿರುವ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಕುಮಾರ್ ಗೋಯಲ್, ಘಟನೆಯಲ್ಲಿ ಗುಂಡು ಹಾರಿಸಿರುವ ಪೊಲೀಸ್ ಸಿಬ್ಬಂಧಿ ಹೆಸರು ಲೆಪ್ಚಾ ಎಂದಿದ್ದು, 2017 ರಲ್ಲಿ ಲೆಪ್ಚಾ ಅವರ ತಂದೆ ಸೇವೆಯಲ್ಲಿ ನಿಧನರಾದ ನಂತರ ಅನುಕಂಪದ ಆಧಾರದ ಮೇಲೆ 2021 ರಲ್ಲಿ ಇವರು ಕೆಲಸಕ್ಕೆ ನೇಮಕಗೊಂಡರು. ಅವರು ಹತ್ತು ದಿನಗಳ ರಜೆಯಲ್ಲಿದ್ದರು ಮತ್ತು ಜೂನ್ 9 ರಂದು ಕೆಲಸಕ್ಕೆ ಮರಳಿದರು. ಕಾನ್‌ಸ್ಟೆಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿರುವಂತೆ ಪೊಲೀಸ್ ಪೇದೆಯನ್ನು ಪ್ರತಿಭಟನಾಕಾರರು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು ಮತ್ತು ಈತನೇ ಜನರ ಮೇಲೆ ಗುಂಡು ಹಾರಿಸಿ ನಂತರ ತಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿ ಜನರಿಂದ ಯಾವುದೇ ತಪ್ಪು ನಡೆದಿಲ್ಲ ಬದಲಿಗೆ ಪೊಲೀಸ್ ಪೇದೆಯೇ ಕೃತ್ಯ ಎಸಗಿರುವುದು ಕಂಡು ಸಾರ್ವಜನಿಕರು ಆಕ್ರರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಘಟನೆಯಲ್ಲಿ ಪೊಲೀಸ್‌ ಪೇದೆಯನ್ನು ಸಾರ್ವಜನಿಕರು ಹತ್ಯೆ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಮಾಡಲಾಗಿರುವ ವಿಡಿಯೋ ಪೋಸ್ಟ್‌ ತಪ್ಪಾಗಿದೆ. ಪೊಲೀಸರು ಗಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯೇಸುವನ್ನು ಪ್ರಾರ್ಥಿಸಿ ಸತ್ತ ಮಗುವನ್ನು ಉಳಿಸಿಕೊಂಡ ತಾಯಿ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.