ಫ್ಯಾಕ್ಟ್‌ಚೆಕ್: ಯೇಸುವನ್ನು ಪ್ರಾರ್ಥಿಸಿ ಸತ್ತ ಮಗುವನ್ನು ಉಳಿಸಿಕೊಂಡ ತಾಯಿ! ವಾಸ್ತವವೇನು?

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ, ಆದರೆ ಹುಟ್ಟುವಾಗಲೇ ಮಗು ತೀರಿ ಹೋಗಿರುತ್ತದೆ. ಆಗ ತಾಯಿ ಯೇಸುವಿಗೆ ಪ್ರಾರ್ಥನೆ ಸಲ್ಲಿಸುತ್ತಾಳೆ. ತಕ್ಷಣ ಮಗುವಿನ ಜೀವ ಬಂದು ಅಳಲು ಪ್ರಾರಂಭಿಸುತ್ತದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ಪ್ರಕಾರ, ಜನಿಸುವಾಗಲೇ ಮಗು ಸತ್ತಿದೆ ಎಂದು ವೈದ್ಯರು ಘೋಷಿಸಿದ್ದರು, ಆದರೆ ಹೆತ್ತ ತಾಯಿಯ ಪ್ರಾರ್ಥನೆಯಿಂದಾಗಿ ಮಗು ಬದುಕುಳಿಯುತ್ತದೆ ಎಂದು ಪ್ರತಿಪಾದಿಸಿರುವ ವಿಡಿಯೊ ಪೋಸ್ಟ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 2020 ರಲ್ಲಿ Facebook ಮತ್ತು YouTube ಬಳಕೆದಾರರು ಅಪ್‌ಲೋಡ್‌ ಮಾಡಿರುವ ಒಂದೇ ರೀತಿಯ ದೃಶ್ಯಗಳನ್ನು ಹೊಂದಿರುವ ಹಲವು ವೀಡಿಯೊಗಳು ಲಭ್ಯವಾಗಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಯೂಟ್ಯೂಬ್ ಬಳಕೆದಾರರು ಬಹಿಯಾದ ಫಿಯೆರಾ ಡಿ ಸಂತಾನಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದನ್ನು ಉಲ್ಲೇಖಿಸಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ಮಗು ಸತ್ತು ಹುಟ್ಟಿದೆ ಎಂದು ಎಲ್ಲಿಯೂ ಹೇಳಿಲ್ಲ.

ಮತ್ತಷ್ಟು ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಸರ್ಚ್ ಮಾಡಿದಾಗ, ವೀಡಿಯೊದ ನಿಜವಾದ ಸತ್ಯವನ್ನು ವರದಿ ಮಾಡುವ ಹಲವಾರು ಸುದ್ದಿ ಲೇಖನಗಳನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಮಗು ಸಹಜ ಹೆರಿಗೆ ಮೂಲಕ ಜನಿಸಿದ್ದು, ತಾಯಿಯ ತೋಳುಗಳಲ್ಲಿ ಆರೋಗ್ಯವಾಗಿದೆ ಎಂದು ಕೆಲವು ಸುದ್ದಿ ಲೇಖನಗಳು ವರದಿ ಮಾಡಿದೆ. ಫಿಯೆರಾ ಡಿ ಸಂತಾನಾ ಆಸ್ಪತ್ರೆಯಲ್ಲಿ ತಾಯಿಯ ಕೃತಜ್ಞತಾ ಪ್ರಾರ್ಥನೆಯನ್ನು ಕೇಳುತ್ತಾ ಮಗು ಅಳುತ್ತಿರುವಾಗ ಈ ವೀಡಿಯೊವನ್ನು ತೆಗೆಯಲಾಗಿದೆ ಎಂದು ವರದಿಯಾಗಿದೆ.

ಫಿಯೆರಾ ಡಿ ಸಂತಾನಾ ಆಸ್ಪತ್ರೆಯ ಪತ್ರಿಕಾ ಹೇಳಿಕೆಯು ಹೀಗೆ ಹೇಳುತ್ತದೆ, “ಮಗುವು ಸತ್ತು ಹುಟ್ಟಿದೆ ಮತ್ತು ತಾಯಿಯ ಪ್ರಾರ್ಥನೆಯ ನಂತರ ಮಗು ಉಸಿರಾಡಲು ಮತ್ತು ಅಳಲು ಪ್ರಾರಂಭಿಸಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊ ನಕಲಿ ಸುದ್ದಿಯಾಗಿದೆ. ಆಸ್ಪತ್ರೆ ಇನಾಸಿಯಾ ಪಿಂಟೋ ಡಾಸ್ ಸ್ಯಾಂಟೋಸ್ (ಮಹಿಳಾ ಆಸ್ಪತ್ರೆ) ಅನ್ನು ನಿರ್ವಹಿಸುವ ಪುರಸಭೆಯಾ ಫೀರಾ ಡಿ ಸಂತಾನಾ ಆಸ್ಪತ್ರೆಯ ಫೌಂಡೇಶನ್ ಈ ಮಾಹಿತಿಯು ನಿಜವಲ್ಲ ಎಂದು ಸ್ಪಷ್ಟಪಡಿಸುತ್ತದೆ. ಮಗು ಹುಟ್ಟುವಾಗ ಸತ್ತಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ತಾಯಿಯೊಬ್ಬಳು ಯೇಸುವನ್ನು ಪ್ರಾರ್ಥಿಸಿದ ನಂತರ ಸತ್ತ ಮಗು ಬದುಕುಳಿದಿದೆ ಎಂದು ಹೇಳಲಾಗಿರುವ ವಿಡಿಯೋ ಸುಳ್ಳು ಎಂದು ಖಚಿತವಾಗಿದೆ. ವಾಸ್ತವವಾಗಿ ಜನಿಸುವಾಗ ಮಗು ಸತ್ತಿರಲಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: Laal Singh Chadda ಚಿತ್ರ Boycott ಮಾಡಲು ಕರೀನಾ ಕರೆ ನೀಡಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights