ಫ್ಯಾಕ್ಟ್‌ಚೆಕ್: Laal Singh Chadda ಚಿತ್ರ Boycott ಮಾಡಲು ಕರೀನಾ ಕರೆ ನೀಡಿದರೆ?

ಟಾಮ್ ಹ್ಯಾಂಕ್ಸ್ ಅವರ ಹಾಲಿವುಡ್‌ನ ಹಿಟ್ ಸಿನಿಮಾ “ಫಾರೆಸ್ಟ್ ಗಂಪ್” ನಿಂದ ರಿಮೇಕ್ ಮಾಡಲಾಗಿರುವ ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಲನಚಿತ್ರ “ಲಾಲ್ ಸಿಂಗ್ ಚಡ್ಡಾ” ಚಿತ್ರದ ಸುತ್ತ ಕಳೆದ ಒಂದು ವರ್ಷದಿಂದ ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ. KGF ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ಬಿಡುಗಡೆ ಮಾಡಿದ ಕಾರಣಕ್ಕೆ ಲಾಲ್ ಸಿಂಗ್ ಚಡ್ಡಾ ಚಿತ್ರ ತನ್ನ ರಿಲೀಸ್ ಡೇಟ್‌ಅನ್ನು ಮುಂದೂಡಿತ್ತು. ಮೇ 30ರಂದು ಚಿತ್ರದ ಟ್ರೇಲರ್ ರಿಲೀಸ್‌ ಆದಾಗ #BoycottLaalSinghChaddha ಎನ್ನುವ ಟ್ರೆಂಡಿಂಗ್ ಕೂಡ ಮಾಡಲಾಗಿತ್ತು. ಇದೆಲ್ಲದರ ನಡುವೆ ಈಗ ಬಾಲಿವುಡ್‌ ನಟಿ ಕರೀನಾ ಕಪೂರ್, ಕೂಡ “ಲಾಲ್ ಸಿಂಗ್ ಚಡ್ಡಾ” ಚಿತ್ರವನ್ನು ಬಹಿಷ್ಕರಿಸುವಂತೆ ಅಭಿಮಾನಿಗಳಿಗೆ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಅಮೀರ್ ಖಾನ್‌ಗೆ ನಾಯಕಿಯಾಗಿ ಅಭಿನಯಿಸಿದ್ದು, ಅವರು ನಿಜವಾಗಿಯೂ ಕರೆ ನೀಡಿದ್ದಾರೆಯೇ ಎಂದು ಪರಿಶೀಲಿಸೋಣ.

“ಲಾಲ್ ಸಿಂಗ್ ಚಡ್ಡಾ” ಸಿನಿಮಾವನ್ನು ಬಹಿಷ್ಕರಿಸುವಂತೆ ಕರೀನಾ ಕಪೂರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳೆಕೆದಾರರು ವಿಡಿಯೋ ಪೋಸ್ಟ್‌ಅನ್ನು #BoycottLaalSinghChaddha ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ.

 

ಫ್ಯಾಕ್ಟ್‌ಚೆಕ್:

ವೈರಲ್ ವೀಡಿಯೊದ ಕುರಿತು ಹುಡುಕಿದಾಗ ಕರೀನಾ ಕಪೂರ್ ನೆಪೋಟಿಸಂ ಬಗ್ಗೆ 2020ರಲ್ಲಿ ಮಾತನಾಡಿರುವ ವಿಡಿಯೊ ಎಂದು ತಿಳಿದುಬಂದಿದೆ. “ಪ್ರೇಕ್ಷಕರು ನಮ್ಮನ್ನು ಬೆಳೆಸಿದ್ದಾರೆ, ನೀವು ಇಲ್ಲದಿದ್ದರೆ ನಾವು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. 21 ವರ್ಷದ ಕರಿಯರ್ ಮೂಲಕ ನಾನು ಕಷ್ಟದ ಹಾದಿ ಸವೆಸಿದ್ದೇನೆ. ಈ ನೆಪೋಟಿಸಂಗಳನ್ನ ಸ್ಟಾರ್ ಮಾಡಿದ್ದು ಇದೇ ಜನ,  ಆಪ್ ಜಾ ರೇ ಹೋ ನಾ ಫಿಲ್ಮ್ ದೇಖನೇ? ಮತ್ ಜಾವೋ (ನೀವು ಚಲನಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಹೋಗುತ್ತೀರಾ? ಹೋಗಬೇಡಿ). ಯಾರೂ ನಿಮ್ಮನ್ನು ಬಲವಂತ ಮಾಡಿಲ್ಲ. ಈ  ಚರ್ಚೆಯೇ  ಸಂಪೂರ್ಣ ವಿಚಿತ್ರವಾಗಿದೆ ಎನ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ ಕರೀನಾ ಕಪೂರ್ ಮಾತನಾಡುತ್ತಿರುವ ನೆಪೋಟಿಸಂ ವಿಚಾರದ ವೈರಲ್ ವಿಡಿಯೊವನ್ನು 2020 ರಲ್ಲಿ ಸುಶಾಂತ್ ಸಿಂಗ್‌ ರಜಪೂತ್ ಸಾವಿನ ನಂತರ ಉಂಟಾದ ಚರ್ಚೆಯಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ವಿಡಿಯೊದಲ್ಲಿರುವ ಹೇಳಿಕೆಗೂ “ಲಾಲ್ ಸಿಂಗ್ ಚಡ್ಡಾ” ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಸಮಯದಲ್ಲಿ ಇಂಡಿಯಾ ಟೈಮ್ಸ್‌ನ ಮತ್ತೊಂದು ವರದಿಯಲ್ಲಿ ಪತ್ರಕರ್ತೆ ಬರ್ಖಾ ದತ್‌ಗೆ “ವಿ ದಿ ವುಮೆನ್” ಗಾಗಿ ನೀಡಿದ ಸಂದರ್ಶನದ ವೇಳೆ ಇದೇ ವಿಚಾರಗಳನ್ನು ಉಲ್ಲೇಖಿಸಲಾಗಿದೆ.

ಕರೀನಾ ಕಪೂರ್ ಅವರು ನೀಡಿರುವ ಸಂದರ್ಶನದ ದೀರ್ಘ ಆವೃತ್ತಿಯನ್ನು ಬರ್ಖಾ ದತ್‌  ನೇತೃತ್ವದ ಸುದ್ದಿವಾಹಿನಿಯ ಮೊಜೊ ಸ್ಟೋರಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದೆ. “ಕರೀನಾ ಕಪೂರ್ ಅವರನ್ನು ಅಲ್ಟಿಮೇಟ್ ಇನ್ಸೈಡರ್ ಎಂದು ಕರೆಯಲಾಗುತ್ತದೆ. ಅದಕ್ಕೆ ಪ್ರತಿಕ್ರಿಯಿಸುತ್ತ ಕರೀನಾ ಕಪೂರ್ ಮೇಲಿನ ಹೇಳಿಕೆಯನ್ನು ನೀಡುತ್ತಾರೆ. ಈ ವಿಡಿಯೋ 2020ರಲ್ಲಿ ಮಾಡಲಾದ ವರದಿಯ ಹಿನ್ನಲೆಯದ್ದು ಎಂದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರ ಈ ವೀಡಿಯೋದಲ್ಲಿ ಕರೀನಾ ಕಪೂರ್ ಬಾಲಿವುಡ್‌ನಲ್ಲಿ ನೆಪೋಟಿಸಂ ಚರ್ಚೆಯ ಸಂದರ್ಭದಲ್ಲಿ ಮಾತನಾಡಿರುವ ವಿಡಿಯೋ ಕ್ಲಿಪ್ ಅನ್ನು ಎಡಿಟ್ ಮಾಡಿ, “ಲಾಲ್ ಸಿಂಗ್ ಚಡ್ಡಾ” ಚಿತ್ರವನ್ನು Boycott ಮಾಡಿ ಎಂದು ಕರೀನಾ ಕಪೂರ್ ಹೇಳಿದ್ದಾರೆ ಎಂದು ತಿರುಚಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಕರೀನಾ ಕಪೂರ್, ಅಮೀರ್ ಖಾನ್ ನಟನೆಯ “ಲಾಲ್ ಸಿಂಗ್ ಚೆಡ್ಡಾ” ಚಿತ್ರದ ಬಗ್ಗೆ ಎಲ್ಲಿಯೂ ಇಂತಹ ಹೇಳಿಕೆಯನ್ನು ನೀಡಿಲ್ಲ ಎಂಬುದು ಸ್ಪಷ್ಟ.

ಅಮೀರ್ ಖಾನ್​ ಮತ್ತು ಅದ್ವೈತ್ ಚಂದನ್ ಅವರು ‘ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದು, ಇದೀಗ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರ 11 ಆಗಸ್ಟ್ 2022ರಂದು ಬಿಡುಗಡೆಯಾಗಲಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ ಎಂದು ತಪ್ಪಾಗಿ ಬಾಂಗ್ಲಾದೇಶದ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights