ಫ್ಯಾಕ್ಟ್‌ಚೆಕ್: ಜಾರ್ಖಂಡ್‌ನಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬುದು ನಿಜವಲ್ಲ

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಹೊಸದಾಗಿ ಆಯ್ಕೆ ಆದ ಪಂಚಾಯಿತಿ ಸಮಿತಿ ಸದಸ್ಯರೊಬ್ಬರ ಗೆಲುವನ್ನು ಪಾಕಿಸ್ತಾನ್ ಜಿಂದಾಬಾದ್‌ ಎಂಬ ಘೋಷಣೆ ಕೂಗಿ ಸಂಭ್ರಮಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಆಯ್ಕೆ ಆದ ಪಂಚಾಯಿತಿ ಸದಸ್ಯ ಮತ್ತು ಇತರ 62 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’ ಎಂದು ದೇಶದ ಪ್ರಮುಖ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಪರ ಘೋಷಣೆಗಳು ಮೊಳಗಿದವು ಎಂದು ಬಿಜೆಪಿ ಜಾರ್ಖಂಡ್ ವಕ್ತಾರ ಪ್ರತುಲ್ ಶಾ ದೇವ್ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಹಜಾರಿಬಾಗ್‌ನದ್ದು ಎಂದು ಹೇಳಲಾಗಿದ್ದು, ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಜಾರ್ಖಂಡ್‌ನ ಬಿಜೆಪಿಯ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, “ಜಾರ್ಖಂಡ್ ಮುಖ್ಯಮಂತ್ರಿಗೆ “ಭಾರತ್ ಮಾತಾ ಕಿ ಜೈ” ಘೋಷಣೆಯಿಂದ ಸಮಸ್ಯೆ ಎದುರಾದರೆ, ರಾಜ್ಯದಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆಗಳು ಮೊಳಗುತ್ತವೆ” ಎಂದು ಟ್ವೀಟ್‌ನಲ್ಲಿ ಅನ್ಯ ಮತ ದ್ವೇಷದ ಟೀಕೆಯನ್ನೂ ಮಾಡಿದ್ದಾರೆ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಈ ವಿಡಿಯೊ ಜೊತೆ ನೀಡಲಾಗಿರುವ ವಿವರ ಸುಳ್ಳು ಎಂದು ‘ಆಲ್ಟ್‌ನ್ಯೂಸ್‌’ ವೇದಿಕೆ ವರದಿ ಮಾಡಿದೆ. ಪಂಚಾಯಿತಿ ಚುನಾವಣೆ ಗೆದ್ದ ಅಮೀನ ಅನ್ಸಾರಿ ಅವರ ಮಗ ಶಮೀಮ್‌ ಅನ್ಸಾರಿ ಅವರನ್ನು ಖುದ್ದಾಗಿ ಸಂಪರ್ಕಿಸಿ ಘಟನೆಗೆ ಸಂಬಂಧಿಸಿದ ಹಲವಾರು ವಿಡಿಯೊಗಳನ್ನು ತರಿಸಿಕೊಂಡಿದ್ದು, ವಿಡಿಯೊಗಳಲ್ಲಿ ‘ಛೋಟಿ ಛಾ ಜಿಂದಾಬಾದ್‌’ ಎಂಬ ಘೋಷಣೆ ಕೇಳುತ್ತದೆ. ಅದರ ಜೊತೆ ‘ನಿಜಮ್‌ ಅನ್ಸಾರಿ ಜಿಂದಾಬಾದ್‌’, ‘ಜಗದೀಶ್‌ ಸಾಬ್‌ ಜಿಂದಾಬಾದ್‌’ ಮತ್ತು ‘ಶಮೀಮ್‌ ಅನ್ಸಾರಿ ಜಿಂದಾಬಾದ್‌’ ಎಂಬ ಘೋಷಣೆಗಳೂ ಕೇಳುತ್ತವೆ. ‘ಪಾಕಿಸ್ತಾನ್ ಜಿಂದಾಬಾದ್‌’ ಎಂಬ ಘೋಷಣೆ ಯಾವ ವಿಡಿಯೊದಲ್ಲೂ ಕೇಳುವುದಿಲ್ಲ. ಆದರೆ 62 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು ನಿಜ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ “ಛೋಟಿ ಛಾ ಜಿಂದಾಬಾದ್‌, ‘ನಿಜಮ್‌ ಅನ್ಸಾರಿ ಜಿಂದಾಬಾದ್‌’, ಜಗದೀಶ್‌ ಸಾಬ್‌ ಜಿಂದಾಬಾದ್‌’ ಮತ್ತು ‘ಶಮೀಮ್‌ ಅನ್ಸಾರಿ ಜಿಂದಾಬಾದ್‌’ ಎಂದು ಕೂಗಿರುವ ಘೋಷಣೆಗಳನ್ನು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.

ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ – ವಾಟ್ಸಾಪ್‌ಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights