ದೇಶದಲ್ಲಿ 1.32 ಲಕ್ಷ ಹೊಸ ಕೊರೊನಾ ಕೇಸ್ : 2,713 ಜನ ಬಲಿ!
ದೇಶದಲ್ಲಿ 1.32 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 2,713 ಜನ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,32,364 ಹೊಸ ಪ್ರಕರಣಗಳು ಮತ್ತು 2,713 ಸಾವುಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ತಮಿಳುನಾಡು 24,405 ಪ್ರಕರಣಗಳು, ಕೇರಳದಲ್ಲಿ 18,853 ಪ್ರಕರಣಗಳು, ಕರ್ನಾಟಕದಲ್ಲಿ 18,324 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 15,229 ಪ್ರಕರಣಗಳು ಮತ್ತು ಆಂಧ್ರಪ್ರದೇಶ 11,421 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಗರಿಷ್ಠ ದೈನಂದಿನ ಸಾವುಗಳನ್ನು (643) ವರದಿ ಮಾಡಿದೆ.
ಈ ಮಧ್ಯೆ ದೇಶದಲ್ಲಿ ಕೋವಿಡ್ -19 ಲಸಿಕೆ ಕೊರತೆ ಎದುರಾಗಿದ್ದು ವಿಶ್ವದಾದ್ಯಂತ ಲಸಿಕೆಗಳನ್ನು ವಿತರಿಸುವ ಯೋಜನೆಯನ್ನು ಅಮೇರಿಕಾ ಪ್ರಕಟಿಸಿದೆ. ಇದರಲ್ಲಿ ಭಾರತ ಸೇರಿದಂತೆ 25 ಮಿಲಿಯನ್ ಡೋಸ್‌ಗಳನ್ನು ತಕ್ಷಣ ವಿತರಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕದ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರೊಂದಿಗೆ ಮಾತನಾಡುತ್ತಾ ಧನ್ಯವಾದ ಅರ್ಪಿಸಿದರು.