ಫ್ಯಾಕ್ಟ್‌ಚೆಕ್: ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ – ವಾಟ್ಸಾಪ್‌ಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ

ಈ ದೇಶದ ಭವಿಷ್ಯ ಯುವಜನರು. ಅವರ ಸ್ವಾವಲಂಭನೆಗೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. ‘ಯುವಜನರು ಉದ್ದಿಮೆ ಆರಂಭಿಸಲು ಪ್ರಧಾನ ಮಂತ್ರಿ ಮುದ್ರಾ (ಮೈಕ್ರೋ ಯೂನಿಟ್ಸ್ ಡೆವಲಪ್‌ಮೆಂಟ್ & ರಿಫೈನಾನ್ಸ್ ಏಜೆನ್ಸಿ MUDRA) ಯೋಜನೆ ಅಡಿ ₹ 10 ಲಕ್ಷದ ಸಾಲವನ್ನು ನೀಡಲಾಗುತ್ತಿದೆ. ದೇಶದ ಎಲ್ಲ ಯುವಕರಿಗೂ ಈ ಯೋಜನೆ ಅಡಿ ಸಾಲ ನೀಡಲಾಗುತ್ತದೆ. ಅರ್ಹರಿಗೆ ಈಗಾಗಲೇ ಸಾಲ ಮಂಜೂರಾಗಿದೆ. ಈ ಪೋಸ್ಟ್‌ನಲ್ಲಿ ಇರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ, ಅರ್ಜಿ ಹಾಕಿ. ಜತೆಗೆ ಅರ್ಜಿ ಶುಲ್ಕ ಮತ್ತು ಪ್ರಕ್ರಿಯಾ ಶುಲ್ಕವಾಗಿ ₹4,500 ಅನ್ನು ಲಿಂಕ್‌ನಲ್ಲಿ ಸೂಚಿಸಿರುವ ಖಾತೆಗೆ ಜಮೆ ಮಾಡಿ. ಒಂದೇ ದಿನದಲ್ಲಿ ನಿಮ್ಮ ಖಾತೆಗೆ ₹ 10 ಲಕ್ಷ ಬರಲಿದೆ’ ಎಂಬ ವಿವರ ಇರುವ ಪೋಸ್ಟ್‌ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

‘ಈ ಪೋಸ್ಟ್‌ನಲ್ಲಿ ಇರುವ ವಿವರ ಸುಳ್ಳು. ಇದೊಂದು ಸುಳ್ಳು ಸುದ್ದಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಮುದ್ರಾ ಯೋಜನೆ ಅಡಿ ಯಾರಿಗೂ ಸಾಲವನ್ನು ಪೂರ್ವ ಮಂಜೂರು ಮಾಡಿರುವುದಿಲ್ಲ. ಇದಕ್ಕಾಗಿ ಅರ್ಜಿ ಶುಲ್ಕವಾಗಿ ₹4,500 ಸಂಗ್ರಹಿಸುತ್ತಿಲ್ಲ. ಈ ಲಿಂಕ್‌ನಲ್ಲಿರುವ ಖಾತೆಗೆ ಹಣ ಜಮೆ ಮಾಡಿ, ಹಣ ಕಳೆದುಕೊಳ್ಳಬೇಡಿ’ ಎಂದು ಪಿಐಬಿ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬಡವರಿಗೆ ಕೇಂದ್ರ ಸರ್ಕಾರ ರೂ 30,628 ನೀಡುತ್ತದೆ ಎಂಬ ಸಂದೇಶ ನಕಲಿ


ಇದರ ಬೆನ್ನಲ್ಲೇ ಮತ್ತೊಂದು ನಕಲಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂದೇಶದ ಪ್ರಕಾರ ದೇಶದಲ್ಲಿನ ನಿರುದ್ಯೋಗಿ ಯುವಕರಿಗೆ 3500ರೂ ಮಾಸಿಕ ಭತ್ಯೆಯನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ ಎನ್ನಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಈ ಸಂದೇಶವನ್ನು ನಕಲಿ ಎಂದು ಘೋಷಿಸಿದೆ. ಜೊತೆಗೆ ಇಂತಹ ನಕಲಿ ಸಂದೇಶಗಳನ್ನು ನಂಬದಿರಲು ವಿನಂತಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನ ಮಂತ್ರಿ ಮುದ್ರಾ ಹೆಸರಿನಲ್ಲಿ ಯುವಕರಿಗೆ ಸಾಲ ಸೌಲಭ್ಯ ಮತ್ತು ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂಬ ಸಂದೇಶಗಳು ನಕಲಿಯಾಗಿದ್ದು ಇವುಗಳನ್ನು ನಂಬಿ ಹಲವರು ಮೋಸ ಹೋಗಿರುವ ಉದಾಹರಣೆಗಳು ಇವೆ. ಹಾಗಾಗಿ ಇದರ ಬಗ್ಗೆ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಸ್ಸಾಂ ಭೀಕರ ಪ್ರವಾಹದಲ್ಲಿ ಸಿಲುಕಿದರೂ ತೇಲುವ ಹಾಸಿಗೆ ಮೇಲೆ ಮಲಗಿದ್ದ ವ್ಯಕ್ತಿ! ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights