ಸಾಮಾಜಿಕ ಜಾಲತಾಣಗಳಿಂದ ಕಣ್ಮರೆಯಾಗಿದ್ದ ಮೋಹಕ ತಾರೆ ಮತ್ತೆ ಆಕ್ಟಿವ್!

ಬೆಳ್ಳಿ ತೆರೆಯಿಂದ ಮತ್ತು ಸಾಮಾಜಿಕ ಜಾಲತಾಣಗಳಿಂದ ಕಣ್ಮರೆಯಾಗಿದ್ದ ಮೋಹಕ ತಾರೆ ನಟಿ ರಮ್ಯಾ, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಫೋಟೋವೊಂದನ್ನ ಅಪ್‌ಲೋಡ್ ಮಾಡಿರುವ ರಮ್ಯಾ, ತಮ್ಮ ಬಗ್ಗೆ ತಾವೇ ಬರೆದುಕೊಂಡಿದ್ದಾರೆ. ಮಲಗಿದ ಸ್ಥಳದಲ್ಲೇ ಮುಖಕ್ಕೆ ಒಂದು ಕೈಯನ್ನ ಅಡ್ಡಲಾಗಿ ಹಿಡಿರುವ ರಮ್ಯಾ, 2020ರ ಆರಂಭದಿಂದ ಅಂತ್ಯದವರೆಗೂ ನನ್ನ ಪರಿಸ್ಥಿತಿ ಹೀಗೆ ಎಂದು ಬರೆದುಕೊಂಡಿದ್ದಾರೆ. ಯಾಕೆ ಹೀಗೆ ಎನ್ನುವ ಬಗ್ಗೆ ಅವರು ಎನನ್ನು ಹೇಳಿಲ್ಲ..

ಪೋಟೊದಲ್ಲಿ ಒಂದು ಕಣ್ಣನ್ನ ಕೈಯಿಂದ ಮುಚ್ಚಿಕೊಂಡಿರುವ ರಮ್ಯಾ, ಈ ಮೆಸೆೇಜ್ ಮೂಲಕ, ತಾವು 2020ರಲ್ಲಿ ಯಾರಿಗೂ ಕಾಣಿಸಿಕೊಳ್ಳದೇ ಇದ್ದುದ್ದರ ಬಗ್ಗೆ ಸೂಚನೆ ನೀಡಿದ್ದಾರೆ ಅಂತ ಹೇಳಬಹುದು…  ರಮ್ಯಾರ ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ರಿಪ್ಲೇ ಮಾಡಿದ್ದಾರೆ. ನೀವು ಎವರ್‌ಗ್ರೀನ್ ನಟಿ, ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಿ ಎಂದಿದ್ದಾರೆ. ನೀವು ಏತಕ್ಕಾಗಿ ಕಣ್ಮರೆಯಾಗಿದ್ದೀರ ಅಂತ ಪ್ರಶ್ನೆ ಮಾಡಿದ್ದಾರೆ. ಅಭಿಮಾನಗಳು ರಮ್ಯಾರನ್ನ ನೋಡೋಕೆ ಎಷ್ಟು ಕಾತರರಾಗಿದ್ದಾರೆ ಅನ್ನೋದನ್ನ ಈ ಪ್ರತಿಕ್ರಿಯೆಗಳೇ ಸಾಕ್ಷಿಯಾಗಿವೆ. ಇನ್ನೂ ಖುಷಿ ವಿಚಾರ ಅಂದ್ರೆ, ಶೀಘ್ರದಲ್ಲೇ ತಾವು ಮತ್ತೆ ಜನರ ಮಧ್ಯೆ ಕಾಣಿಸಿಕೊಳ್ಳೋ ಸಂದೇಶವನ್ನ ಕೂಡ ರಮ್ಯಾ ಈ ಫೋಟೋ ಮೂಲಕ ಬಿಚ್ಚಿಟ್ಟಿದ್ದಾರೆ …  ಆದರೆ ಅದು ಸಿನಿಮಾನಾ ಇಲ್ಲ ರಾಜಕೀಯ ಅಖಾಡಾನಾ ಅನ್ನುವುದನ್ನು ಕಾದು ನೋಡಬೇಕು…

ಕಳೆದ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ಮೋಹಕ ತಾರೆ ನಟಿ ರಮ್ಯಾ, ಈ ಹಿಂದೆಯೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗಾಗ ಏನಾದ್ರು ಪೋಸ್ಟ್ ಮಾಡುತ್ತಲೇ ಇದ್ರು. ಮೊನ್ನೆ ಮೊನ್ನೆಯಷ್ಟೆ ಅಯೋಧ್ಯೆ ರಾಮ ಮಂದಿರದ ಶಿಲಾನ್ಯಾಸದ ಕುರಿತು ರಮ್ಯಾ ಪೋಸ್ಟ್ ಮಾಡಿದ್ದರು. ನಾವು ಆನಂದವಾಗಿರಲು ಮತ್ತು ದೇವರನ್ನು ಕಾಯಲು ಮಂದಿರ ಅಥವಾ ಮಸೀದಿಯ ಅಗತ್ಯವಿಲ್ಲ ಎಂದು ಎಲ್ಲೂ ತಿಳಿದಾಗ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights