FACT CHECK | ಅಬುಧಾಬಿಯಲ್ಲಿ ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಚಿನ್ನದ ಪ್ರತಿಮೆಯ ವಿಡಿಯೋ ವೈರಲ್! ವಾಸ್ತವವೇನು?
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ನೋರಾ ಫತೇಹಿ ಅವರಿಗೆ ಸಂಬಂಧಿಸಿದ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ರಾಜಧಾನಿ ಅಬುಧಾಬಿ ನಗರದಲ್ಲಿ ಈ ಇಬ್ಬರು ಸ್ಟಾರ್ಗಳ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಈ ವಿಗ್ರಹಗಳು ಚಿನ್ನದಿಂದ ಮಾಡಲ್ಪಟ್ಟಿವೆ ಎಂದು ಹೇಳಲಾಗುತ್ತದೆ.
ಅಬುಧಾಬಿಯಲ್ಲಿ ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಪ್ರತಿಮೆಗಳು, ನೆವಿಲ್ಲೆ ವೈಟಿ ಎಂಬ ಹೆಸರಿನ ಯೂಟ್ಯೂಬ್ನಲ್ಲಿ ಒಂದು ಸಣ್ಣ ವೀಡಿಯೊವನ್ನು ಹಂಚಿಕೊಂಡ ಅವರು, ಸಲ್ಮಾನ್ ಮತ್ತು ನೋರಾ ಫತೇಹಿ ಅವರ ಪ್ರತಿಮೆಗಳ ಫೋಟೋಗಳನ್ನು ತೋರಿಸಿದರು. ಅಬುಧಾಬಿಯ ಬೀದಿಯಲ್ಲಿ ನಿಮಗೆ ಹೇಗನಿಸುತ್ತಿದೆ ?’ (ಧ್ವನಿ-ಓವರ್) ಎಂದು ಹೇಳಿಕೊಂಡು. ವೀಕ್ಷಕರ ಅಭಿಪ್ರಾಯವನ್ನು ಕೇಳಿರುವುದನ್ನು ನೋಡಬಹುದು.
ಮಾರ್ಚ್ 6 ರಂದು, ಫೇಸ್ಬುಕ್ನಲ್ಲಿ “ಡೈಹಾರ್ಡ್ ಸಲ್ಮಾನ್ ಫ್ಯಾನ್” ಎಂಬ ಹ್ಯಾಂಡಲ್ನ ದಿಲ್ನವಾಜ್ ಫಲಕ್, ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಅವರ ಪ್ರತಿಮೆಗಳ ಫೋಟೋಗಳನ್ನು ಹಂಚಿಕೊಂಡಿದ್ದು, “ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಅವರ ಅದ್ಭುತ ಚಿನ್ನದ ಪ್ರತಿಮೆ” ಎಂದು ಶೀರ್ಷಿಕೆ ನೀಡಿದರು. ಅವರು #ಸಿಕಂದರ್ ಎಂಬ ಹ್ಯಾಶ್ಟ್ಯಾಗ್ ಅನ್ನು ಸಹ ನೀಡಿದರು. ಫೇಸ್ಬುಕ್ನಲ್ಲಿ ಇತರ ಕೆಲವು ಬಳಕೆದಾರರು ಸಹ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯಂತೆ ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಅವರ ಪ್ರತಿಮೆಗಳನ್ನು ಅಬುಧಾಬಿಯ ಬೀದಿಯಲ್ಲಿ ಅನಾವರಣ ಮಾಡಲಾಗಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಅಬುಧಾಬಿ ಸ್ಟ್ರೀಟ್ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ. ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ನಂತರ ನಾವು ಈ ಫೋಟೋಗಳನ್ನು AI ಬಳಸಿ ರಚಿಸಲಾಗಿದೆಯೇ ಎಂದು ಚೆಕ್ ಮಾಡಿದಾಗ ಕೆಲವು ಆಹಿತಿ ಲಭ್ಯವಾಗಿದೆ.
![]()
AI ಉಪಕರಣ ಸೈಟ್ಎಂಜಿನ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಅವರ ಪ್ರತಿಮೆಗಳ ಫೋಟೋವನ್ನು ಪರಿಶೀಲಿಸಿದಾಗ, ಇವು ನಕಲಿ ಫೋಟೋಗಳು ಎಂದು ತಿಳಿದುಬಂದಿದೆ. ಪರಿಣಾಮವಾಗಿ, ಅದರಲ್ಲಿ ಸೈಟ್ಎಂಜಿನ್ ಫಲಿತಾಂಶ ಸಲ್ಮಾನ್ ಖಾನ್ ಫೋಟೋ 99 ಪ್ರತಿಶತ AI ಬಳಸಿ ರಚಿಸಲಾಗಿದೆ.
![]()
decopy.ai ಎಂಬ ಎಐ ಡಿಟೆಕ್ಟರ್ ಟೂಲ್ ಬಳಸಿಕೊಂಡು ಸರ್ಚ್ ಮಾಡಿದಾಗ, ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಅವರ ಪ್ರತಿಮೆಯ ಮತ್ತೊಂದು ಫೋಟೋ (ಸೈಡ್ ಆಂಗಲ್) ಪತ್ತೆಯಾಗಿದ್ದು, ಈ ಫೋಟೋ ಕೂಡ ನಕಲಿ ಎಂದು ತಿಳಿದುಬಂದಿದೆ. ಪರಿಣಾಮವಾಗಿ ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಫೋಟೊಗಳನ್ನು ಶೇ . 92.82 ರಷ್ಟು ಕೃತಕ ಬುದ್ಧಿಮತ್ತೆಯೊಂದಿಗೆ ರಚಿಸಲ್ಪಟ್ಟಿವೆ ಎಂದು ತಿಳಿದುಬಂದಿದೆ.
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ, ಸಲ್ಮಾನ್ ಅಭಿಮಾನಿಗಳು ಚಿತ್ರ ಬಿಡುಗಡೆಗೂ ಮುನ್ನ ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಲ್ಮಾನ್ ಖಾನ್ ಮತ್ತು ನೋರಾ ಫತೇಹಿ ಅವರ ಚಿನ್ನದ ಪ್ರತಿಮೆಗಳು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋಗಳು ನಕಲಿ. ಅಬುಧಾಬಿಯ ಬೀದಿಗಳಲ್ಲಿ ಅಂತಹ ಯಾವುದೇ ಪ್ರತಿಮೆಗಳನ್ನು ಸ್ಥಾಪಿಸಲಾಗಿಲ್ಲ. AI- ರಚಿತವಾದ ಫೋಟೋಗಳನ್ನು ದಾರಿತಪ್ಪಿಸುವ ಕಾಮೆಂಟ್ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯ ತಲೆ ಕೂದಲು ಕತ್ತರಿಸಿದ್ದಾನೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಗೊತೇ?

