ಫ್ಯಾಕ್ಟ್‌ಚೆಕ್: ಅಸ್ಸಾಂ ಭೀಕರ ಪ್ರವಾಹದಲ್ಲಿ ಸಿಲುಕಿದರೂ ತೇಲುವ ಹಾಸಿಗೆ ಮೇಲೆ ಮಲಗಿದ್ದ ವ್ಯಕ್ತಿ! ನಿಜವೇ?

ಅಸ್ಸಾಂನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಅಸ್ಸಾಂನ ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿವೆ. ಇದರ ಮಧ್ಯೆ, ಕೆಸರಿನ ನೀರಿನಲ್ಲಿ ತೇಲುತ್ತಿರುವಾಗ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯೊಬ್ಬನ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಜೊತೆಗೆ ಇದು ಅಸ್ಸಾಂನ ವಿಡಿಯೋ ಎಂದು ಹೇಳಿಕೊಳ್ಳಲಾಗುತ್ತಿದೆ. ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

https://twitter.com/RDX__AFRIDI/status/1526500187505496065?ref_src=twsrc%5Etfw%7Ctwcamp%5Etweetembed%7Ctwterm%5E1526500187505496065%7Ctwgr%5E%7Ctwcon%5Es1_&ref_url=https%3A%2F%2Fensuddi.com%2F%3Fp%3D169743

ಅಸ್ಸಾಂನಲ್ಲಿ ಸುರಿಯುತ್ತಿರುವ ಮಹಾಮಳೆಯ ಸೃಸ್ಟಿಸಿರುವ ಅವಾಂತರಗಳು ಎಂದು ಹೇಳಿಕೊಂಡು ಸಾಮಾಜಿಕ ಮಾದ್ಯಮಗಳಲ್ಲಿ ವಿಡಿಯೊ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಇದನ್ನು ಜನವರಿ 2021 ರಲ್ಲಿ ಮಲೇಷ್ಯಾದ ಜೋಹರ್ ಬಹ್ರುದಲ್ಲಿ ಪ್ರವಾಹದ ಸಮಯದಲ್ಲಿ ಚಿತ್ರೀಕರಿಸಲಾಗಿದೆ. ಜನವರಿ 13, 2021 ರಂದು ಮಲಯ ಭಾಷೆಯ ಸುದ್ದಿ ವೆಬ್‌ಸೈಟ್ mStar ವೈರಲ್ ವಿಡಿಯೋವನ್ನು ವರದಿ ಮಾಡಿದೆ. ವರದಿಯ ಪ್ರಕಾರ, ವೈರಲ್ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಮಲೇಷ್ಯಾದ ಜೋಹರ್ ಬಹ್ರು ಮೂಲದ ಮುಹಮ್ಮದ್ ಫಾರಿಸ್ ಸುಲೈಮಾನ್ ಎಂದು ತಿಳಿದು ಬಂದಿದೆ.

 

View this post on Instagram

 

A post shared by Faris Sulaiman (@farism4n)

ಮಲೇಷ್ಯಾದ ಜೋಹರ್ ಬಹ್ರು ಎಂಬಲ್ಲಿ ಸೆರೆಯಾದ 2021 ರ ದೃಶ್ಯ

ಸುಲೈಮಾನ್ ಜನವರಿ 10, 2021 ರಂದು ತಮ್ಮ Instagram ನಲ್ಲಿ “ನಾನು ದಣಿದಿದ್ದರೆ ಎಲ್ಲಿಯಾದರೂ ಮಲಗಬಹುದು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ವಿಡಿಯೋ ಕೂಡ ವೈರಲ್ ಆಗಿತ್ತು. ವಿಡಿಯೋವನ್ನು ನಂತರ mStar ತನ್ನ Instagram ಪುಟದಲ್ಲಿ ಹಂಚಿಕೊಂಡಿದೆ. ಜನವರಿ 2021 ರಲ್ಲಿ ಮಲೇಷ್ಯಾದ ಹಲವಾರು ಭಾಗಗಳು ಪ್ರವಾಹ ಕಂಡು ಬಂದಿದೆ. ವಿಡಿಯೋದ ಕುರಿತು ಮಾತನಾಡುತ್ತಾ, ಸುಲೈಮಾನ್ mStar ಗೆ ತನ್ನ ಮನೆಯು ಪ್ರವಾಹಕ್ಕೆ ಸಿಲುಕಿದ ಕಾರಣ ಮತ್ತು ತನ್ನ ಹತಾಶೆಯನ್ನು ಹೊರಹಾಕಲು ಬಯಸಿದ್ದರಿಂದ ನೀರಿನ ಮೇಲೆ ತೇಲುತ್ತಿರುವ ಹಾಸಿಗೆಯ ಮೇಲೆ ಮಲಗುವ ಮೂಲಕ ವಿಡಿಯೋ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಅವರ ತಾಯಿಯೇ ಚಿತ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರಕೃತಿ ವಿಕೋಪವನ್ನು ಎದುರಿಸುತ್ತಿರುವಾಗ ಇತರರಿಗೆ ಮನರಂಜನೆ ನೀಡಿದ ಖುಷಿಯೂ ಇದೆ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ 2021ರಲ್ಲಿ ಮಲೇಷ್ಯಾದ ಜೋಹರ್ ಬಹ್ರುದಲ್ಲಿ ಉಂಟಾದ ಪ್ರವಾಹವದ ಸಂತ್ರಸ್ತನೊಬ್ಬ ಸರ್ಕಾರವನ್ನು ಟೀಕಿಸಲು ವ್ಯಂಗ್ಯವಾಗಿ ಮಾಡಿದ ವಿಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಅಸ್ಸಾಂನಲ್ಲಿ ಪ್ರವಾಹದಿಂದ ಆಗಿರುವ ಅನಾಹುತ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹುಬ್ಬಳ್ಳಿಯಲ್ಲಿ ಹಿಂದೂಗಳ ಮೇಲೆ ಹಲ್ಲೆ ಎಂದು ಬಾಂಗ್ಲಾದೇಶದ ವೀಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.