Fact Check: ನಟ ಶಾರುಖ್ ಖಾನ್‌ಗೆ ಹೋಲುವ ಕಾಶ್ಮೀರದ ಹುಡುಗ..!
ಇದು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ನನ್ನು ಹೋಲುವ ಕಾಶ್ಮೀರದ ಹುಡುಗ ಎಂಬ ಹೇಳಿಕೆಯೊಂದಿಗೆ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಲವಾರು ಫೇಸ್‌ಬುಕ್ ಬಳಕೆದಾರರು “ಕಾಶ್ಮೀರಿ ಹುಡುಗ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ನಂತೆ ಕಾಣುತ್ತಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಇದು ಶಾರುಖ್ ಖಾನ್‌ನಂತೆ ಕಾಣುವ ಕಾಶ್ಮೀರಿ ಹುಡುಗನ ಚಿತ್ರವಲ್ಲ. ವೈರಲ್ ಫೋಟೋವನ್ನು ಮೊಬೈಲ್ ಅಪ್ಲಿಕೇಶನ್‌ನ ಫೇಸ್‌ಆಪ್ ಮೂಲಕ ರಚಿಸಲಾದ ಎಸ್‌ಆರ್‌ಕೆ ಫೋಟೋವಾಗಿದೆ.
ವೈರಲ್ ಚಿತ್ರ
ವೈರಲ್ ಫೋಟೋದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಶ್ಮೀರಿ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಥಳೀಯ ಯುವ ಕಾಂಗ್ರೆಸ್ ಮುಖಂಡ ವೈರಲ್ ಪೋಸ್ಟ್ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. “ನಾನು ಎಸ್ಆರ್ಕೆನಂತೆ ಕಾಣುವ ಕಾಶ್ಮೀರಿ ಹುಡುಗನನ್ನು ಹುಡುಕಲು ಪ್ರಯತ್ನಿಸುತ್ತೇನೆ, ಆದರೆ ಇನ್ನೂ ಅವನನ್ನು ಕಂಡುಹಿಡಿಯಲಿಲ್ಲ” ಎಂದು ಅವರು ಹೇಳಿದರು.
ಹಲವಾರು ಜನರು ಫೋಟೋ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು. ಫೇಸ್ ಆಪ್ ಬಳಸಿ ಚಿತ್ರವನ್ನು ರಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ ಸಣ್ಣ ವಯಸ್ಸಿನ ಎಸ್‌ಆರ್‌ಕೆ ಚಿತ್ರವನ್ನು ಫಿಲ್ಟರ್ ಮಾಡಿದಾಗ ವೈರಲ್ ಇಮೇಜ್‌ಗೆ ಹೋಲುತ್ತದೆ. ಬದಲಾವಣೆ ಇಲ್ಲಿ ನೋಡಬಹುದು.

ಇದುವರೆಗೂ ಯಾವುದೇ ಬಳಕೆದಾರರು ಅಥವಾ ವೆಬ್‌ಸೈಟ್‌ಗಳು ಶಾರುಖ್ ಖಾನ್‌ನಂತೆ ಕಾಣುವ ಯಾವುದೇ ಕಾಶ್ಮೀರಿ ಹುಡುಗನ ಬಗ್ಗೆ ವಿವರಗಳನ್ನು ನೀಡಿಲ್ಲ. ಫೇಸ್‌ಆಪ್ ನಮಗೆ ವೈರಲ್ ಇಮೇಜ್‌ನಂತೆಯೇ ಫಲಿತಾಂಶವನ್ನು ನೀಡುತ್ತಿರುವುದರಿಂದ, ಚಲಾವಣೆಯಲ್ಲಿರುವ ಚಿತ್ರ ಬಾಲಿವುಡ್ ನಟ ಶಾರುಖಾನ್ ನದ್ದೇ ಆಗಿದೆ ಎಂದು ಭಾವಿಸಬಹುದು.

