ಫ್ಯಾಕ್ಟ್‌ಚೆಕ್: 1943ರಲ್ಲೆ RSS ಬ್ರಿಟನ್ ರಾಣಿಯಿಂದ ಗೌರವ ಪಡೆದಿತ್ತು ಎಂಬುದು ಸುಳ್ಳು

ಸ್ವಾತಂತ್ರ್ಯ ಹೋರಾಟದಲ್ಲಿ RSS ಇರಲಿಲ್ಲ ಎನ್ನುವ ಕಮ್ಮಿ, ಕಾಂಗಿ ಗುಲಾಮರೇ ನೋಡಿ, 1943 ರಲ್ಲಿ  ಬ್ರಿಟನ್ ರಾಣಿ ಗೌರವ ಸಲ್ಲಿಸುತ್ತಿರುವ ಅಪರೂಪದ ದೃಶ್ಯ ಎಂದು ಹೇಳುವ ಕಪ್ಪು ಬಿಳುಪಿನ ಫೋಟೊವೊಂದು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. RSS ಸಮವಸ್ತ್ರವನ್ನು ಧರಿಸಿರುವ ಪುರುಷರ ಸಾಲಿನ ಮುಂದೆ ರಾಣಿ ಸಾಗುತ್ತಿರುವಂತೆ ಫೋಟೋ ಕಾಣುತ್ತಿದೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ RSS ಭಾಗವಹಿಸಿರಲಿಲ್ಲ ಎಂಬ ವಾದವನ್ನು ತಳ್ಳಿಹಾಕುತ್ತ ಈ ಪೋಸ್ಟ್ಅನ್ನು ಪ್ರಸಾರ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ  ಫೋಟೊದಲ್ಲಿ ಬರೆಯಲಾಗಿರುವ ವಿಷಯದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ,  ಫೆಬ್ರವರಿ 2015 ರಲ್ಲಿ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಪ್ರಕಟವಾದ ಮೂಲ ಆವೃತ್ತಿಯು ಲಭ್ಯವಾಗಿದ್ದು. ಮೂಲ ಫೋಟೋದಲ್ಲಿ RSS ಕಾರ್ಯಕರ್ತರು ಸಾಲಾಗಿ ನಿಂತಿರುವುದು ಕಂಡುಬಂದಿದೆ, ಆದರೆ ಮೂಲ ಪೋಟೋದಲ್ಲಿ ಸಮವಸ್ತ್ರಧಾರಿಗಳ ಮುಂದೆ ರಾಣಿ ಎಲಿಜಬತ್  ಸಾಗುತ್ತಿಲ್ಲ. ಇದರಿಂದ ತಿಳಿಯುವುದೇನೆಂದರೆ ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ. ಆಲ್ಟ್‌ನ್ಯೂಸ್ ಮತ್ತು ಟೈಮ್ಸ್‌ಆಫ್ ಇಂಡಿಯಾ ಇದರ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿವೆ.

ಗೂಗಲ್ ನಲ್ಲಿ ಮತ್ತೊಮ್ಮೆ ರಾಣಿ ಎಲಿಜಬತ್ ಫೋಟೋವನ್ನು ಹುಡುಕಿದಾಗ ರಾಣಿಯ ಚಿತ್ರವನ್ನು  CNN ನ 2016 ರ ಲೇಖನದಲ್ಲಿ ಮೂಲ ಫೋಟೋವನ್ನು ಪ್ರಕಟಿಸಿದೆ. ಫೆಬ್ರವರಿ 1956 ರಲ್ಲಿ ರಾಣಿ ಎಲಿಜಬೆತ್ II ಕಾಮನ್‌ವೆಲ್ತ್ ಪ್ರವಾಸದ ಸಮಯದಲ್ಲಿ ನೈಜೀರಿಯಾದ ಕಡುನಾ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಮರುನಾಮಕರಣಗೊಂಡ ಕ್ವೀನ್ಸ್ ಓನ್ ನೈಜೀರಿಯಾ ರೆಜಿಮೆಂಟ್, ರಾಯಲ್ ವೆಸ್ಟ್ ಆಫ್ರಿಕನ್ ಫ್ರಾಂಟಿಯರ್ ಫೋರ್ಸ್‌ನ ಪುರುಷರು ರಾಣಿ ಎಲಿಜಬತ್ ಗೆ ಗೌರವ ಸಮರ್ಪಿಸುತ್ತಿರುವ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

ಕೆಳಗೆ ತೋರಿಸಿರುವಂತೆ ಈ ಎರಡು ಫೋಟೋಗಳನ್ನು ಎಡಿಟ್ ಮಾಡುವ ಮೂಲಕ ವೈರಲ್ ಚಿತ್ರವನ್ನು ರಚಿಸಲಾಗಿದೆ.

2016 ರಲ್ಲಿ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು ಈ ಚಿತ್ರವನ್ನು ಹಂಚಿಕೊಂಡಾಗ ಎಸ್‌ಎಂ ಹೋಕ್ಸ್ ಸ್ಲೇಯರ್ ಕೂಡ ಈ ಚಿತ್ರವನ್ನು ಹೊರಹಾಕಿದ್ದರು. ಆದರೆ ಕೆಲವು ಸಂದರ್ಭದಲ್ಲಿ ವೈರಲ್ ಪೋಟೊವನ್ನು ಸಂಘವರಿವಾರದ ಪ್ರತಿಪಾದಕರೇ ಹಂಚಿಕೊಳ್ಳುವ ಮೂಲಕ ನಗೆಪಾಟಲಿಗೆ ಗುರಿಯಾಗುವುದಲ್ಲದೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುತ್ತಾರೆ ಎಂಬುದೇ ವಿಪರ್ಯಾಸ.

ಒಟ್ಟಾರೆಯಾಗಿ ಹೇಳುವುದಾದರೆ 1943ರಲ್ಲಿ ರಾಣಿ ಎಲಿಜಬತ್ RSS ನ ಗೌರವ ವಂದನೆ ಸ್ವೀಕರಿಸುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿರುವುದು ಸುಳ್ಳು ಮತ್ತು 1943 ಅವರು ರಾಣಿಯ ಪಟ್ಟವನ್ನು ಅಲಕಂರಿಸಿರಲಿಲ್ಲ. ಎಲಿಜಬೆತ್ II ತನ್ನ ತಂದೆ ಕಿಂಗ್ ಜಾರ್ಜ್ VI ನಿಧನರಾದ ನಂತರ 1952 ರಲ್ಲಿ ಇಂಗ್ಲೆಂಡ್ ರಾಣಿಯಾಗಿ ಅಧಿಕಾರ ವಹಿಸಿಕೊಂಡರು ಎಂಬುದು ಗಮನಾರ್ಹ. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೂ ಇವರು ರಾಣಿಯಾಗಿರಲಿಲ್ಲ. ಹಾಗಾಗಿ ಬಲಪಂಥೀಯ ಪ್ರತಿಪಾದಕರು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೊಂದು ಸುಳ್ಳುಸುದ್ದಿಯಾಗಿದೆ, ಇಂತಹ ಸುದ್ದಿಗಳನ್ನು ನಂಬುವ ಮುನ್ನ ಪರಿಶೀಲಿಸಿ ಎಂಬುದು ಏನ್‌ಸುದ್ದಿ.ಕಾಂ ನ ವಿನಂತಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನೆಹರು RSS ಶಾಖೆಗೆ ಹೋಗಿದ್ದರು ಎಂದು ಸೇವಾದಳದಲ್ಲಿ ಭಾಗವಹಿಸಿದ್ದ ಫೋಟೊ ಹಂಚಿಕೊಳ್ಳಲಾಗಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights