ಗಂಗಾ ನದಿಯಲ್ಲಿ ಹೆಚ್ಚಿತು ನೀರಿನ ಮಟ್ಟ; ಮತ್ತೆ ತೇಲುತ್ತಿವೆ ಶವಗಳು!

ಗಂಗಾ ನದಿಯ ದಡದಲ್ಲಿನ ಮರಳಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಹೂತು ಉತ್ತರ ಪ್ರದೇಶ ಸುದ್ದಿಯಾಗಿತ್ತು. ಇದೀಗ, ಅದೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಗಾಂಗಾನದಿಯಲ್ಲಿ ನೀರನ ಮಟ್ಟವೂ ಹೆಚ್ಚಾಗಿದ್ದು, ನದಿಯ ದಡದಲ್ಲಿ ಊತಿದ್ದ ಶವಗಳು ತೇಲುತ್ತಿವೆ. ಇವು ಸರ್ಕಾರ ಬೇಜವ್ದಾರಿ ಧೋರಣೆಗೆ ಕನ್ನಡಿ ಹಿಡಿದಿವೆ.

ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಹಾಗೂ ಮರಳು ದಂಡೆಗಳು ಕುಸಿಯುತ್ತಿದ್ದಂತೆ ಮೃತ ದೇಹಗಳು ತೇಲಲಾರಂಭಿಸಿವೆ. ಅಧಿಕಾರಿಗಳು ತೇಲಿಬರುತ್ತಿರುವ ಶವಗಳನ್ನು ಹಿಡಿಯುತ್ತಿರುವುದನ್ನು ಪ್ರಯಾಗ್ ರಾಜ್‌ನ ವಿವಿಧ ಘಾಟ್‌ಗಳಲ್ಲಿ ಸ್ಥಳೀಯ ಪತ್ರಕರ್ತರು ಚಿತ್ರೀಕರಿಸಿದ ಸೆಲ್‌ಫೋನ್ ವೀಡಿಯೊಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಚಿತ್ರವೊಂದರಲ್ಲಿ ನದಿಯ ದಂಡೆಯಲ್ಲಿ ಮೃತದೇಹ ಸಿಲುಕಿರುವುದು ಕಂಡುಬಂದಿದೆ. ಪ್ರಯಾಗ್ ರಾಜ್‌ ಮಹಾನಗರ ಪಾಲಿಕೆಯ ತಂಡವೊಂದು ಶವವನ್ನು ಹೊರತೆಗೆಯುತ್ತಿದೆ.

ಕಳೆದ 24 ಗಂಟೆಗಳಲ್ಲಿ 40 ಶವಗಳನ್ನು ಅಂತ್ಯಸಂಸ್ಕಾರ ಮಾಡಿರುವುದಾಗಿ ಪ್ರಯಾಗ್ ರಾಜ್‌ ಮಹಾನಗರ ಪಾಲಿಕೆಯ ವಲಯ ಅಧಿಕಾರಿ ನೀರಜ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನಾವು ಎಲ್ಲಾ ದೇಹಗಳನ್ನು ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ ಹಾಗೂ ಎಲ್ಲಾ ಆಚರಣೆಗಳನ್ನು ಅನುಸರಿಸುತ್ತಿದ್ದೇವೆ” ಎಂದು ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದರು.

ಈಗ ಪತ್ತೆಯಾಗಿರುವ ಶವಗಳಿಗೂ ಕೋವಿಡ್ ಗೂ ಸಂಬಂಧವಿಲ್ಲ. ನದಿ ದಂಡೆಯಲ್ಲಿ ಹೆಣವನ್ನು ಸಮಾಧಿ ಮಾಡುವುದು ದೀರ್ಘ ಸಮಯದಿಂದ ಪಾಲಿಸಿಕೊಂಡುಬಂದಿರುವ ಸಂಪ್ರದಾಯ ಎಂದು ಉತ್ತರಪ್ರದೇಶ ಸರಕಾರ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಹಸಿರು ಬಣ್ಣಕ್ಕೆ ತಿರುಗಿದ ಗಂಗಾ ನದಿ! ಕಾರಣವೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights