ಫ್ಯಾಕ್ಟ್‌ಚೆಕ್: ಅಗ್ನಿಪಥ್ ಯೋಜನೆಯಿಂದ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧವಿಲ್ಲದ ಫೋಟೋ ವೈರಲ್
ಕೇಂದ್ರ ಸರ್ಕಾರದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ. ಕೆಲವು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳೂ ಇವೆ. ಇದರ ಬೆನ್ನಲ್ಲೆ ಅಗ್ನಿಪಥ ಯೋಜನೆಯಿಂದ ಹತಾಶೆಗೊಂಡ ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಎಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವ ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜವಾಗಿ “ಆತ್ಮಹತ್ಯೆಯಲ್ಲ ಸರ್ಕಾರದ ಯೋಜಿತ ಕೊಲೆಯಾಗಿದ್ದು, ಅವರ ಸಾವಿಗೆ ಬಿಜೆಪಿ ಸರಕಾರವೇ ಹೊಣೆಯಾಗಿದೆ”. ಎನ್ನುವ ಬರಹದೊಂದಿಗೆ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
https://twitter.com/aiscians/status/1537343727361855488
ಅಗ್ನಿಪಥ ಯೋಜನೆ ಘೋಷಣೆಯಾದ ಬೆನ್ನಲ್ಲೇ ಕೆಲವು ವಿದ್ಯಾರ್ಥಿಗಳು ತಮ್ಮ ಜೀವವನ್ನೆ ಕೊನೆಗಾಣಿಸುವಂತಹ ಕೆಲವು ಘಟನೆಗಳು ನಡೆದಿರುವುದು ನಿಜ. ಆದರೆ, ಈ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾದ ಯಾವುದೇ ಚಿತ್ರಗಳು ಆ ಘಟನೆಗಳಿಗೆ ಸಂಬಂಧಿಸಿಲ್ಲ. ಇವು ಹಳೆಯ ಚಿತ್ರಗಳು ಮತ್ತು ಅಗ್ನಿಪಥ್ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಕೆಳಗಿನ ಪ್ರತಿ ಚಿತ್ರದ ವಾಸ್ತವ ಏನೆಂದು ನೋಡೋಣ.
ಈ ಫೋಟೋನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಹಳೆಯ ಫೇಸ್‌ಬುಕ್ ಪೋಸ್ಟ್‌ಗೆ ಲಭ್ಯವಾಗಿದ್ದು, ಅದರಲ್ಲಿ ಇದೇ ಚಿತ್ರವನ್ನು 20 ಮಾರ್ಚ್ 2020 ರಂದು ಹಂಚಿಕೊಳಲಾಗಿದೆ. ಫೋಟೋಗೆ ಸಂಬಂಧಿಸಿದ ವಿವರಣೆಯ ಪ್ರಕಾರ, ಈ ಘಟನೆ ಹರಿಯಾಣದ ಲುಡಾನಾ ಗ್ರಾಮದಲ್ಲಿ ನಡೆದಿದೆ. ಹಾಗಾಗಿ ಹಳೆಯ ಘಟನೆಯ ಫೋಟೊವನ್ನು ತೆಗೆದುಕೊಂಡು ಅಗ್ನಿಪಥ್ ಯೋಜನೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ.
ಈ ಫೋಟೋನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ಚಿತ್ರವನ್ನು ವರದಿ ಮಾಡಿದ 2018 ರ ಸುದ್ದಿ ವರದಿಯು ಲಭ್ಯವಾಗಿದ್ದು. ಈ ಲೇಖನದ ಪ್ರಕಾರ, ಚಿತ್ರವು ಕುರುಕ್ಷೇತ್ರದ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡ ದಂಪತಿಗಳ ಘಟನೆಗೆ ಸಂಬಂಧಿಸಿದೆ.
ಸಂಬಂಧಿತ ಕೀವರ್ಡ್‌ಗಳೊಂದಿಗೆ Google ಸರ್ಚ್ ಮಾಡಿದಾಗ ಚಿತ್ರವನ್ನು ವರದಿ ಮಾಡುವ 2019 ರ ಸುದ್ದಿ ವರದಿ ಲಭ್ಯವಾಗಿದ್ದು . ವರದಿಯ ಪ್ರಕಾರ, ಚಿತ್ರವು ಮಧ್ಯಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ.
ಈ ಚಿತ್ರವು ಆಗಸ್ಟ್ 2021 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಆನ್‌ಲೈನ್ ಸುದ್ದಿ ವರದಿಯು ಅದೇ ಚಿತ್ರವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಚಿತ್ರವು ಉತ್ತರ ಪ್ರದೇಶದ ಮೀರತ್‌ನಿಂದ ಬಂದಿದೆ.
ಆನ್‌ಲೈನ್ ಪೋರ್ಟಲ್ ಅಕ್ಟೋಬರ್ 2020 ರಲ್ಲಿ ಅದೇ ಚಿತ್ರವನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಚಿತ್ರವು ಉತ್ತರ ಪ್ರದೇಶದ್ದು.
ಇದು ಹಳೆಯ ಫೋಟೋ ಮತ್ತು ಕನಿಷ್ಠ 2007 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಆನ್‌ಲೈನ್ ಬ್ಲಾಗ್ 2007 ರಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದೆ.
ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು , ಏಪ್ರಿಲ್ 2022 ರ ವರದಿ ಮಾಡಿದ ಲೇಖನದಲ್ಲಿ ಈ ಪೋಟೋ ಸಹಿತ ಸುದ್ದಿ ಲಭ್ಯವಾಗಿದೆ. ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಘೋಷಿಸುವ ಮುಂಚೆಯೇ ವರದಿಯಾಗಿದೆ. ಈ ವರದಿಗಳ ಪ್ರಕಾರ, ಹರಿಯಾಣದ ಬಿವಾಂಡಿ ನಿವಾಸಿ ಪವನ್ ಅವರು ಸೇನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿದೆ. ಆದರೂ ಇದು ಅಗ್ನಿಪಥ್‌ಗೆ ಸಂಬಂಧಿಸಿದ ಆತ್ಮಹತ್ಯೆಗಳಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ಪ್ರತಿಭಟನೆಗಳಿಗೆ ಆತ್ಮಹತ್ಯೆಯ ಹಳೆಯ ಮತ್ತು ಸಂಬಂಧವಿಲ್ಲದ ಫೋಟೋಗಳನ್ನು ತಪ್ಪಾಗಿ ಆರೋಪಿಸಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬ್ರಿಟನ್ ರಾಣಿಗಿಂತ ಸೋನಿಯಾ ಗಾಂಧಿ ಶ್ರೀಮಂತೆ ಎಂಬುದು ಸುಳ್ಳು!