ಫ್ಯಾಕ್ಟ್‌ಚೆಕ್ : ಪತ್ರಕರ್ತೆ ರಾಣಾ ಅಯ್ಯೂಬ್ ರನ್ನು ಬಂಧಿಸಿದ್ದಾರೆ ಎಂಬುದು ಸುಳ್ಳು!

ಪ್ರತಿಭಟನೆಯ ವೇಳೆ ಪತ್ರಕರ್ತೆ ರಾಣಾ ಅಯ್ಯೂಬ್  ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಧರಣೆ ನಡೆಸುತ್ತಿರುವಾಗ ಪೋಲಿಸ್ ಸಿಬ್ಬಂದಿಯೊಬ್ಬರು ಘೋಷಣೆ ಕೂಗುತ್ತಿದ್ದ ಯುವತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೊಲೀಸರು ಬಂಧಿಸುತ್ತಿರುವ ಪ್ರತಿಭಟನಾಕಾರ್ತಿ ರಾಣಾ ಅಯೂಬ್ ಎಂದು ಪ್ರತಿಪಾದಿಸಿ ಪೊಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ :

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಹಲವು ಮಲಯಾಳಂ ಸುದ್ದಿ ವರದಿಗಳನ್ನು ಹೊಂದಿದ್ದು ಆ ಎಲ್ಲಾ ಸುದ್ದಿಗಳಲ್ಲಿಯೂ ಈ ವೈರಲ್ ಫೋಟೋ ಕಂಡುಬಂದಿದೆ. ವರದಿಗಳಲ್ಲಿ ಜೂನ್ 12 ರಂದು ಮಲಪ್ಪುರಂ ಜಿಲ್ಲೆಯಲ್ಲಿ ಫ್ರೆಟರ್ನಿಟಿ ಮೂವ್‌ಮೆಂಟ್ ಸಂಘಟನೆಯು ಹಮ್ಮಿಕೊಂಡಿದ್ದ  ಪ್ರತಿಭಟನೆ ವೇಳೆ  ಪೋಲಿಸರು ರಾಷ್ಟ್ರೀಯ ಕಾರ್ಯದರ್ಶಿ ಆಯ್ಷಾ ರೆನ್ನಾರನ್ನು ವಶಕ್ಕೆ ಪಡೆದಿದ್ದರೆ ಎಂದು ಬರೆಯಲಾಗಿದೆ.

‘ಫ್ರೆಟರ್ನಿಟಿ ಮೂವ್‌ಮೆಂಟ್ ಕೇರಳ’ ಎಂಬುದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜಕೀಯ ಪಕ್ಷದ ವಿದ್ಯಾರ್ಥಿ ವಿಭಾಗವಾಗಿದೆ. ಫ್ರೆಟರ್ನಿಟಿ ಮೂವ್‌ಮೆಂಟ್ ಕೇರಳ ಫೇಸ್‌ಬುಕ್ ಪುಟದಲ್ಲಿಯೂ ಈ ಬಂಧನದ ಕುರಿತು ಹಲವು  ವರದಿಗಳು ಕಂಡುಬಂದಿವೆ. ಈ ವರದಿಗಳ ಪ್ರಕಾರ, ಅವರನ್ನು ಕೇರಳ ಪೊಲೀಸರು ಅಮಾನುಷವಾಗಿ ನಡೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

May be an image of 2 people, people standing and text

ಉತ್ತರಪ್ರದೇಶದಲ್ಲಿ ಜೂನ್ 10 ರಂದು ಹೋರಾಟಗಾರ್ತಿ ಅಫ್ರೀನ್ ಹಾಗೂ ಅವರ ತಂದೆ ಜಾವೇದ್ ಮೊಹಮ್ಮದ್ ಅವರ ಪ್ರಯಾಗ್‌ರಾಜ್‌ನಲ್ಲಿರುವ ಮನೆಯನ್ನು ಯುಪಿ ಸರ್ಕಾರ ಬುಲ್ಡೋಜರ್ ಬಳಸಿ ನೆಲಸಮಗೊಳಿತ್ತು. ಅಲ್ಲದೆ ಅವರಿಬ್ಬರನ್ನು ಬಂಧಿಸಲಾಗಿತ್ತು. ಅದನ್ನು ವಿರೋದಿಸಿ ಕೇರಳದಲ್ಲಿ ಪ್ರತಿಭಟನೆ ನಡೆಸುವ ವೇಳೆ ಆಯಿಷಾ ರೆನ್ನಾ ಅವರನ್ನು ಬಂಧಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಆಯಿಷಾ ಅವರ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ, ಜೂನ್ 12 ರಂದು ಮಲಪ್ಪುರಂನಲ್ಲಿ ನಡೆದ ‘ರಾಷ್ಟ್ರೀಯ ಹೆದ್ದಾರಿ ತಡೆ’ಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿರುವ ಮಹಿಳೆ  ರಾಣಾ ಅಯೂಬ್ ಅಲ್ಲ ಬದಲಿಗೆ ಆಯ್ಷಾ ರೆನ್ನಾ ಎಂದು ದೃಢಪಡಿಸಿದ ಹಲವಾರು ವರದಿಗಳು  ಕಂಡುಬಂದಿವೆ.

 

ಯಾವುದೇ ಸಾರ್ವಜನಿಕ ಪ್ರತಿಭಟನೆಯಲ್ಲಿ ರಾಣಾ ಅಯೂಬ್ ಅವರನ್ನು ಬಂಧಿಸಲಾಗಿದೆಯೇ ಎಂದು ಪರಿಶೀಲಿಸಿದಾ ಇತ್ತೀಚೆಗೆ ಯಾವುದೇ ವರದಿಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಫೋಟೋದಲ್ಲಿರುವ ಮಹಿಳೆ ಫ್ರಟರ್ನಿಟಿ ಮೂವ್‌ಮೆಂಟ್ ನಾಯಕಿ ಆಯ್ಷಾ ರೆನ್ನಾ. ಜೂನ್ 12, 2022 ರಂದು ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಹೆದ್ದಾರಿ ತಡೆ ಸಂದರ್ಭದಲ್ಲಿ ಕೇರಳ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಪೋಟೋ ವೈರಲ್ ಆಗಿದೆ. ಹಾಗಾಗಿ ಈ ಫೋಟೋದಲ್ಲಿರುವ ಮಹಿಳೆ ರಾಣಾ ಅಯೂಬ್ ಅಲ್ಲ ಎಂದು ಖಚಿತವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದಮ್ಮಿ ಓದಿರಿ: ಫ್ಯಾಕ್ಟ್‌ಚೆಕ್: ಸೌದಿ ದೊರೆ ಸಲ್ಮಾನ್‌ ಕಾಲಿಗೆ ಪ್ರಧಾನಿ ಮೋದಿ ನಮಸ್ಕರಿಸಿದ್ದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.