“ಕೋವಿಡ್ -19 ಪಾರ್ಟಿ”ಗೆ ಹಾಜರಾಗಿದ್ದ ವ್ಯಕ್ತಿ ಸಾವು : ಇನ್ನುಳಿದವರಲ್ಲೂ ಆತಂಕ!

ಸೋಂಕಿತ ವ್ಯಕ್ತಿ ಆಯೋಜಿಸಿದ್ದ “ಕೋವಿಡ್-19” ಪಾರ್ಟಿಯಲ್ಲಿ ಭಾಗವಹಿಸಿದ ನಂತರ ಟೆಕ್ಸಾಸ್‌ನ 30 ವರ್ಷದ ವ್ಯಕ್ತಿಯೊಬ್ಬ ಕೊರೋನವೈರಸ್‌ನಿಂದ ಮೃತಪಟ್ಟಿದ್ದಾನೆ. ಇದು ಪಾರ್ಟಿಯಲ್ಲಿ ಭಾಗಿಯಾಗಿದ್ದ ಇನ್ನುಳಿದವರಲ್ಲಿ ಅಪಾಯ ಉಂಟಾಗುವ ಆತಂಕ ಸೃಷ್ಟಿಯಾಗಿದೆ.

ಸ್ಯಾನ್ ಆಂಟೋನಿಯೊದ ಮೆಥೋಡಿಸ್ಟ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೇನ್ ಆಪಲ್ಬಿ, ಈ ವ್ಯಕ್ತಿ ವೈರಸ್ ನಿಂದ ಮುಕ್ತನಾಗಿದ್ದೇನೆಂದು ಭಾವಿಸಿ ಅಪಾಯ ತಂದೊಡ್ಡಿದ್ದಾನೆ. ಇಂತಹ ಘಟನೆಗಳು ಯುನೈಟೆಡ್ ಸ್ಟೇಟ್ಸ್ನಲ್ಲಿ ಇದುವರೆಗೆ 1,35,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ. “ಯಾರಿಗಾದರೂ ರೋಗ ಪತ್ತೆಯಾಗಿ, ಅವರು ರೋಗವನ್ನು ಸೋಲಿಸಬಹುದೇ ಎಂದು ತಿಳಿಯಲು ಸ್ನೇಹಿತರನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ” ಎಂದು ಯುಎಸ್ ಮಾಧ್ಯಮ ಭಾನುವಾರ ಪ್ರಸಾರ ಮಾಡಿದ ವಿಡಿಯೋದಲ್ಲಿ ಆಪಲ್ಬಿ ಹೇಳಿದ್ದಾರೆ.

ಹೆಚ್ಚು ಸೋಂಕಿತರ ಜನರು ಸೋಂಕಿನಿಂದ ಗುಣಮುಖರಾಗಿದ್ದೇವೆಂದು ಭಾವಿಸಿ ಉಳಿದವರಿಗೆ ಪ್ರಾಣಕ್ಕೆ ತಂದೊಡ್ಡುವ ಪ್ರಕರಣಗಳು ಅಧಿಕವಾಗುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಹೀಗಾಗಿ ಅದೆಷ್ಟೋ ಯುವ ಪೀಳಿಗೆಯಲ್ಲಿ ಅಪಾಯಕಾರಿ ಸೋಂಕು ಹರಡಿರುವುದು ಹರಡುತ್ತಿರುವುದು ಕಂಡು ಬರುತ್ತಿಲ್ಲ.

ಇದರೊಂದಿಗೆ ಇದುವರೆಗೆ ವಿಶ್ವದ ಅತಿ ಹೆಚ್ಚು ಕ್ಯಾಸೆಲೋಡ್ ಮತ್ತು ಸಾವಿನ ಸಂಖ್ಯೆಯನ್ನು ಹೊಂದಿದ ಯುನೈಟೆಡ್ ಸ್ಟೇಟ್ಸ್ ನಲ್ಲಿ ಟ್ರಂಪ್ ಆಡಳಿತವು ಭಾನುವಾರ ಮತ್ತೆ ಶರತ್ಕಾಲದಲ್ಲಿ ಪೂರ್ಣ ಶಾಲಾ ಪುನರಾರಂಭಕ್ಕಾಗಿ ಒತ್ತಾಯಿಸುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights