ಅಧಿವೇಶನದಲ್ಲಿ ದೃಶ್ಯ ಮಾಧ್ಯಮಗಳ ನಿಷೇಧ : ಪ್ರತಿಭಟಿಸಿದ ಮಾಧ್ಯಮ ಪ್ರತಿನಿಧಿಗಳು

ಅಧಿವೇಶನದಲ್ಲಿ ಚರ್ಚೆಯಾಗುವ ಜನರ ಸಮಸ್ಯೆಗಳನ್ನು ಯತಾವತ್ ಆಗಿ ಜನರಿಗೆ ತಲುಪಿಸುವುದಷ್ಟೇ ಮಾಧ್ಯಮಗಳ ಕೆಲಸ. ಪ್ರಜಾಪ್ರಭುತ್ವದ ನಿಲುವುಗಳ ಅಡಿಯಲ್ಲಿ ಇದು ಮಾಧ್ಯಮಗಳ ಕರ್ತವ್ಯವೂ ಹೌದು. ದೇಶದ ಎಲ್ಲಾ ರಾಜ್ಯದಲ್ಲೂ ಕಳೆದ ಹಲವು ದಶಕಗಳಿಂದ ಮಾಧ್ಯಮಗಳು ಇದೇ ಕೆಲಸದಲ್ಲಿ ತೊಡಗಿವೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಅಧಿವೇಶನಕ್ಕೆ ದೃಶ್ಯ ಮಾಧ್ಯಮಗಳನ್ನು ನಿಷೇಧಿಸುವ ಮೂಲಕ ಕೆಟ್ಟದೊಂದ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

ಹೀಗಾಗಿ ಮಾಧ್ಯಮದ ಹಕ್ಕನ್ನ ಕಸಿದುಕೊಂಡು ಎಲೆಕ್ಟ್ರಾನಿಕ್ ಮೀಡಿಯಾ ಕ್ಯಾಮೆರಾಮನ್ ಮತ್ತು ಪ್ರೆಸ್ ಫೋಟೋಗ್ರಾಫರ್‌ಗಳನ್ನು ಅಧಿವೇಶನದಲ್ಲಿ ಅನುಮತಿಸದಿರುವ ಸ್ಪೀಕರ್ ನಿರ್ಧಾರವನ್ನು ವಿರೋಧಿಸಿ ಇಂದು ಮಾಧ್ಯಮ ಪ್ರತಿನಿಧಿಗಳು ಪ್ರತಿಭಟಿಸುತ್ತಿದ್ದಾರೆ.  ಬೆಳಿಗ್ಗೆ 9 ರಿಂದ ಆನಂದ ರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಸಭೆ ಸೇರಿದ ಮಾಧ್ಯಮ ಪ್ರಧಿನಿಧಿಗಳು ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಎಲ್ಲಾ ದೃಶ್ಯ ಮಾಧ್ಯಗಳ ಪ್ರತಿನಿಧಿಗಳು ಭಾಗವಹಿಸಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights