ಭಾರತದಲ್ಲಿ ಒಂದೇ ದಿನಕ್ಕೆ 75,083 ಕೊರೊನಾ ಕೇಸ್ : 1,053 ಸೋಂಕಿತರು ಸಾವು!

ಭಾರತದಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 75,083 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಂತೆಯೇ 1,053 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿಯಿಂದ ತಿಳಿದುಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಈವರೆಗೆ ಒಟ್ಟು  55,62,664 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 88,935 ಸೋಂಕಿತರು ಸಾವನ್ನಪ್ಪಿದ್ದಾರೆ. 75,861 ಸಕ್ರಿಯ ಪ್ರಕರಣಗಳು ಮತ್ತು 44,97,868  ಬಿಡುಗಡೆಯಾದ ರೋಗಿಗಳು ಸೇರಿದ್ದಾರೆ. ಭಾರತ ಕಳೆದ 24 ಗಂಟೆಗಳಲ್ಲಿ 1,01,468 ಕೋವಿಡ್ -19 ರೋಗಿಗಳ ದಾಖಲೆಯ ಚೇತರಿಕೆ ಕಂಡಿದೆ.

ಕಳೆದ 24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ ಭಾರತ ಅತಿ ಹೆಚ್ಚು ಏಕದಿನ ಚೇತರಿಕೆ ದಾಖಲಿಸಿದೆ. ಇದರೊಂದಿಗೆ ಒಟ್ಟು ಚೇತರಿಕೆಯ ಸಂಖ್ಯೆ ಸುಮಾರು 45 ಲಕ್ಷ (44,97,867) ಆಗಿದೆ. ಇದರಿಂದಾಗಿ ಚೇತರಿಕೆ ಪ್ರಮಾಣ 80.86% ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇನ್ನೂ ಮಹಾರಾಷ್ಟ್ರ ಭಾರತದಲ್ಲಿ ಹೆಚ್ಚು ಪೀಡಿತ ರಾಜ್ಯವಾಗಿ ಮುಂದುವರೆದಿದೆ. ಪ್ರಸ್ತುತ 98,062 ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಕಾಯಿಲೆಯಿಂದಾಗಿ 8,023 ಸಾವುಗಳಲ್ಲದೆ ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಗುಣಪಡಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ.

78,836 ಸಕ್ರಿಯ ಮತ್ತು 5,41,319 ಗುಣಮುಖರಾದ ರೋಗಿಗಳನ್ನು ಹೊಂದಿರುವ ಆಂಧ್ರಪ್ರದೇಶವೂ ತೀವ್ರವಾಗಿ ಬಾಧಿತವಾಗಿದೆ. ರಾಜ್ಯದಲ್ಲಿ ಈವರೆಗೆ 5,359 ಜನರು ಈ ಕಾಯಿಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಕೋವಿಡ್ -19 ಗಾಗಿ ಸೆಪ್ಟೆಂಬರ್ 21 ರವರೆಗೆ ದೇಶಾದ್ಯಂತ 6,53,25,779 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 9,33,185 ಮಾದರಿಗಳನ್ನು ಸೋಮವಾರ ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights