ಭಾರತಕ್ಕೆ ಕೊರೊನಾ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇಲ್ಲ: AIIMS ನಿರ್ದೇಶಕ ರಣದೀಪ್ ಗುಲೇರಿಯಾ

ಕೊರೊನಾ ಮೂರನೇ ಅಲೆಯು ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇಲ್ಲ. ಆದರೆ, ಸೋಂಕು ಇನ್ನೂ ಮುಗಿದಿಲ್ಲದ ಕಾರಣ ಎಚ್ಚರಿಕೆ ಮತ್ತು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ದೆಹಲಿ AIIMS ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಹೇಳಿದ್ದಾರೆ.

“ಕೊರೊನಾ ಮೊದಲ ಮತ್ತು ಎರಡನೇ ಅಲೆಗಳಿಗೆ ಹೋಲಿಸಬಹುದಾದ ಕೋವಿಡ್ -19 ಮೂರನೇ ಅಲೆಯು ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಇದೆ. ಕಾಲಾನಂತರದಲ್ಲಿ ಸಾಂಕ್ರಾಮಿಕವು ಸ್ಥಳೀಯ ರೂಪವನ್ನು ತೆಗೆದುಕೊಳ್ಳುತ್ತದೆ. ನಾವು ಕೊರೊನಾ ಪ್ರಕರಣಗಳನ್ನು ಎದುರಿಸುವುದು ಮುಂದುವರೆಯುತ್ತದೆ. ಆದರೆ, ಅದರ ತೀವ್ರತೆಯು ಕಡಿಮೆಯಾಗುತ್ತದೆ” ಎಂದು ಡಾ. ಗುಲೇರಿಯಾ ಹೇಳಿದ್ದಾರೆ.

ಭಾರತಕ್ಕೆ ಈ ಸಮಯದಲ್ಲಿ ಬೂಸ್ಟರ್ ಡೋಸ್ ಅಗತ್ಯವಿಲ್ಲ. ಲಸಿಕೆಗಳು ಇನ್ನೂ ಕೊರೊನಾ ವೈರಸ್ ವಿರುದ್ಧ ಜನರನ್ನು ರಕ್ಷಿಸುತ್ತಿವೆ. ಲಸಿಕೆ ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್ ಅಗತ್ಯವಿಲ್ಲ ಎಂದು ಎಂದು ಡಾ ಗುಲೇರಿಯಾ ಹೇಳಿದ್ದಾರೆ.

ಇದನ್ನೂ ಓದಿ: AY 4.2 ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿಯಲ್ಲ; ಆದರೂ ಇರಲಿ ಎಚ್ಚರ: ವೈದ್ಯಕೀಯ ತಜ್ಞರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights