ಅಪ್ತಾಪ್ತರ ಜೊತೆಗಿನ ‘ಮೌಖಿಕ ಲೈಂಗಿಕತೆ’ಯು  ಗಂಭೀರ ಲೈಂಗಿಕ ದೌರ್ಜನ್ಯವಲ್ಲ: ಅಲಹಾಬಾದ್ ಹೈಕೋರ್ಟ್‌

ಅಪ್ರಾಪ್ತ ವಯಸ್ಕರೊಂದಿಗಿನ ‘ಮೌಖಿಕ ಲೈಂಗಿಕತೆ’ಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಲ್ಲಿ ‘ಗಂಭೀರ ಲೈಂಗಿಕ ದೌರ್ಜನ್ಯ’ ಅಪರಾಧದ ಅಡಿಯಲ್ಲಿ ಬರುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, 10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಯ ಜೈಲು ಶಿಕ್ಷೆಯನ್ನು ಕಡಿತಗೊಳಿಸಿದೆ.

ಅಪರಾಧಿಗೆ ವಿಶೇಷ ಸೆಷನ್ಸ್ ನ್ಯಾಯಾಲಯವು ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಪರಾಧಿ ಸೋನು ಕುಶ್ವಾಹಾ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ್ ಕುಮಾರ್ ಅವರ ಏಕಸದಸ್ಯ ಪೀಠವು ನವೆಂಬರ್ 20 ರಂದು ತೀರ್ಪು ಪ್ರಕಟಿಸಿದ್ದು, ಆತನಿಗೆ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ.

2018 ರಲ್ಲಿ, ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ನಿವಾಸಿಯೊಬ್ಬರು ತಮ್ಮ 10 ವರ್ಷದ ಮಗನನ್ನು ಕುಶ್ವಾಹಾ ಪೂಜಾ ಸ್ಥಳಕ್ಕೆ ಕರೆದೊಯ್ದು “ಮೌಖಿಕ ಸಂಭೋಗ”ಕ್ಕೆ ಒತ್ತಾಯಿಸಿದ್ದ ಎಂದು ಆರೋಪಿಸಿದ್ದರು.

ಝಾನ್ಸಿಯ ವಿಶೇಷ ಸೆಷನ್ಸ್ ನ್ಯಾಯಾಲಯವು POCSO ಕಾಯಿದೆ, 2012ರ ಸೆಕ್ಷನ್ 6ರ ಜೊತೆಗೆ IPC ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಕುಶ್ವಾಹಾಗೆ ಶಿಕ್ಷೆ ವಿಧಿಸಿತ್ತು.

ಆದಾಗ್ಯೂ, ಮೌಖಿಕ ಲೈಂಗಿಕತೆಯು ಗಂಭೀರ ಲೈಂಗಿಕ ದೌರ್ಜನ್ಯ ಅಪರಾಧದ ಅಡಿಯಲ್ಲಿ ಬರುವುದಿಲ್ಲವಾದ್ದರಿಂದ ಅಪರಾಧಿಯ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಆರೋಪ ಹೊರಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

“ಇದು ಪೋಕ್ಸೊ ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷಾರ್ಹವಾಗಿರುವ ಲೈಂಗಿಕ ದೌರ್ಜನ್ಯವಾಗಿದೆ. ಹೀಗಾಗಿ, ಅದು ಪೋಕ್ಸೊ ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಬರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕಾರಣ ಯಾರು ಎಂದು ಹೇಳಲು ಭಯವಾಗುತ್ತಿದೆ; ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಬಾಲಕಿ ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights