ಕೋವಿಡ್ ಮಾತ್ರೆಗಳು ಭರವಸೆ ನೀಡುತ್ತವೆ; ಆದರೆ, ಅವುಗಳ ಉಪಯುಕ್ತತೆ ಇನ್ನೂ ಅನಿಶ್ಚಿತ!

ಕೊರೊನಾ 3ನೇ ಅಲೆಯು ವಿವಿಧ ದೇಶಗಳನ್ನು ಬಾಧಿಸುತ್ತಿದೆ. ಹಲವು ದೇಶಗಳು ಬೂಸ್ಟರ್‌ ಡೋಸ್‌ ನೀಡಲು ಮುಂದಾಗಿವೆ. ಭಾರತದಲ್ಲಿಯೂ ಬೂಸ್ಟರ್‌ ಡೋಸ್‌ ನೀಡಬೇಕೇ – ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಇದೇ ವೇಳೆ, ಕೋವಿಡ್‌ ಮಾತ್ರಗಳ ಉಪಯುಕ್ತತೆ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುತ್ತಿವೆ. ಕೊರೊನಾ ಸೋಂಕನ್ನು ನಿಭಾಯಿಸಲು ಕೋವಿಡ್‌ ಮಾತ್ರಗಳು ಉಪಯುಕ್ತ ಎಂದು ಹೇಳಲಾಗುತ್ತಿದ್ದರೂ, ಅವುಗಳ ಬಗ್ಗೆ ಆರೋಗ್ಯ ತಜ್ಞರು ಸಂಶಯ ಹೊಂದಿದ್ದಾರೆ. ಸದ್ಯ, ಫೈಜರ್‌ ಕಂಪನಿಯ ಪ್ಯಾಕ್ಸಾಲೋವಿಡ್‌ ಮತ್ತು ಮೆರ್ಕ್‌ನ ಮೊಲ್ನುಪಿರಾವಿರ್ ಮಾತ್ರಗಳು ಕೊರೊನಾ ಚಿಕಿತ್ಸೆಗೆ ಆಂಟಿವೈರಲ್ ಔಷಧಿಗಳಾಗಿವೆ. ಇವುಗಳನ್ನು, ರೋಗಿಗಳು ಮನೆಯಲ್ಲಿಯೇ ತೆಗೆದುಕೊಳ್ಳಬಹುದು ಎಂದು ಕಂಪನಿಗಳು ಹೇಳಿವೆ.

“ಸೋಂಕು ಹಿಡಿತಕ್ಕೆ ಬರುವ ಮೊದಲು, ಹೆಚ್ಚು ಪರಿಣಾಮಕಾರಿಯಾಗಿರಲು ಆಂಟಿವೈರಲ್‌ಗಳನ್ನು ಸಾಧ್ಯವಾದಷ್ಟು ಬೇಗ ನೀಡಬೇಕಾಗುತ್ತದೆ. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಬಳಸುವ ಮೊನೊಕ್ಲೋನಲ್ ಮಾತ್ರೆಗಳು ಆಂಟಿಬಾಡೀಸ್‌ಗಳಂತೆಯೇ ತಂತ್ರವನ್ನು ಬಳಸುತ್ತವೆ. ಪ್ರಆಂಟಿಬಾಡೀಸ್‌ಗಳನ್ನು ಈಗ IV ದ್ರವದ ರೂಪದಲ್ಲಿ ಬಳಸಲಾಗುತ್ತಿದೆ. ಇದನ್ನು ಪಡೆಯಲು ಆಸ್ಪತ್ರೆಗೆ ಹೋಗಬೇಕಾಗುತ್ತದೆ ಮತ್ತು ದುಬಾರಿಯಾಗಿದೆ. ಕೊರೊನಾ ಸೋಂಕು ದೃಢಪಟ್ಟ ಅಥವಾ ಕೊರೊನಾ ಲಕ್ಷಗಳು ಕಾಣಿಸಿಕೊಂಡ ಮೊದಲ ದಿನಗಳಲ್ಲೇ ಕೋವಿಡ್ ಮಾತ್ರೆಗಳನ್ನು ತೆಗೆದುಕೊಂಡರೆ, ದೇಹದಲ್ಲಿ ಸೋಂಕಿನ ಉಲ್ಬಣವನ್ನು ತಡೆಯಬಹುದು ಮತ್ತು ಆಸ್ಪತ್ರೆಗೆ ಸೇರುವುದನ್ನು ನಿಯಂತ್ರಿಸಬಹುದು ಎಂದು ಕಂಪನಿಗಳು ಹೇಳಿವೆ.

‘ಮಾತ್ರೆಗಳಿಂದ ವೈರಸ್‌ನ ಉಲ್ಬಣಗೊಳ್ಳುವಿಕೆಯನ್ನು ಕಡಿಮೆ ಮಾಡಬಹುದು’ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ.ಅನುಪ್ ಆರ್ ವಾರಿಯರ್ ಹೇಳಿದ್ದಾರೆ. ಯುಕೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಅನುಮೋದಿಸಲಾದ ಮೊದಲ ಕೋವಿಡ್ ವಿರೋಧಿ ಮಾತ್ರೆಯಾಗಿರುವ ಮೊಲ್ನುಪಿರಾವಿರ್‌ನ ಕ್ಲಿನಿಕಲ್ ಡೇಟಾವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಪರಿಶೀಲಿಸುತ್ತಿದೆ. ಪ್ರಸ್ತುತ, ಕೊರೊನಾ ಮಾತ್ರೆಗಳ ಬಳಕೆಯನ್ನು ಅನುಮೋದಿಸುವ ಏಕೈಕ ರಾಷ್ಟ್ರ ‘ಯುಕೆ’ಯಾಗಿದೆ. ಕೋವಿಡ್‌ನ ಆಂಟಿವೈರಲ್ ಮಾತ್ರೆಯು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣವನ್ನು ಸುಮಾರು 90% ರಷ್ಟು ಕಡಿತಗೊಳಿಸಿದೆ ಎಂದು ಫಿಜರ್ ಕಂಪನಿ ಹೇಳಿಕೊಂಡಿದೆ. ಆದರೆ, “ಕಂಪನಿಗಳು ನಡೆಸಿದ ಪ್ರಯೋಗಗಳ ಸಂಪೂರ್ಣ ಡೇಟಾವನ್ನು ಇನ್ನೂ ಪ್ರಕಟಿಸಿಲ್ಲ”.

ಇದನ್ನೂ ಓದಿ: ಕೊರೊನಾದಿಂದ ಬಡತನ, ನಿರುದ್ಯೋಗ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 850 ಜನರು ಆತ್ಮಹತ್ಯೆ

ಆದ್ದರಿಂದ, ಈ ಹಂತದಲ್ಲಿ, ನಾವು ಮಾತ್ರೆಗಳನ್ನು ಸಂಪೂರ್ಣವಾಗಿ ಅವಲಂಬಿಸಲಾಗುವುದಿಲ್ಲ. ಮಾತ್ರೆಗಳು HIV ಔಷಧಿಗಳಂತೆಯೇ ಇರುತ್ತವೆ. ಆದ್ದರಿಂದ, ಯಕೃತ್ತಿ (ಲಿವರ್‌)ನ ಅಪಸಾಮಾನ್ಯ ಕ್ರಿಯೆಯನ್ನು ನಾವು ಮೇಲ್ವಿಚಾರಣೆ ಮಾಡಬೇಕಾಗಬಹುದು. ಏಕೆಂದರೆ, ಇವುಗಳು ಅಂಗಾಂಗಗಳ ಮೇಲೆ ಸೌಮ್ಯವಾದ ಪರಿಣಾಮವನ್ನು ಬೀರುತ್ತವೆ. ಹೀಗಾಗಿ, ಇದು ಗೇಮ್ ಚೇಂಜರ್ ಎಂದು ನಾವು ನಂಬುವುದಿಲ್ಲ ಎಂದು ಕೊಚ್ಚಿ ಮೂಲದ ಶ್ವಾಸಕೋಶಶಾಸ್ತ್ರಜ್ಞ ಡಾ ಮೋನು ವರ್ಗೀಸ್ ಹೇಳಿದ್ದಾರೆ.

ಈ ಹಿಂದೆ, ಲೋಪಿನಾವಿರ್ ಮತ್ತು ರಿಟೊನಾವಿರ್ – ಎಚ್‌ಐವಿ ಚಿಕಿತ್ಸೆಗಾಗಿ ಬಳಸಲಾಗುವ ಆಂಟಿವೈರಲ್ ಔಷಧಗಳನ್ನು ಕೋವಿಡ್ ರೋಗಿಗಳಿಗೆ ಬಳಸಲಾಗುತ್ತಿತ್ತು. ಆದರೆ, ಅದು ಪರಿಣಾಮಕಾರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬೂಸ್ಟರ್ ಡೋಸ್‌ಗಳು ಮತ್ತು ಕೋವಿಡ್ ಮಾತ್ರೆಗಳಿಗಿಂತ ಹೆಚ್ಚಾಗಿ ನಾವು ಕೋವಿಡ್ ವ್ಯಾಕ್ಸಿನೇಷನ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು. ಲಸಿಕೆಯನ್ನು ಇನ್ನೂ ತೆಗೆದುಕೊಳ್ಳದವರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಸಿಕೆ ಅಭಿಯಾನಗಳನ್ನು ಮತ್ತು ಕ್ರಮಗಳನ್ನು ತಳಮಟ್ಟದಿಂದಲೇ ಬಲಪಡಿಸಬೇಕು ಎಂದು ಡಾ. ಮೋನು ವರ್ಗೀಸ್‌ ತಿಳಿಸಿದ್ದಾರೆ.

“ಬಹುಶಃ, ದೀರ್ಘಾವಧಿಯಲ್ಲಿ ಮಾತ್ರೆಗಳು ಪ್ರಮುಖ ಪಾತ್ರವನ್ನು ವಹಿಸಬಹುದು. ಏಕೆಂದರೆ, ಭವಿಷ್ಯದಲ್ಲಿ ಇದು ಅಗ್ಗವಾಗಬಹುದು ಮತ್ತು ಸುಲಭವಾಗಿ ದೊರೆಯಬಹುದು” ಎಂದೂ ಅವರು ಹೇಳಿದ್ದಾರೆ.

ಆದಾಗ್ಯೂ, ಈ ಔಷಧಿಗಳು ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ನಂಬುವ ತಜ್ಞರೂ ಇದ್ದಾರೆ. ವಿಶೇಷವಾಗಿ, ಸೋಂಕಿನ ಆರಂಭಿಕ ಹಂತಗಳಲ್ಲಿ ಹೆಚ್ಚಿನ ಅಪಾಯದಲ್ಲಿರುವವರು, “ಕೋವಿಡ್ ಅನೇಕರ ಜೀವನವನ್ನು ಕಾಡುತ್ತಲೇ ಇದೆ. ಕೋವಿಡ್‌ ವಿರುದ್ದ ನೀಡಲಾಗುತ್ತಿರುವ ಲಸಿಕೆಗಳ ಜೊತೆಗೆ ಬೂಸ್ಟರ್ ಡೋಸ್‌ಗಳು ಮೂರನೇ ಅಲೆಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡಬಹುದು” ಎಂದು ಹೇಳುತ್ತಾರೆ.

ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವ ಕೊರೊನಾ ರೋಗಿಗಳಲ್ಲಿ ಮಾತ್ರೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮಾತ್ರೆಗಳು ರೋಗದ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡುವ ಮೂಲಕ ಉತ್ತಮ ಪರಿಹಾರವನ್ನು ನೀಡುತ್ತವೆ ಎಂದು ಎರ್ನಾಕುಲಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಾಮಾನ್ಯ ಔಷಧ ವಿಭಾಗದ ಪ್ರಾಧ್ಯಾಪಕರು ಹೇಳಿದ್ದಾರೆ.

ಇದನ್ನೂ ಓದಿ: ವಿವಿಧ ದೇಶಗಳಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ; ಭಾರತದಲ್ಲಿ ಕೊರೊನಾ 3ನೇ ಅಲೆ ಮುನ್ಸೂಚನೆ?!

Spread the love

Leave a Reply

Your email address will not be published. Required fields are marked *