ದೇಶದಲ್ಲಿ ಕೊರೊನಾ ರಣಕೇಕೆ : ಒಂದೇ ದಿನ 4 ಲಕ್ಷ ಕೇಸ್ : 3,523 ಬಲಿ!

ದೇಶದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು ಕಳೆದ 24 ಗಂಟೆಯಲ್ಲಿ 4 ಲಕ್ಷ ಕೇಸ್ ದಾಖಲಾಗಿವೆ. 3,523 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ಕೊರೋನವೈರಸ್ ಪರಿಸ್ಥಿತಿ ಭೀಕರವಾಗಿದೆ. ಭಾರತವು ಶನಿವಾರ 24 ಗಂಟೆಗಳ ಅವಧಿಯಲ್ಲಿ 4,01,993 ಹೊಸ ಪ್ರಕರಣಗಳನ್ನು ಕಂಡಿದೆ. ಇದುವರೆಗಿನ ಏಕದಿನದ ಗರಿಷ್ಠ ಏರಿಕೆ ಇದಾಗಿದೆ.

ದಿನದಿಂದ ದಿನಕ್ಕೆ ಕೊರೊನಾ 2ನೇ ಅಲೆ ವೇಗವಾಗಿ ಹರಡುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು ಒಂದೇ ದಿನ 4 ಲಕ್ಷ ಕೇಸ್ ದಾಖಲಾಗಿದ್ದು 3,523 ಸೋಂಕಿತರು ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 2,11,853 ಕ್ಕೆ ತಲುಪಿದೆ. ಸುಮಾರು 1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತ, ಕೋವಿಡ್ -19 ಸೋಂಕಿನಿಂದ 200,000 ಸಾವುಗಳನ್ನು ದಾಟಿದ ನಾಲ್ಕನೇ ಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಮತ್ತು ಮೆಕ್ಸಿಕೊ ನಂತರ ಸ್ಥಾನದಲ್ಲಿವೆ.

18 ರಿಂದ 45 ರ ನಡುವಿನ ವ್ಯಾಕ್ಸಿನೇಷನ್ ಡ್ರೈವ್ನ ಮೂರನೇ ಹಂತವು ಇಂದು ದೇಶದೆಲ್ಲೆಡೆ ಪ್ರಾರಂಭವಾಗುತ್ತದೆ. ಆದರೆ ಲಸಿಕೆ ಕೊರತೆಯಿಂದಾಗಿ ಬಹುತೇಕ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭಗೊಂಡಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights