FACT CHECK | ಬೆಂಗಳೂರಿನ ಜಯನಗರದಲ್ಲಿ ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ ಡಿ.ಕೆ. ಸಹೋದರರದ್ದು ಎಂದು ಸುಳ್ಳು ವಿಡಿಯೋ ಹಂಚಿಕೆ

ಇತ್ತೀಚೆಗೆ ಜಯನಗರದಲ್ಲಿ ವಶಪಡಿಸಿಕೊಂಡ ಅನಧಿಕೃತ ಹಣ ಮತ್ತು ವಾಹನಗಳು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಅವರಿಗೆ ಸಂಬಂಧಿಸಿದ್ದು ಎಂದು “ಬೆಂಗಳೂರಿನ ಜಯನಗರದಲ್ಲಿ ಡಿಕೆ ಸಹೋದರರ ಹಣವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.” ಎಂಬ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವುದರಿಂದ ಜನರಿಗೆ ಹಣ ಹಂಚಿ ಮತ ಪಡೆಯುವುದನ್ನು ತಪ್ಪಿಸುವ ಸಲುವಾಗಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ವಹಿಸಿದ್ದು ಎಲ್ಲಾ ಮುಖ್ಯ ರಸ್ತೆಗಳಲ್ಲಿಯೂ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಮತ್ತು ಹಲವು ಕಡೆ ಅನಧಿಕೃತ ಹಣ ಸಾಗಾಟವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವುದು ವರದಿಯಾಗುತ್ತಿದೆ. ಹಾಗಿದ್ದರೆ ಸಾಮಾಜಿಕ ಮಾಧಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್  :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮಧಯಮಗಳಲ್ಲಿ ಪ್ರಕಟಗೊಂಡ ವರದಿಗಳನ್ನು ಸರ್ಚ್ ಮಾಡಿದಾಗ, ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರದಲ್ಲಿ 13 ಏಪ್ರಿಲ್ 2024ರಂದು ಎರಡು ಕಾರು ಮತ್ತು ಒಂದು ಬೈಕಿನಲ್ಲಿ ಸಾಗಿಸುತ್ತಿದ್ದ ಸುಮಾರು 1.40 ಕೋಟಿಯಷ್ಟು ಹಣವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಮತ್ತು ಈ ಸಂಬಂಧ ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದಷ್ಟೆ ವರದಿಯಾಗಿದೆ.

ಈ ಕುರಿತು ಟಿವಿ 9 ಕನ್ನಡಪಬ್ಲಿಕ್ ಟಿವಿಟಿವಿ 5 ಕನ್ನಡ, ಸೇರಿದಂತೆ ಕನ್ನಡದ ಬಹುತೇಕ ಮಾಧ್ಯಮಗಳು ವರದಿ ಮಾಡಿದ್ದು ಎಲ್ಲಿಯೂ ಈ ಹಣ ಡಿಕೆ ಸಹೋದರಿಗೆ ಸೇರಿದದ್ದು ಎಂದು ಹೇಳಿಲ್ಲ. ಆದರೆ ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಇದು ಬಿಜೆಪಿಗರ ಕಪ್ಪು ಹಣ ಎಂದರೆ ಬಿಜೆಪಿ ಅಭ್ಯರ್ಥಿ ಮತ್ತು ಸಂಸದ ತೇಜಸ್ವಿ ಸೂರ್ಯ ಇದು ಕಾಂಗ್ರೆಸ್ಸಿಗರ ಹಣ ಎಂದು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಆದರೆ ತನಿಖೆಯ ಬಳಿಕ ಪೋಲೀಸರೇ ಸತ್ಯಾಂಶ ತಿಳಿಸಬೇಕಿದೆ. ಆದ್ದರಿಂದ ಸಧ್ಯ ಜಯನಗರದಲ್ಲಿ ಡಿಕೆ ಸಹೋದರರ ಕೋಟಿ ಕೋಟಿ ಹಣ ವಶ ಎಂದು ಬಿಜೆಪಿ ಬೆಂಬಲಿಗರು ಮಾಡಿರುವ ಆರೋಪಕ್ಕೆ ಆಧಾರಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪೋಲೀಸ್ ಆಗಲೀ, ಚುನಾವಣಾ ಅಧಿಕಾರಿಗಳೇ ಆಗಲಿ ವಶಪಡಿಸಿಕೊಂಡಿರುವ ಹಣ ಡಿಕೆ ಸಹೋದರರಿಗೆ ಸಂಬಂಧಿಸಿದ್ದು ಎಂದು ಹೇಳಿಲ್ಲ. ಹಾಗಾಗಿ ಇದೊಂದು ಆಧಾರರಹಿತ ಆರೋಪ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ರವರ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights