ನಾನು ದೇಶಕ್ಕಾಗಿ ಯುದ್ದ ಮಾಡಿದೆ; ಆದರೆ ಈ ವ್ಯವಸ್ಥೆ ನನ್ನ ಮಗನನ್ನು ರಕ್ಷಿಸಲಿಲ್ಲ: ಕಾರ್ಗಿಲ್‌ ಯೋಧನ ಆಕ್ರಂದನ

ನಾನು 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕಾರ್ಗಿಲ್‌ ಯುದ್ಧದಲ್ಲಿ ಹೋರಾಟ ಮಾಡಿದ್ದೇನೆ. ಆದರೆ, ಈ ವ್ಯವಸ್ಥೆ ಕೊರೊನಾದಿಂದ ನನ್ನ ಮಗನನ್ನು ಉಳಿಸಿಕೊಡಲಿಲ್ಲ ಎಂದು ಉತ್ತರ ಪ್ರದೇಶದ ಮೂಲದ ನಿವೃತ್ತ ಯೋಧ ತಮ್ಮ ಮಗನನ್ನು ಕಳೆದುಕೊಂಡು ಅಸಹಾಯಕತೆಯಿಂದ ಅಳಲು ತೋಡಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರದೇಶಗಳಲ್ಲಿ ಕಾನ್ಪುರವೂ ಒಂದಾಗಿದೆ. ಕಾನ್ಪುರದ ನಿವಾಸಿಯಾದ ಕಾರ್ಗಿಲ್ ಯುದ್ಧದ ವೀರ ಸುಬೇದಾರ್ ಮೇಜರ್ ದುಬೆಯವರ 31 ವರ್ಷದ ಮಗ ಹರಿರಾಮ್ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಮಾಜಿ ಯೋಧ ತಮ್ಮ ಮಗನ ಮೃತದೇಹವನ್ನು ಕೊನೆಯ ಬಾರಿ ನೋಡುವುದಕ್ಕಾಗಿ ಸುಡುವ ಬಿಸಿಲಿನಲ್ಲಿ ಆಸ್ಪತ್ರೆಯ ಮುಂದೆ ಗಂಟೆಗಟ್ಟಲೆ ಕಾಯಬೇಕಾಯಿತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

“ನಾನು 1981ರಿಂದ 2011ರವರೆಗೆ ನನ್ನ ತಾಯಿನಾಡಿಗೆ ಸೇವೆ ಸಲ್ಲಿಸಿದ್ದೇನೆ. ಕಾರ್ಗಿಲ್ ಯುದ್ಧದ ವೇಳೆ ಭಾಗಿಯಾಗಿದ್ದೇನೆ. ನಂತರ ಬಾರಾಮುಲ್ಲಾ, ಲಡಾಖ್ ಮತ್ತು ಲುಕುಂಗ್ಗೆ ಪ್ರದೇಶಗಳಲ್ಲಿ ಹೋರಾಡಿದ್ದೇನೆ. ನಾನು ಬಾರಾಮುಲ್ಲಾದಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇನೆ ಮತ್ತು ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದೆ. ಆದರೆ ಈ ದೇಶದ ವ್ಯವಸ್ಥೆಗೆ ನನ್ನ ಮಗನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮಂಗಳವಾರ ಸಂಜೆ ಕೋವಿಡ್‌ನಿಂದ ನಿಧನರಾದ ಮಗ ಅಮಿತಾಬ್ ನೆನೆದು ದುಃಖಿತರಾದರು.

ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕ ಸಿಲಿಂಡರ್‌ಗಳಿಗಾಗಿ ಹೆಣಗಾಡುತ್ತಿರುವ ನಗರದಾದ್ಯಂತದ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿವೆ. ಮೃತ ರೋಗಿಗಳ ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರ ಮೃತ ದೇಹಗಳನ್ನು ನೋಡಲು ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ.

ಕಾನ್ಪುರದ ಭೈರವಘಾಟ್ ಪ್ರದೇಶದಲ್ಲಿನ ಸ್ಮಶಾನವನ್ನು ನೋಡಿದರೆ ಪರಿಸ್ಥಿತಿಯ ಭೀಕರತೆ ಅರ್ಥವಾಗುತ್ತದೆ. ಜನರ ಯಾತನೆ ಈಗ ಕೋಪಕ್ಕೆ ತಿರುಗಿದೆ. ದೇಶಕ್ಕೆ ಸೇವೆ ಸಲ್ಲಿಸಿದ ಅನುಭವಿಗಳು ಸಹ ಅಸಹಾಯಕರಾಗಿದ್ದಾರೆ.

ಇನ್ನೂ ಒಂದು ಸೈನಿಕ ಕುಟುಂಬದ ಅಸಹಾಯಕತೆ…

‘ನಾನು ಶ್ರೀನಗರದಲ್ಲಿ ಸೇವೆ ಸಲ್ಲಿಸಿದ್ದೇನೆ, ಯಾರೂ ನನ್ನ ತಂಗಿಯನ್ನು ನೋಡಿಕೊಳ್ಳಲಿಲ್ಲ’ ಎಂದು ಕಾನ್ಪುರದ ನಿವಾಸಿ ಚಂದ್ರಪಾಲ್ ಹೇಳಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಹಾಯಕ ಕಮಾಂಡೆಂಟ್ ಆಗಿ ಕೆಲಸ ಮಾಡಿ ಅವರು ನಿವೃತ್ತರಾಗಿದ್ದಾರೆ. ಕೋವಿಡ್ ಪೀಡಿತ ಅವರ ಸಹೋದರಿ ಸಾವಿತ್ರಿ ಬುಧವಾರ ಬೆಳಿಗ್ಗೆ ನಿಧನರಾದರು.

ವಾರ್ಡ್ ಹುಡುಗರು ತಮ್ಮ ಸಹೋದರಿಯ ನಿಧನದ ಬಗ್ಗೆ ಮಾಹಿತಿ ನೀಡಿದರು ಎಂದು ನಿವೃತ್ತ ಸೈನಿಕ ಹೇಳುತ್ತಾರೆ.

ಚಂದ್ರಪಾಲ್ ಅವರ ಕುಟುಂಬ ಸದಸ್ಯ ರಾಮಚಂದ್ರ ಕೂಡ ನಿವೃತ್ತ ಸೈನಿಕ. ಉಸಿರಾಟದ ತೊಂದರೆಯಿಂದಾಗಿ ಕುಟುಂಬವು ಏಪ್ರಿಲ್ 22 ರಂದು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಸಾವಿತ್ರಿ ಅವರನ್ನು ಕರೆತಂದಿತ್ತು ಎಂದು ಇಂಡಿಯಾ ಟುಡೆ ಟಿವಿಗೆ ತಿಳಿಸಿದರು.

“ಸಾವಿತ್ರಿ ಅವರನ್ನು ಹ್ಯಾಲೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಯೋಗಕ್ಷೇಮದ ಬಗ್ಗೆ ಯಾರಿಂದಲೂ ಮಾಹಿತಿ ಸಿಗಲಿಲ್ಲ. ನಾನು ಶ್ರೀನಗರದಲ್ಲಿ ಸೇವೆ ಸಲ್ಲಿಸಿದ್ದೇನೆ ಆದರೆ ಯಾರೂ ನನ್ನ ತಂಗಿಯನ್ನು ನೋಡಿಕೊಳ್ಳಲಿಲ್ಲ. ಅವರು ನಿಧನರಾದರು ಎಂದು ನಮಗೆ ಇಂದು ತಿಳಿದುಬಂದಿದೆ” ಎಂದು ರಾಮಚಂದ್ರ ಹೇಳಿದರು.
ಮಹಿಳೆಯ ದುಃಖಿತ ಮಗ, ಆಮ್ಲಜನಕದ ಮಟ್ಟವು ತೀವ್ರವಾಗಿ ಕುಸಿಯಿತು ಮತ್ತು ತಾಯಿಯನ್ನು ಬೈಪಾಪ್ (ಬಿಲೆವೆಲ್ ಪಾಸಿಟಿವ್ ಏರ್‌ವೇ ಪ್ರೆಶರ್) ನಲ್ಲಿ ಇರಿಸಲಾಗಿದೆ ಎಂದು ಹೇಳಿದರು. ಆದರೆ ಯಾವುದೂ ನೆರವಾಗಲಿಲ್ಲ ಎಂದರು.

ಇದನ್ನೂ ಓದಿ: ಅದು ಹೃದಯವಲ್ಲ ಕಲ್ಲು; ಸರ್ಕಾರಕ್ಕೆ ಜನರ ಮೇಲೆ ಪ್ರೀತಿಯಿಲ್ಲ: ಮೋದಿ ಸರ್ಕಾರದ ವಿರುದ್ದ ರಾಹುಲ್‌ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights