ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು ಚಾಮುಂಡಿ ವರವೇ ಕಾರಣ…

ಸಿಎಂ ಯಡ್ಯೂರಪ್ಪನವರ ಹುಟ್ಟೂರು ಮಂಡ್ಯ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಬಿಜೆಪಿ ತನ್ನ ಬಾವುಟ ಹಾರಿಸಿ, ಕೆ.ಆರ್.ಪೇಟೆ ಗೆಲುವಿನೊಂದಿಗೆ ಕಮಲ ಅರಳಿಸಿದೆ. ಈ ಗೆಲುವಿನ ಹಿಂದೆ ನಾಡದೇವಿ ಚಾಮುಂಡಿಗೆ ಕಟ್ಟಿದ್ದ ಹರಕೆ ಹಾಗೂ ಗೆಲುವಿನ ಹಿಂದೆ ಶಕ್ತಿದೇವತೆಯ ವರವೇ ಕಾರಣ ಅನ್ನೋ ಮಾಹಿತಿ ಇದೀಗ ಬಹಿರಂಗವಾಗಿದೆ. ರಾಜಕಾರಣಿಗಳು ದೇವರಮೋರೆ ಹೋಗೋದು ಹಾಗೂ ಚುನಾವಣಾ ಸಂದರ್ಭದಲ್ಲಿ ಟೆಂಪಲ್ ರನ್ ಮಾಡೋದು ಸಹಜ. ಅದೆ ರೀತಿ ಕೆ.ಆರ್.ಪೇಟೆ ಜೆಡಿಎಸ್‌ ಶಾಸಕನಾಗಿದ್ದ ಕೆ.ಸಿ.ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೆ ಒಳಗಾದಾಗ ಅವರಿಗೆ ನೆನಪಾಗಿದ್ದು ನಾಡದೇವತೆ ಚಾಮುಂಡೇಶ್ವರಿ.

ಅಂದು ತನ್ನ ಅನರ್ಹತೆ ಶಿಕ್ಷೆಯಿಂದ ಪಾರಗಲು ಹಾಗೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವ ವಿಚಾರವಾಗಿ ಭಯದಲ್ಲಿದ್ದ ಕೆ.ಸಿ.ನಾರಾಯಣಗೌಡ, ತನ್ನ ಕಷ್ಟದಿಂದ ಪಾರಾಗಲು ಚಾಮುಂಡಿ ಬಳಿ ಹರಕೆ ಕಟ್ಟಿಕೊಂಡರಂತೆ. ಆ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆಯೊಂದಿಗೆ ಹರಕೆ ಮಾಡಿಕೊಂಡಿದ್ದ ನಾರಾಯಣಗೌಡ, ತನಗೆ ಬಂದಿರುವ ಕಷ್ಟ ನಿವಾರಣೆಯಾಗಿ ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದರೆ ನಿನ್ನ ಸೇವೆ ಮಾಡುವುದಾಗಿ ಹರಕೆ ಕಟ್ಟಿಕೊಂಡಿದ್ದರಂತೆ. ನಂಬಿದ ದೇವರು ಕೈಬಿಡೋದಿಲ್ಲ ಎಂದು ಉಪಚುನಾವಣೆ ಎದರಿಸಿದ್ದ ಕೆ.ಸಿ.ನಾರಾಯಣಗೌಡರಿಗೆ ಉಪಚುನಾವಣೆಯಲ್ಲಿ ನಿರೀಕ್ಷೆಗು ಮೀರಿದ ಫಲಿತಾಂಶ ಬಂದಿದ್ದು.

ಬಾವುಟ ಕಟ್ಟಲು ಜನರಿಲ್ಲದ ಊರಿನಲ್ಲಿ ಬಿಜೆಪಿಯ ಕಮಲವೇ ಅರಳುವಂತೆ ಆಗಿದೆ. ಇವೇಲ್ಲವು ತಾಯಿ ಚಾಮುಂಡಿ ಕೃಪೆಯಿಂದ ಆಗಿದ್ದು, ಅಂದುಕೊಂಡಂತೆ ಆಗಿದ್ದಕ್ಕೆ ಕಟ್ಟಿಕೊಂಡಿದ್ದ ಹರಕೆ ತೀರಿಸಿದ ನೂತನ ಶಾಸಕ ಕೆ.ಸಿ.ನಾರಾಯಣಗೌಡ ಚಾಮುಂಡಿ ಸನ್ನಿಧಿಗೆ ಬಂದು ಗೆಲುವಿಗೆ ಕಾರಣರಾದ ದೇವರಿಗೆ ನಮಸಿದ್ದಾರೆ. ಕುಟುಂಬ ಸಮೇತರಾಗಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಮೆಟ್ಟಲು ಹತ್ತಿ ಹರಕೆ ತೀರಿಸಿದ್ದಾರೆ.

101 ಇಡುಗಾಯಿ ಒಡೆದ್ರು, 1001 ಮೆಟ್ಟಿಲು ಹತ್ತಿದ್ರು, ಬೆಳ್ಳಿರಥ ಎಳೆದು ಹರಕೆ ತೀರಿಸಿದ್ರು.

ಹೌದು ಮನಸ್ಸಿನಲ್ಲಿ ಕಟ್ಟಿಕೊಳ್ಳುವ ಹರಕೆ ಈಡೇರಿದರೆ ಹರಕೆ ಕಟ್ಟಿಕೊಂಡಿದ್ದ ದೇವರಿಗೆ ಹರಿಕೆ ಈಡೇರಿಸೋದು ಪುರಾಣದಿಂದ ಬಂದ ಪ್ರತಿತಿ. ಅಂದುಕೊಂಡಂತೆ ಆಗಿದ್ದಕ್ಕೆ ಕೆ.ಆರ್.ಪೇಟೆ ನೂತನ ಬಿಜೆಪಿ ಶಾಸಕ ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ್ದಾರೆ. ಅಂದು ಮನಸ್ಸಿನಲ್ಲೆ ಕಟ್ಟಿಕೊಂಡಿದ್ದ ಹರಕೆಯನ್ನ ಇಂದು ಪತ್ನಿ ದೇವಕಿ ಜೊತೆ ಆಗಮಿಸಿ ಈಡೇರಿಸಿದ್ದು. ಇಂದು ಬೆಳಗ್ಗೆಯೇ ಚಾಮುಂಡಿಬೆಟ್ಟದ ತಪ್ಪಲಿಗೆ ಆಗಮಿಸಿ ಬೆಟ್ಟದ ಮೆಟ್ಟಿಲುಗಳ ಬಳಿ ಪೂಜೆ ಸಲ್ಲಿಸಿದ ನಾರಾಯಣಗೌಡ. ನಂತರ ಮೆಟ್ಟಿಲುಗಳ ಬಳಿಯೇ 101 ತೆಂಗಿನಕಾಯಿಯನ್ನ ಹೊಡೆದು ನಮಸ್ಕರಿಸಿದರು.

ನಂತರ ಬರಿಗಾಲಿನಲ್ಲಿ ಪತ್ನಿ ಹಾಗೂ ಆಪ್ತರ ಜೊತೆ 1001 ಮೆಟ್ಟಿಲುಗಳನ್ನ ಏರಿದ ನಾರಾಯಣಗೌಡ ಸಾಮಾನ್ಯ ಭಕ್ತರಂತೆ ಚಾಮುಂಡಿಯ ದರ್ಶನಕ್ಕೆ ಹಜ್ಜೆ ಹಾಕಿದ್ರು. ಮಾರ್ಗ ಮಧ್ಯೆ ಬೆಟ್ಟ ಮೇಲೆ ನಿಂತು ಮೈಸೂರು ನಗರ ನೋಡಿ ನಂತರ ಮೆಟ್ಟಿಲುಗಳ ಸಮೀಪ ಇರುವ ಬೃಹತ್‌ ನಂದಿ ವಿಗ್ರಹಕ್ಕು ಪೂಜೆ ಸಲ್ಲಿಸಿದರು. ಬೆಟ್ಟದ ಮೇಲೆ ತೆರಳುತ್ತಿದ್ದಂತೆ ಮಹಿಳೆಯೋಬ್ಬರು ಕಮಲ ನೀಡಿ ನಾರಾಯಣಗೌಡರನ್ನ ಬರಮಾಡಿಕೊಂಡರು. ನಂತರ ಚಾಮುಂಡೇಶ್ವರಿ ಉತ್ಸವಮೂರ್ತಿಯುಳ್ಳ ಬೆಳ್ಳಿರಥೋತ್ಸದಲ್ಲಿ ಭಾಗಿಯಾಗಿ, ಪತ್ನಿ ಸಮೇತ ಬೆಳ್ಳಿ ರಥ ಎಳೆದು ಚಾಮುಂಡಿಗೆ ನಮಿಸಿದರು.

ನಂತರ ದೇವಾಲಯದ ಮೂಲ ವಿಗ್ರಹದ ದರ್ಶನ ಮಾಡಿ, ವಿಶೇಷ ಪೂಜೆಯೊಂದಿಗೆ ಸಿಎಂ ಯಡ್ಯೂರಪ್ಪ ಹೆಸರಿನಲ್ಲಿ ಅರ್ಚನೆಯನ್ನು ಮಾಡಿಸಿದರು. ಎಲ್ಲವು ಅಂದುಕೊಂಡಂತೆ ನೆರವೇರಿದ್ದಕ್ಕೆ ನಾಡದೇವತೆಗೆ ಭಕ್ತಿಪೂರ್ವ ನಮಸ್ಕಾರ ಹಾಕಿದ ನಾರಾಯಣಗೌಡ ಮನಸ್ಸಿನಿಂದಲೇ ಚಾಮುಂಡಿಗೆ ಧನ್ಯವಾದ ಹೇಳಿದ್ರು. ಆದೇನೆ ಇದ್ದರು ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು ಚಾಮುಂಡಿ ವರವೇ ಕಾರಣವಾಗಿದ್ದು ನಿಜಕ್ಕು ಶಕ್ತಿದೇವತೆಯ ಪವಾಡವೇ ಸರಿ. ಚಾಮುಂಡಿಯನ್ನ ನಂಬಿದ್ದ ನಾರಾಯಣಗೌಡ ಇದೀಗ ದೇವಿಗೆ ಭಕ್ತನಾಗಿರೋದಂತು ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights