ಸರೋವರದಲ್ಲಿ 6 ತಿಂಗಳ ಮಗು ವೇಕ್‌ಬೋರ್ಡಿಂಗ್ ಮಾಡುವ ವೀಡಿಯೊ ವೈರಲ್..

ಸಣ್ಣ ಮಕ್ಕಳು ಏನು ಮಾಡಿದರೂ ಚಂದವೇ. ನಕ್ಕರು ಚಂದ, ಅತ್ತರೂ ಅಂದ. ಇನ್ನೂ ವಯಸ್ಸಿಗೆ ಮಿತಿಮೀರಿದ ಸಾಹಸಕ್ಕೆ ಕೈ ಹಾಕಿದರಂತೂ ಮನಸ್ಸಿಗೆ ಮತ್ತಷ್ಟು ಆನಂದವಾಗುತ್ತದೆ. ಇಂತದೊಂದು ಸಾಹಸದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂಬೇಗಾಲಿಡು ಆರು ತಿಂಗಳ ಮಗು ಉತಾಹ್‌ ಸರೋವರವೊಂದರಲ್ಲಿ ವೇಕ್‌ಬೋರ್ಡಿಂಗ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೋಟಾರು ದೋಣಿಯಲ್ಲಿ ತಂದೆ ಆ ಮಗುವಿಗೆ ಉತ್ಸಾಹ ನೀಡುತ್ತಿದ್ದರೆ, ಮಗು ವೇಕ್‌ಬೋರ್ಡ್‌ನಲ್ಲಿ ಸಲೀಸಾಗಿ ಸಮತೋಲನ ಸಾಧಿಸುವುದನ್ನು ವೀಡಿಯೊ ತೋರಿಸುತ್ತದೆ.ಈ ವೀಡಿಯೊವನ್ನು ಮೂಲತಃ ಅಂಬೆಗಾಲಿಡುವವರಿಗೆ ಮೀಸಲಾಗಿರುವ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಅವರ ಪೋಷಕರು ಮಿಂಡಿ ಮತ್ತು ಕ್ಯಾಸ್ಸಿ ಹಂಫ್ರೀಸ್ ಹಂಚಿಕೊಂಡಿದ್ದಾರೆ.

ವೀಡಿಯೊವನ್ನು ಇಲ್ಲಿ ನೋಡಿ:

https://www.instagram.com/richcaseyhumpherys/?utm_source=ig_embed

ವೀಡಿಯೊವನ್ನು ನೋಡಿದ ಅನೇಕರು ಪ್ರಭಾವಿತರಾಗಿದ್ದರೆ, ಇತರರು ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೋಡೋಣ:

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗಿನಿಂದ, ಈ ಪೋಸ್ಟ್‌ಗೆ 48,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, 300 ಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights